ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ಹಾಗೂ ಬೆಂಗಳೂರು ನಗರದ ವಿವಿದೆಡೆಗಳ ಮನೆಗಳಲ್ಲಿ ಕಳ್ಳತನ ಮಾಡಿದ್ದ ಇಬ್ಬರು ಕುಖ್ಯಾತ ಮನೆಗಳ್ಳರನ್ನು ನಗರ ಪೊಲೀಸರು ಬಂಧಿಸಿ, ಆರೋಪಿಗಳಿಂದ ಸುಮಾರು 15.60 ಲಕ್ಷ ಮೌಲ್ಯದ 520 ಗ್ರಾಂ ಚಿನ್ನಾಭರಣಗಳನ್ನು ವಶ ಪಡಿಸಿಕೊಳ್ಳಲಾಗಿದೆ ಎಂದು ಡಿವೈಎಸ್ಪಿ ಆರ್.ಮೋಹನ್‌ಕುಮಾರ್ ತಿಳಿಸಿದ್ದಾರೆ.
ಕಳವು: ಕಳೆದ ವರ್ಷ ನಗರ ಠಾಣೆ ವ್ಯಾಪ್ತಿಯಲ್ಲಿ ಮನೆ ಕಳ್ಳತನ ಮತ್ತು ಮೋಟಾರ್ ಸೈಕಲ್ಗಳನ್ನು ಕಳ್ಳತನ ಮಾಡಿದ್ದ ದೊಡ್ಡಬಳ್ಳಾಪುರದ ಮುತ್ತೂರು ನಿವಾಸಿ ಕೃಷ್ಣ , ಮತ್ತು ನಿಖೀಲ್ಎನ್ನುವವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕುಖ್ಯಾತ ಮನೆಕಳ್ಳ ಮಂಜುನಾಥ್, ಮಂಜ ಅಲಿಯಾಸ ಕೊಮ್ಮಘಟ್ಟ ಮಂಜನ ಜೊತೆಗೂಡಿ ಏ.6ರ ರಂದು ಬೆಂಗಳೂರು ನಗರದ ಪಶ್ಚಿಮ ವಿಭಾಗದ ಬ್ಯಾಟರಾಯನ ಪುರ ಠಾಣೆ ವ್ಯಾಪ್ತಿಯ ಟೆಲಿಕಾಂ ಲೇ ಔಟ್‌ನ ಮನೆಯ ಬೀಗ ಮುರಿದು ಮನೆಯಲ್ಲಿದ್ದ ಸುಮಾರು 634 ಗ್ರಾಂ ಚಿನ್ನಾಭರಣಗಳನ್ನು ಕಳವು ಮಾಡಿ ವಿವಿಧೆಡೆಗಳಲ್ಲಿ ಅಡವಿಟ್ಟಿರುವುದಾಗಿ ಮಾಹಿತಿ ನೀಡಿದರು.
ಆಭರಣ ವಶಕ್ಕೆ: ಬೆಂಗಳೂರು ಜಿಲ್ಲೆಯ ಪೊಲೀಸ್ ಅಧೀಕ್ಷಕ ರಾಮ ನಿವಾಸ್ ಸೆಪಟ್, ಐಪಿಎಸ್ ಅಪರ ಪೊಲೀಸ್ ಅಧೀಕ್ಷಕ ವಿ.ಕೆ.ಸಜಿತ್, ಮಾರ್ಗದರ್ಶನದಲ್ಲಿ ಸರ್ಕಲ್ ಇನ್ಸ್‌ಪೆಕ್ಟರ್ ಜಿ.ಸಿದ್ದರಾಜು, ನಗರ ಠಾಣೆ ಸಬ್ ಇನ್ಸ್‌ಪೆಕ್ಟರ್ ಕೆ.ವೆಂಕಟೇಶ್ ಮತ್ತು ಸಿಬ್ಬಂದಿ ಆರೋಪಿಗಳು ಅಡವಿಟ್ಟಿದ್ದ ಅಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.
ನಗರ ಪೊಲೀಸರ ಈ ಪತ್ತೆ ಕಾರ್ಯವನ್ನು ಶ್ಲಾಘಿಸಿ ಬೆಂಗಳೂರು ಜಿಲ್ಲೆಯ ಪೊಲೀಸ್ ಅಧೀಕ್ಷಕ ರಾಮ ನಿವಾಸ್ ಸೆಪಟ್ ಬಹುಮಾನ ಘೊಷಿಸಿದ್ದಾರೆಂದು ತಿಳಿಸಿದರು.
Advertisement
ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ನಗರದ ಮುತ್ತೂರು ನಿವಾಸಿ ಕೆಂಚಪ್ಪ, ಕೆಂಚ ಅಲಿಯಾಸ್ ಕೃಷ್ಣ (32) ಮತ್ತು ಕಗ್ಗಲೀಪುರ ಠಾಣೆಯಲ್ಲಿ ದಾಖಲಾಗಿದ್ದ ಕೊಲೆ ಪ್ರಕರಣದ ಆರೋಪಿ ಬಾದೆಕಟ್ಟೆ, ಕಗ್ಗಲಿಪುರ ನಿವಾಸಿ ನಿಖೀಲ್(24) ಬಂಧಿತರಾಗಿದ್ದಾರೆ.
Related Articles
Advertisement
ಸರ್ಕಲ್ ಇನ್ಸ್ ಪೆಕ್ಟರ್ ಜಿ.ಸಿದ್ದರಾಜು,ನಗರ ಠಾಣೆ ಸಬ್ ಇನ್ಸ್ ಪೆಕ್ಟರ್ ಕೆ.ವೆಂಕಟೇಶ್, ಗ್ರಾಮಾಂತರ ಠಾಣೆಯ ಸಬ್‌ಇನ್ಸ್‌ಪೆಕ್ಟರ್ ಬಾಲಾಜಿ,ಅಪರಾಧ ವಿಭಾಗದ ಪಿಎಸ್‌ಐ ರಂಗನಾಥ್ ಸುದ್ದಿಗೋಷ್ಠಿಯಲ್ಲಿದ್ದರು.