Advertisement

ದಮಾಮ್‌ನಿಂದ 169 ಪ್ರಯಾಣಿಕರ ಆಗಮನ

12:10 PM Jun 08, 2020 | mahesh |

ಮಂಗಳೂರು: ಕೋವಿಡ್ ದಿಂದಾಗಿ ವಿದೇಶಗಳಲ್ಲಿ ಸಂತ್ರಸ್ತರಾಗಿರುವ ಕರ್ನಾಟಕದ ಜನರನ್ನು ಕರೆತರುವ ಪ್ರಕ್ರಿಯೆಯ ಅಂಗವಾಗಿ ರವಿವಾರ ದಮಾಮ್‌ನಿಂದ 169 ಪ್ರಯಾಣಿಕರನ್ನು ಹೊತ್ತ ಖಾಸಗಿ ವಿಮಾನ ಮಂಗಳೂರಿಗೆ ಆಗಮಿಸಿತು. ಅವರಲ್ಲಿ 156 ಪುರುಷರು ಮತ್ತು 13 ಮಹಿಳೆಯರು ಇದ್ದರು. ಆರೋಗ್ಯ ಇಲಾಖೆಯ ಅಧಿಕಾರಿಗಳು ವಿಮಾನ ನಿಲ್ದಾಣದಲ್ಲಿ ಹಾಜರಿದ್ದು, ಎಲ್ಲ ಪ್ರಯಾಣಿಕರ ಆರೋಗ್ಯ ತಪಾಸಣೆ ನಡೆಸಿ ಕ್ವಾರಂಟೈನ್‌ಗೆ ಒಳಪಡಿಸಿದರು.

Advertisement

ದುಬಾೖ, ಮಸ್ಕತ್‌ನಿಂದ ವಿಮಾನ “ವಂದೇ ಭಾರತ್‌ ಮಿಶನ್‌’ನ 3ನೇ ಹಂತದ ಕಾರ್ಯಾಚರಣೆ ಜೂ. 9ರಿಂದ 23ರ ವರೆಗೆ ನಡೆಯಲಿದ್ದು, ಈ ಅವಧಿಯಲ್ಲಿ ಮಂಗಳೂರಿಗೆ ದುಬಾೖ ಮತ್ತು ಮಸ್ಕತ್‌ನಿಂದ ವಿಮಾನಗಳು ಬರಲಿವೆ. ಜೂ. 12ರಂದು ದುಬಾೖಯಿಂದ 13.50ಕ್ಕೆ ಹೊರಡುವ ಎಐ ವಿಮಾನ 19.10ಕ್ಕೆ ಬೆಂಗಳೂರಿಗೆ ಬಂದು ಅಲ್ಲಿಂದ 20.10ಕ್ಕೆ ಹೊರಟು 21 ಗಂಟೆಗೆ ಮಂಗಳೂರು ತಲಪುವುದು. ಜೂ. 17ರಂದು ಮಸ್ಕತ್‌ನಿಂದ 12.10ಕ್ಕೆ ಹೊರಡುವ ವಿಮಾನ 17.20ಕ್ಕೆ ಬೆಂಗಳೂರು ಹಾಗೂ ಅಲ್ಲಿಂದ 18.20ಕ್ಕೆ ಹೊರಟು 19.15ಕ್ಕೆ ಮಂಗಳೂರು ತಲಪುವುದು. ಈ ವಿಮಾನಗಳಲ್ಲಿ ಮಂಗಳೂರಿನ ಪ್ರಯಾಣಿಕರು ಎಷ್ಟು ಮಂದಿ ಇರುತ್ತಾರೆ ಎಂಬ ಮಾಹಿತಿ ಲಭ್ಯವಾಗಿಲ್ಲ.

ಕುವೈಟ್‌ನಿಂದ ಇನ್ನೆರಡು ವಿಮಾನ
ಕುವೈಟ್‌ನಿಂದ ಇನ್ನೆರಡು ವಿಮಾನಗಳು ಮುಂದಿನ ದಿನಗಳಲ್ಲಿ ಮಂಗಳೂರಿಗೆ ಆಗಮಿಸಲಿವೆ. ಈ ಪೈಕಿ ಒಂದು ವಿಮಾನ ವಂದೇ ಭಾರತ್‌ ಮಿಶನ್‌ ಅಡಿಯಲ್ಲಿ ಹಾಗೂ ಇನ್ನೊಂದು ವಿಮಾನ ಖಾಸಗಿ ನೆಲೆಯಲ್ಲಿ ವ್ಯವಸ್ಥೆ ಮಾಡಿದ್ದಾಗಿದೆ. ಈ ವಿಮಾನಗಳ ಯಾನದ ನಿರ್ದಿಷ್ಟ ದಿನಾಂಕ ಪ್ರಕಟವಾಗಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next