Advertisement
ಇವರಿಂದ 6.ಕೆ.ಜಿಯ 561 ಗ್ರಾಂ ತೂಕದ ಗಾಂಜಾ ಎಣ್ಣೆ ವಶಕ್ಕೆ ಪಡೆಯಲಾಗಿದೆ. ಕೇರಳದ ಮಲೆನಾಡು ಪ್ರದೇಶಗಳಲ್ಲಿ ರಬ್ಬರ್ ಫಾರಂಗಳಲ್ಲಿ ರಬ್ಬರ್ ಮರಗಳಿಂದ ಹಾಲನ್ನು ಟ್ಯಾಪಿಂಗ್ ಮಾಡಿ ರಬ್ಬರ್ ಉತ್ಪತ್ತಿ ಮಾಡುವ ಕೆಲಸ ಮಾಡುತ್ತಿದ್ದ ಆರೋಪಿಗಳು, ಆಗಾಗ್ಗೆ ನಗರಕ್ಕೆ ಬಂದು ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದರು.
ಹಸಿ ಗಾಂಜಾ ಸೊಪ್ಪನ್ನು ಆಲ್ಕೋಹಾಲ್‌ನೊಂದಿಗೆ ಬೆರೆಸಿ ಅರೆದು ದ್ರವರೂಪಕ್ಕೆ ಪರಿವರ್ತಿಸಲಾಗುತ್ತದೆ. ಆಲ್ಕೋಹಾಲ್ ಅಂಶವು ಗಾಂಜಾ ದ್ರವದೊಂದಿಗೆ ಕರಗಿದ ನಂತರ ದ್ರವವನ್ನು ಕಾಯಿಸಿ ಕುದಿಸಿ ನೀರಿನ ಅಂಶ ಆವಿಯಾದ ನಂತರ ಎಣ್ಣೆ ರೂಪದ ಅಂಟು ದ್ರವ ಉತ್ಪತ್ತಿಯಾಗುತ್ತದೆ. ಇದನ್ನು ಫಿಲ್ಟರ್ ಮಾಡಿ ದ್ರವ ರೂಪದ ಶುದ್ಧ ಹಶೀಶ್ ಆಯಿಲ್ ತಯಾರಿಸಲಾಗುತ್ತಿದೆ. ಇದನ್ನು ಗಾಂಜಾ ಸೊಪ್ಪಿನಿಂದ ಬೇರ್ಪಡಿಸಿ ಎಣ್ಣೆ ಉತ್ಪತ್ತಿ ಮಾಡಲಾಗುತ್ತದೆ.
Related Articles
Advertisement
ಕೇರಳದಲ್ಲಿ ಅಕ್ರಮವಾಗಿ ಅತಿ ಹೆಚ್ಚಾಗಿ ಮಾರಾಟ ಮಾಡಲಾಗುತ್ತದೆ. ಇದನ್ನೇ ಲಾಭವಾಗಿ ಮಾಡಿಕೊಂಡ ಆರೋಪಿಗಳು ಈ ದಂಧೆಯಲ್ಲಿ ತೊಡಗಿಸಿಕೊಂಡಿರುವ ವಿಚಾರಣೆಯಲ್ಲಿ ಕಂಡು ಬಂದಿದೆ. ನಗರದ ವಿವಿಧೆಡೆ ಆರೋಪಿಗಳು ಗಾಂಜಾ ಎಣ್ಣೆ ಮಾರಾಟ ಮಾಡಿರುವುದು ವಿಚಾರಣೆಯಿಂದ ತಿಳಿದು ಬಂದಿದೆ ಎಂದು ಅವರು ತಿಳಿಸಿದ್ದಾರೆ.