Advertisement

ತೈಲ ಸಚಿವರ ಸೋದರನ ಗ್ಯಾಸ್‌ ಏಜೆನ್ಸಿ ಮೇಲೆ ದಾಳಿ

03:45 AM Jan 16, 2017 | Team Udayavani |

ಭುವನೇಶ್ವರ: ಕೇಂದ್ರ ಪೆಟ್ರೋಲಿಯಂ ಖಾತೆ ಸಚಿವ ಧರ್ಮೇಂದ್ರ ಪ್ರಧಾನ್‌ ಸಹೋದರನ ಗ್ಯಾಸ್‌ ಏಜೆನ್ಸಿ ಸೇರಿ ಇನ್ನಿತರ ಪೆಟ್ರೋಲ್‌ ಬಂಕ್‌ಗಳು, ಗ್ಯಾಸ್‌ ಏಜೆನ್ಸಿಗಳ ಮೇಲೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಅಧಿಕಾರಿಗಳು ರವಿವಾರ ದಾಳಿ ನಡೆಸಿದ್ದಾರೆ.

Advertisement

ಒಡಿಶಾದ ಪುರಿ, ಭುವನೇಶ್ವರ, ನವರಂಗ್‌ಪುರ ಸೇರಿದಂತೆ ವಿವಿಧೆಡೆ ಅಡುಗೆ ಅನಿಲ, ಪೆಟ್ರೋಲ್‌, ಡೀಸೆಲ್‌ ಅನ್ನು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿರುವ ಮತ್ತು ಕಲಬೆರಕೆ ಆರೋಪಗಳು ಕೇಳಿ ಬಂದಿದ್ದವು. ಈ ಹಿನ್ನೆಲೆಯಲ್ಲಿ ಅಂಗುಲ್‌ ಜಿಲ್ಲೆಯ ತಲೆರ್‌ನಲ್ಲಿರುವ ಧರ್ಮೇಂದ್ರ ಪ್ರಧಾನ್‌ ಅವರ ಸಹೋದರನ ಗ್ಯಾಸ್‌ ಏಜೆನ್ಸಿ ಮೇಲೆಯೂ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಈ ನಡುವೆ ಸ್ಥಳೀಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪೃಥ್ವೀರಾಜ್‌ ಹರಿಚಂದನ್‌ ಅವರು “ರಾಜ್ಯ ಸರಕಾರದ ವಿರುದ್ಧ ಕಿಡಿಕಾರಿದ್ದು,  ಬಿಜೆಡಿ ಸರಕಾರ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ. ಬಿಜೆಪಿಯ ಹೆಸರು ಕೆಡಿಸುವುದಕ್ಕಾಗಿಯೇ ಈ ರೀತಿಯ ದಾಳಿಗಳನ್ನು ನಡೆಸಲಾಗುತ್ತಿದೆ’ ಎಂದು ಆರೋಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next