ಘಟನೆ ಕೋಣನಕುಂಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಪ್ರಕರಣ ಸಂಬಂಧ ಕೋಣನಕುಂಟೆ ನಿವಾಸಿ ವಿನೋದ್ (25) ಎಂಬಾತನನ್ನು ಪೊಲೀಸರು ಬಂಧಿಸಿದ್ದು, ಆರೋಪಿಯ ತಂದೆ ಸುನೀಲ್ (50) ತಲೆಮರೆಸಿಕೊಂ
ಡಿದ್ದಾನೆ. ಇಬ್ಬರು ಆರೋಪಿಗಳು ಶಿವು (30) ಎಂಬಾತನಿಗೆ ಚೂರಿಯಿಂದ ಇರಿದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
Advertisement
ಕಳೆದ ಭಾನುವಾರ ಮಧ್ಯಾಹ್ನ ಶಿವು ಅವರ ಸಹೋದರಿ, ಕೋಣನಕುಂಟೆ ಮುಖ್ಯ ರಸ್ತೆಯಲ್ಲಿ ನಡೆದು ಹೋಗುತ್ತಿದ್ದಾಗ ಅಲ್ಲೇ ಇದ್ದ ವಿನೋದ್ ಆಕೆಯನ್ನು ಚುಡಾಯಿಸಿದ್ದಾನೆ. ಇದರಿಂದ ನೊಂದಯುವತಿ, ಸಹೋದರನ ಬಳಿ ಅಳಲು
ತೋಡಿಕೊಂಡಿದ್ದಾಳೆ. ಇದರಿಂದ ಕೋಪಗೊಂಡ ಶಿವು, ವಿನೋದ್ ಎಚ್ಚರಿಕೆ ನೀಡಿದ್ದಾನೆ. ಆದರೂ ವಿನೋದ್
ಆಕೆಯನ್ನು ಚುಡಾಯಿಸುವುದನ್ನು ಮುಂದುವರಿಸಿದ್ದ.