Advertisement
ಹೆಬ್ಟಾಳದ ಸಂತೋಷ್ (25), ಸುಭಾಶ್ (26), ಜೋಸೆಫ್ (24) ಬಂಧಿತ ಆರೋಪಿಗಳು. ಜುಲೈ 23ರಂದು ಸಂಜೆ ಕೊಡಿಗೇಹಳ್ಳಿ ಪಾರ್ಕ್ನಲ್ಲಿ ಕುಳಿತಿದ್ದ ಸಂತ್ರಸ್ತೆಯನ್ನು ಅಪಹರಿಸಿದ ದುಷ್ಕರ್ಮಿಗಳು, ಮಂಡ್ಯದ ತೋಟದ ಮನೆಗೆ ಕರೆದೊಯ್ದು ಅತ್ಯಾಚಾರವೆಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Related Articles
Advertisement
ಬಳಿಕ ಅದೇ ರಾತ್ರಿ ಆರೋಪಿ ಸಂತೋಷನ ಕಾರಿನಲ್ಲಿ ಕೊಡಿಗೇಹಳ್ಳಿಯಿಂದ ಹೊರಟ ಆರೋಪಿಗಳು, ಮರುದಿನ (ಜು.24) ಬೆಳಗ್ಗೆ 5 ಗಂಟೆ ಸುಮಾರಿಗೆ ಮಂಡ್ಯದ ಸ್ನೇಹಿತನ ಮನೆಗೆ ಸಂತ್ರಸ್ತೆಯನ್ನು ಕರೆದೊಯ್ದು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಇದಕ್ಕೆ ಪ್ರತಿರೋಧ ವ್ಯಕ್ತಪಡಿಸಿದಾಗ ಸಂತ್ರಸ್ತೆ ಹಾಗೂ ಈಕೆಯ ಪೋಷಕರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ.
ಬಳಿಕ ಅಲ್ಲೇ ಇದ್ದ ಬಾಳೆತೋಟಕ್ಕೆ ಎಳೆದೊಯ್ದು ರಾತ್ರಿಯಿಡಿ ದೌರ್ಜನ್ಯವೆಸಗಿದ್ದಾರೆ. ಜು.25ರಂದು ಬೆಳಗ್ಗೆ ಸಂತ್ರಸ್ತೆಯನ್ನು ಆರೋಪಿಗಳು ಕೋಡಿಗೆಹಳ್ಳಿಯ ಪಾರ್ಕ್ ಬಳಿಯೇ ಬಿಟ್ಟು ಹೋಗಿದ್ದಾರೆ. ಪೋಷಕರ ಜತೆ ಠಾಣೆಗೆ ಬಂದ ಸಂತ್ರಸ್ತೆಯ ಹೇಳಿಕೆಯನ್ನು ಆಧರಿಸಿ ಸದ್ಯ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು “ಉದಯವಾಣಿ’ಗೆ ತಿಳಿಸಿದ್ದಾರೆ.
ಪ್ರಮುಖ ಆರೋಪಿ ಜೋಸೆಫ್ ನಗರದಲ್ಲಿ ಕೂಲಿ ಕೆಲಸ ಮಾಡುತ್ತಿದ್ದು, ಸಂತೋಷ್ ಕ್ಯಾಬ್ ಚಾಲಕನಾಗಿದ್ದಾನೆ. ಸುಭಾಷ್ ಯಾವುದೇ ಕೆಲಸಕ್ಕೆ ಹೋಗುತ್ತಿರಲಿಲ್ಲ. ಇನ್ನು ಸಂತ್ರಸ್ತೆ ಕಾಣೆಯಾಗಿರುವ ಬಗ್ಗೆ ಜು.24ರಂದು ಬೆಳಗ್ಗೆಯೇ ಆಕೆಯ ಪೋಷಕರು ಪ್ರಕರಣ ದಾಖಲಿಸಿದ್ದರು. ಸಂತ್ರಸ್ತೆ ಅಪ್ರಾಪ್ತೆ ಆಗಿರುವುದರಿಂದ ಮಕ್ಕಳ ಆಯೋಗ ಹಾಗೂ ಕೋರ್ಟ್ ಎದುರು ಹೇಳಿಕೆ ದಾಖಲಿಸಲಾಗುವುದು.-ಡಾ.ಚೇತನ್ ಸಿಂಗ್ ರಾಥೋಡ್, ಡಿಸಿಪಿ ಉತ್ತರ ವಿಭಾಗ