Advertisement

ಬುರ್ಖಾ ತೊಟ್ಟು ಆಸ್ಪತ್ರೆ ಸುತ್ತಿದವನ ಬಂಧನ

10:38 PM Jun 15, 2023 | Team Udayavani |

ಮುಂಬೈ: ಪುರಷನೊಬ್ಬ ಬುರ್ಖಾ ಧರಿಸಿ, ತಾನು  ಮಹಿಳಾ ವೈದ್ಯೆ ಎಂದು ಸುಳ್ಳುಹೇಳಿ ಜನರನ್ನು ಯಾಮಾರಿಸಿ ಸಿಕ್ಕಿ ಬಿದ್ದಿರುವ ಘಟನೆ ಮಹಾರಾಷ್ಟ್ರದ ನಾಗ್ಪುರದ ಇಂದಿರಾಗಾಂಧಿ ಸರ್ಕಾರಿ ವೈದ್ಯಕೀಯ ಕಾಲೇಜು- ಆಸ್ಪತ್ರೆಯಲ್ಲಿ ನಡೆದಿದೆ.

Advertisement

25 ವರ್ಷದ ಯುವಕನೊಬ್ಬ ಕನಿಷ್ಠ ಮೂರು ವಾರಗಳಿಂದ ಆಸ್ಪತ್ರೆಯ ಆವರಣದಲ್ಲಿ ಬುರ್ಖಾ ಧರಿಸಿ, ತಾನು ವೈದ್ಯೆ ಆಯೆಷ ಎಂದು ಸುಳ್ಳುಹೇಳಿಕೊಂಡು ಓಡಾಡಿದ್ದಾನೆ. ಬಳಿಕ ಆತನ ಅನುಮಾನಸ್ಪದ ನಡವಳಿಯನ್ನು ಗಮನಿಸಿ ಸಿಬ್ಬಂದಿ ದೂರು ನೀಡಿದ್ದಾರೆ. ಆತನ ಧ್ವನಿಯೂ ಹೆಣ್ಣು ಮಕ್ಕಳಂತೆ ಇರದೇ ಇದ್ದ ಕಾರಣ ಆತನ ವರ್ತನೆಯಿಂದ ಪೊಲೀಸರು ಕೂಡ ಕಕ್ಕಾಬಿಕ್ಕಿಯಾಗಿದ್ದಾರೆ. ಬಳಿಕ ನಿಜಾಂಶ ತಿಳಿದು ಆತನನ್ನು ಬಂಧಿಸಲಾಗಿದೆ. ತಾನೋರ್ವ ಸಲಿಂಗಕಾಮಿಯಾಗಿದ್ದು, ಪುರಷರೊಂದಿಗೆ ಸ್ನೇಹ ಬೆಳಸಲು ಈ ರೀತಿ ಬುರ್ಖಾ ತೊಟ್ಟಿದ್ದೆನೆಂದು ಆರೋಪಿ ಹೇಳಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next