Advertisement
ನಗರದ ಕುವೆಂಪು ರಂಗಮಂದಿರದಲ್ಲಿ ಭಾನುವಾರ ಕೇಂದ್ರ ಸಂಸ್ಕೃತಿ ಸಚಿವಾಲಯದ ಸಹಯೋಗದಲ್ಲಿ ಭಾರತೀಯ ಸಾಂಸ್ಕೃತಿಕ ನಕ್ಷೆ ರಚನೆಯ “ನ್ಯಾಷನಲ್ ಮಿಷನ್ ಆನ್ ಕಲ್ಚರಲ್ ಮ್ಯಾಪಿಂಗ್ ಆಫ್ ಇಂಡಿಯಾ’ ಅಂಗವಾಗಿ ಆಯೋಜಿಸಿದ್ದ ಸಾಂಸ್ಕೃತಿಕ ಹಬ್ಬ ಕಾರ್ಯಕ್ರಮ ಉದ್ಘಾಟಿಸಿಮಾತನಾಡಿದರು. ದೇಶದ ಎಲ್ಲ ಕಲಾ ಪ್ರಕಾರಗಳಲ್ಲಿಯೂ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದ ಸಾಧನೆ ಮಾಡಿರುವ ಅಸಾಮಾನ್ಯ ಪ್ರತಿಭೆಗಳಿದ್ದಾರೆ. ಚಿತ್ರಗಾರಿಕೆ, ಸಂಗೀತ, ಸಾಹಿತ್ಯ ಸೇರಿದಂತೆ ಬಹುತೇಕ ಕಲೆಗಳಲ್ಲಿ ವಿಶ್ವಕ್ಕೆ ಮಾದರಿಯಾಗುವ ಪ್ರತಿಭಾನ್ವಿತರಿದ್ದಾರೆ ಎಂದರು.
ಶಿವಮೊಗ್ಗ ಜಿಲ್ಲೆ ಕೂಡ ವಿಶ್ವದ ಗಮನ ಸೆಳೆಯುತ್ತಿರುವ ರಾಜ್ಯದ ಸಾಂಸ್ಕೃತಿಕ ಕೇಂದ್ರ ಎಂದೆ ಗುರುತಿಸಲ್ಪಡುತ್ತಿದೆ. ವೈಶಿಷ್ಟಪೂರ್ಣ ಕಲೆಗಳು, ಕಲಾವಿದರನ್ನು ಹೊಂದಿರುವ ಸ್ಥಳವಾಗಿದೆ. ಅಲ್ಲದೆ, ರಾಜಕೀಯ, ಸ್ವಾತಂತ್ರ್ಯ ಹೋರಾಟ, ಪ್ರವಾಸಿ ತಾಣ, ಸಾಹಿತ್ಯ, ಕಲೆ, ರಂಗಕ್ಷೇತ್ರ, ಸಂಗೀತ,
ಗಮಕ ಸೇರಿದಂತೆ ವಿವಿಧ ವಿಷಯಗಳಿಂದ ಹೆಸರು ಗಳಿಸಿದೆ ಎಂದರು. ಕೇಂದ್ರ ಸಂಸ್ಕೃತಿ ಸಚಿವಾಲಯದ ಸಹಾಯಕ ಕಾರ್ಯದರ್ಶಿ ಸುಮಿತ್ ಸತ್ತಾವನ್ ಮಾತನಾಡಿ, ನ್ಯಾಷನಲ್ ಕಲ್ಚರಲ್ ಮ್ಯಾಪಿಂಗ್ ಕಲಾವಿದರ ಒಗ್ಗೂಡಿಸುವ ಅತಿ ದೊಡ್ಡ ವೇದಿಕೆ ಇದಾಗಿದೆ ಎಂದು ತಿಳಿಸಿದರು. ಕಲಾವಿದೆ ನಳಿನಿ ಮಾತನಾಡಿ, ಕೇಂದ್ರ ಸರ್ಕಾರವು ದೇಶದ ಕಲಾವಿದರಿಗೆ ಸೂಕ್ತ ಗೌರವ ಸಿಗುವಂತೆ ಮಾಡಲು ರಾಷ್ಟ್ರಾದ್ಯಂತ ನೋಂದಣಿ ಕೆಲಸ ನಡೆಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಕಲಾವಿದರಿಗೆ ಸರ್ಕಾರದಿಂದ ಅಗತ್ಯ ಪ್ರೋತ್ಸಾಹ ಒದಗಿಸಲು ಕಲ್ಚರಲ್ ಮ್ಯಾಪಿಂಗ್ ನೆರವಾಗಲಿದೆ ಎಂದರು. ಶಿವಮೊಗ್ಗ ಜಿಲ್ಲೆಯ ವಿವಿಧ ಕಲಾ ಪ್ರಕಾರಗಳಲ್ಲಿ ಸಾಧನೆ
ಮಾಡಿರುವ ಕಲಾವಿದರನ್ನು ಗೌರವಿಸಲಾಯಿತು. ನ್ಯಾಷನಲ್ ಮಿಷನ್ ಆನ್ ಕಲ್ಚರಲ್ ಮ್ಯಾಪಿಂಗ್ ಆಫ್ ಇಂಡಿಯಾ ಸಂಚಾಲಕ ಡಾ| ಬಿ.ವಿ. ರಾಜಾರಾಂ, ದಕ್ಷಿಣ ವಲಯ ಉಪನಿರ್ದೇಶಕ ಜೋಸೇಫ್, ಕಲಾವಿದೆ ಕಮಲಿನಿ ಮತ್ತಿತರರು ಇದ್ದರು.