Advertisement
ಕುಶಾಲನಗರ ಸಮೀಪ ಬೈಲು ಕೊಪ್ಪೆಯ ಸಂಘಟನೆ ಕಛೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ, ತಶಿ ಲೊಂಪೊ ಬೌದ್ಧ ಮಂದಿರ ಧರ್ಮಗುರುಗಳಾದ ಕೆಲ್ಕನ್ ರಿಂಪೋಚೆ, 11ನೇ ಪಂಚೆನ್ ಲಾಮ ಮತ್ತು ಅವರ ಪೋಷಕರನ್ನು ಚೀನಾ ಸರಕಾರ ತಮ್ಮ ವಶಕ್ಕೆ ಪಡೆದುಕೊಂಡಿದ್ದು ಇದುವರೆಗೂ ಅವರ ವಾಸ್ತವ ಸ್ಥಿತಿ ಬಗ್ಗೆ ಹೊರ ಜಗತ್ತಿಗೆ ಮಾಹಿತಿ ನೀಡುತ್ತಿಲ್ಲ. ಅವರ ಎಲ್ಲ ಹಕ್ಕುಗಳನ್ನು ಮೊಟಕುಗೊಳಿಸಿ ಬಂಧನಕ್ಕೆ ಒಳಪಡಿಸಿದ್ದಾರೆ.
ಪ್ರಸಕ್ತ 30 ವರ್ಷ ಪ್ರಾಯದ ಪಂಚೆನ್ ಲಾಮ ಅವರು ಬೌದ್ಧ ಧರ್ಮೀಯರ ಮುಂದಿನ ಪರಮೋಚ್ಚ ಗುರುಗಳಾಗಬೇಕಾಗಿದ್ದು ಅವರ ಧಾರ್ಮಿಕ ಚಟುವಟಿಕೆಗಳಿಗೆ ಕೂಡ ಅಡ್ಡಿ ಮಾಡಿರುವ ಸಾಧ್ಯತೆಯಿದೆ. ಚೀನಾ ಸರಕಾರ ಟಿಬೇಟಿಯನ್ನರ ವಿರುದ್ಧ ಮಾನವ ಹಕ್ಕುಗಳ ಉಲ್ಲಂಘನೆ ನಡೆಸುತ್ತಾ ಬಂದಿದ್ದು ಈ ಬಗ್ಗೆ ವಿಶ್ವಸಂಸ್ಥೆಗೆ ಹಲವು ಬಾರಿ ದೂರು ನೀಡಲಾಗಿದೆ ಎಂದಿದ್ದಾರೆ. 11ನೇ ಪಂಚೆನ್ ಲಾಮಾರ ಶೀಘ್ರ ಬಿಡುಗಡೆಗೆ ಪ್ರಾರ್ಥಿಸಿ ಬೈಲುಕೊಪ್ಪೆಯ ಟಿಬೇಟಿಯನ್ ಬಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿರುವುದಾಗಿ ತಿಳಿಸಿದರು.
Related Articles
Advertisement
ಸುದ್ದಿಗೋಷ್ಠಿಯಲ್ಲಿ ಟಿಬೇಟಿಯನ್ ಯೂತ್ ಕಾಂಗ್ರೆಸ್ ಅಧ್ಯಕ್ಷರಾದ ಲಕ್ಯಪ್ ಜನಿಯಲ್ ಮತ್ತು ಟಿಬೇಟಿಯನ್ ಮಹಿಳಾ ಘಟಕದ ಅಧ್ಯಕ್ಷೆ ತಶಿ ಚೋಡನ್ ಉಪಸ್ಥಿತರಿದ್ದರು.