ಬೇಲೂರು: ಯಾವುದೆ ಸಮಯದಲ್ಲಿ ವಿಪತ್ತು ಸಂಭವಿಸಿದಾಗ ಅದರ ನಿರ್ವಹಣೆ ಮುಖ್ಯ ಎಂದು ತಹಶೀಲ್ದಾರ್ ರಮೇಶ್ ಹೇಳಿದರು. ಪಟ್ಟಣದ ಒಕ್ಕಲಿಗ ಕಲ್ಯಾಣಮಂಟಪದಲ್ಲಿ ಶ್ರೀ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ, ಜನ ಜಾಗೃತಿ ಪ್ರಾದೇಶಿಕ ವಿಭಾಗ ಬೆಳ್ತಂಗಡಿ, ಉಷಾ ಫೇರ್ ಸೇಫ್ ಪ್ರೈವೇಟ್ ಲಿಮಿಟೆಡ್ ಸಹಭಾಗಿತ್ವದಲ್ಲಿ ಶೌರ್ಯಾ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ಸಂಯೋಜಕರು ಮತ್ತು ಸ್ವಯಂ ಸೇವಕರಿಗೆ ಜೀವ ರಕ್ಷಣಾ ಕೌಶಲ್ಯ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಧರ್ಮಸ್ಥಳ ಸಂಸ್ಥೆ ರಾಜ್ಯದ ಜನರ ಸೇವೆ ಮಾಡಲು ಕಷ್ಟದಲ್ಲಿರುವ ಹಾಗೂ ವಿಪತಿನಲ್ಲಿ ಬಳಲುತ್ತಿರುವ ಕೊಡಗು ಹಾಗೂ ದಕ್ಷಿಣ ಕನ್ನಡ ಪ್ರದೇಶಗಳು ಭೂಕಂಪದಲ್ಲಿ ಬಳಲುತ್ತಿದ್ದಾರೆ.
ಹಾಗೂ ಅದರ ಅನುಭವದಿಂದ ಸಾಕಷ್ಟು ಅಪಾರ ಪ್ರಮಾಣದ ಆಸ್ತಿ ನಷ್ಟವಾಗಿದೆ. ಆದರೆ, ಮನುಷ್ಯರ ಜೀವ ಮುಖ್ಯ. ಅದನ್ನು ಕಾಪಾಡಲು ಇಂತಹ ತರಬೇತಿ ಪಡೆದಿರುವ ತಂಡವು ಪ್ರಮುಖ ಪಾತ್ರವಹಿಸುತ್ತಿದೆ. ದೇಶದ ಸಂಪತನ್ನು ಉಳಿಸಲು ದೇಶದ ಪ್ರತಿಯೊಬ್ಬ ಪ್ರಜೆಗಳು ಶ್ರಮಿಸಬೇಕು ಎಂದರು.
ವಿಪತ್ತು ನಿರ್ವಹಣೆಗೆ ಪರಿಣಿತ ತಂಡ: ಯೋಜನಾಧಿಕಾರಿ ಜೀವನಪಟೇಲ್ ಮಾತನಾಡಿ, ಕಳೆದ ಒಂದು ವರ್ಷದಿಂದ ವಿಪತ್ತು ನಿರ್ವಹಣೆಗಾಗಿ ನಮ್ಮ ಸಂಸ್ಥೆ ತರಬೇತಿ ಪಡೆದ ಪಡೆಗಳು ಹೋರಾಟ ಮಾಡುತ್ತಿವೆ. ತಾಲೂಕಿನ ವಿಪತ್ತು ನಿರ್ವಹಣೆ ಮುಖ್ಯಸ್ಥರು ತಹಶೀಲ್ದಾರ್ ಆಗಿರುತ್ತಾರೆ. 2018ರಲ್ಲಿ 25 ಕೋಟಿ ರೂ.ಗಳನ್ನು ನೀಡಿದೆ. ಆದರೆ, ವೀರೇಂದ್ರ ಹೆಗ್ಗಡೆಯವರು ಹಣ ನೀಡುವುದು ಸಮಂಜಸವಲ್ಲ ಎಂದು ತರಬೇತಿ ಸಂಸ್ಥೆಗಳು ವಿಪತ್ತಿಗೆ ಒಳಗಾದ ಪ್ರದೇಶಗಳಿಗೆ ಖುದ್ದು ಭೇಟಿ ನೀಡಿ ವರದಿ ಪಡೆದು ಪರಿಹಾರ ನೀಡಿದರೆ ಸೂಕ್ತವೆಂದು ಅರಿತಿದ್ದಾರೆ. ನಮ್ಮ ಸಂಸ್ಥೆಯಲ್ಲಿ 25 ಸಾವಿರಕ್ಕೂ ಅಧಿಕ ಕಾರ್ಯಚರಣೆಗೆ ಸ್ವಯಂ
ಸೇವಕ ತಂಡ ಕಾರ್ಯ ನಿರ್ವಹಿಸುತ್ತಿದೆ ಎಂದರು.
ದಾರಿ ತೋರುವವನೇ ನಿಜವಾದ ಗುರು: ಜನ ಜಾಗೃತಿ ನಿರ್ದೇಶಕಿ ಮಮತಾರಾವ್ ಮಾತನಾಡಿ, ಜೀವನದ ಹಾದಿಯಲ್ಲಿ ಅನೇಕ ಗುರುಗಳು ಸಿಗುತ್ತಾರೆ. ಆದರೆ, ಜೀವನದ ದಾರಿ ತೋರಿಸುವ ಕೆಲಸ ಮಾಡುವವನೆ ನಿಜವಾದ ಗುರು. ಇಂತಹ ತರಬೇತಿಯಲ್ಲಿ ಮಹಿಳೆಯರು ಭಾಗವಹಿಸದೆ ಇರುವುದು ಬೇಸರದ ಸಂಗತಿ. ಕೇವಲ ಅಡುಗೆ ಮನೆ ಒಡತಿಗೆ ಮೀಸಲಾಗಬಾರದು. ಅವರು ದೇಶದ ಸಮಸ್ಯೆಗಳಿಗೆ ಹೋರಾಡುವಂತ ಮನೋಭಾವ ಹೊಂದಬೇಕು, ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡಬೇಕು, ದಕ್ಷಣ ಕನ್ನಡ, ಕೊಡ ಗು ಪ್ರದೇಶಗಳು ವಿಪತ್ತು ನಿರ್ವಹಣೆಯಲ್ಲಿ ಹೆಚ್ಚಾಗಿರುವ ಪ್ರದೇಶಗಳಿಗೆ ಭೇಟಿ ನೀಡಿ ಉತ್ತ
ಮವಾದ ಕೆಲಸಗಳನ್ನು ಮಾಡಲು ತರಬೇತಿ ಪಡೆದ ತಂಡಗಳು ಪ್ರಯತ್ನಿಸುವ ಕೆಲಸ ಮಾಡುವಲ್ಲಿ ನಮ್ಮ ಸಂಸ್ಥೆ ಮಂಚೂಣಿಯಲ್ಲಿದೆ ಎಂದರು.
ಈ ಸಂದರ್ಭದಲ್ಲಿ ಕ್ಷೇತ್ರ ಯೋಜನಾಧಿಕಾರಿ ಸಂಧ್ಯಾ, ವಿ.ಶೆಟ್ಟಿ, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ರಾಘವೇಂದ್ರ ಹೊಳ್ಳ, ಜಿಲ್ಲಾ ಜನ ಜಾಗೃತಿ ವೇದಿಕೆ ಸದಸ್ಯ ಮಂಜೇಗೌಡ, ಇತರರು ಇದ್ದರು.