Advertisement

ಕೆಲಸ ಕೊಡಿಸುವುದಾಗಿ ಹೇಳಿ ಸೆಕ್ಸ್‌ಗೆ ಪೀಡಿಸುತ್ತಿದ್ದವನ ಬಂಧನ

12:27 PM Jun 02, 2017 | Team Udayavani |

ಬೆಂಗಳೂರು: ಕೆಲಸ ಕೊಡಿಸುವ ನೆಪದಲ್ಲಿ ಯುವತಿಯರಿಗೆ ದೂರವಾಣಿ ಕರೆ ಮಾಡಿ ಲೈಂಗಿಕ ಸಂಪರ್ಕಕ್ಕೆ ಬರುವಂತೆ ಪೀಡಿಸುತ್ತಿದ್ದ ಜಮ್ಮುಕಾಶ್ಮೀರ ಮೂಲದ ಯುವಕನೊಬ್ಬ ಮೈಕೋಲೇಔಟ್‌ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾನೆ. 

Advertisement

ವೈಟ್‌ಫೀಲ್ಡ್‌ನ ಬಿಪಿಒ ಕಂಪನಿಯೊಂದರ ಉದ್ಯೋಗಿ ಹಬೀಬ್‌ ಘನಿ (26) ಬಂಧಿತ ಆರೋಪಿ. ಉಡುಪಿ ಮೂಲದ ಎಂಬಿಎ ಪದವೀಧರೆಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ಎಸಗಲು ಯತ್ನಿಸಿದ ಸಂಬಂಧ ನೀಡಿದ್ದ ದೂರಿನ ಆಧಾರದ ಮೇಲೆ ಈತನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಮೇ 15ರಂದು ಬನ್ನೇರುಘಟ್ಟ ರಸ್ತೆಯ ಪ್ರತಿಷ್ಠಿತ ಕಂಪನಿಯೊಂದರಲ್ಲಿ ಸಂದರ್ಶನ ಮುಗಿಸಿಕೊಂಡು ವಾಪಾಸ್‌ ತೆರಳುತ್ತಿದ್ದ ಉಡುಪಿ ಮೂಲದ ಎಂಬಿಎ ಪದವಿಧರೆಗೆ ದೂರವಾಣಿ ಕರೆ ಮಾಡಿದ್ದ ಹಬೀಬ್‌, ಕೆಲಸ ಕೊಡಿಸುವ ನೆಪದಲ್ಲಿ ಯುವತಿ ಇರುವ ಸ್ಥಳಕ್ಕೆ ತೆರಳಿದ್ದ. ನಂತರ ಯುವತಿಯನ್ನು ತನ್ನ ಕಾರಿನ ಬಳಿ ಕರೆಸಿಕೊಂಡು ಲೈಂಗಿಕ ದೌರ್ಜನ್ಯ ಎಸಗಲು ಯತ್ನಿಸಿದ್ದ. ಇದರಿಂದ ಗಾಬರಿಗೊಂಡ ಯುವತಿ ಕಿರುಚಿಕೊಳ್ಳುತ್ತಿದ್ದಂತೆ ಆರೋಪಿ ಪರಾರಿಯಾಗಿದ್ದ. 

ಘಟನೆ ನಂತರ ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ, ದೂರುದಾರ ಯುವತಿ ಕಂಪನಿ ಪ್ರವೇಶ ದ್ವಾರದಲ್ಲಿದ್ದ ಸಂದರ್ಶಕರ ಬುಕ್‌ನಲ್ಲಿ ಮೊಬೈಲ್‌ ಸಂಖ್ಯೆ ನಮೂದಿಸಿದ್ದಳು. ನಾನೂ ಕೂಡ ಅದೇ ದಿನ ಸಂದರ್ಶನಕ್ಕೆ ತೆರಳಿ, ಪುಸ್ತಕದಲ್ಲಿ ನನ್ನ ನಂಬರ್‌ ನಮೂದಿಸುವಾಗ ಯುವತಿಯ ಸಂಖ್ಯೆ ಪಡೆದುಕೊಂಡಿದ್ದೆ. ಬಳಿಕ ಸಂಜೆ 6.30ರ ಸುಮಾರಿಗೆ ಯುವತಿಗೆ ಕರೆ ಮಾಡಿದ್ದಾಗಿ ವಿಚಾರಣೆ ವೇಳೆ ಆರೋಪಿ ಹೇಳಿದ್ದಾನೆ.

ಯುವತಿ ದಾಖಲಿಸಿದ ದೂರಿನ ಅನ್ವಯ ಆರೋಪಿ ಮೊಬೈಲ್‌ ನಂಬರ್‌ ಜಾಡು ಹಿಡಿದು ಬಂಧನಕ್ಕೆ ಬಲೆಬೀಸಿದಾಗ, ಆತನ ವೃತ್ತಾಂತ ಬೆಳಕಿಗೆ ಬರತೊಡಗಿತ್ತು. ಉತ್ತರ ಪ್ರದೇಶದ ವಿಳಾಸದಿಂದ ನಂಬರ್‌ ಪಡೆದುಕೊಂಡಿದ್ದ ಆರೋಪಿ, ಯುವತಿಯರ ಬಳಿ ಮಾತನಾಡಲು ಮಾತ್ರ ಆ ಸಂಖ್ಯೆ ಬಳಸುತ್ತಿದ್ದ. ಪದೇ ಪದೇ ಸ್ವಿಚ್‌ ಆಫ್ ಮಾಡಿಕೊಳ್ಳುತ್ತಿದ್ದ. ಈ ನಂಬರ್‌ನ ಕರೆ ವಿವರ ಪಡೆದು, ಅದರಲ್ಲಿದ್ದ ಹಲವು ಸಂಖ್ಯೆಗಳಿಗೆ ಕರೆ ಮಾಡಿದಾಗ ಯುವತಿಯರೇ ಮಾತನಾಡುತ್ತಿದ್ದರು.

Advertisement

ಆರೋಪಿ ಹಬೀಬ್‌ ಬಳಸುತ್ತಿದ್ದ ನಂಬರ್‌ ತಿಳಿಸಿ, ಈ ವ್ಯಕ್ತಿಯ ಪರಿಚಯವಿದೆಯೇ ಎಂದು ಪ್ರಶ್ನಿಸಿದಾಗ, “ಕೆಲಸ ಕೊಡಿಸುವುದಾಗಿ ಹೇಳಿಕೊಂಡು ಹಬೀಬ್‌ ಎಂಬಾತ ಕರೆ ಮಾಡಿ, ಅಶ್ಲೀಲವಾಗಿ ಮಾತನಾಡುತ್ತಿದ್ದ. ಅಷ್ಟೇ ಅಲ್ಲದೆ, ಲೈಂಗಿಕ  ಸಂಪರ್ಕಕ್ಕೆ ಒತ್ತಾಯಿಸುತ್ತಿದ್ದ’ ಎಂದು 50ಕ್ಕೂ ಹೆಚ್ಚು ಯುವತಿಯರು ಅಳಲು ತೋಡಿಕೊಂಡಿದ್ದರು. ಆದರೆ ಅವರೆಲ್ಲರೂ ಆತನ ವಿರುದ್ಧ ದೂರು ನೀಡಲು ಹಿಂಜರಿದಿದ್ದರು.

ವೆಬ್‌ಸೈಟ್‌ನಿಂದ ನಂಬರ್‌: ಡಿಪ್ಲೊಮಾ ಪದವೀಧರನಾಗಿರುವ ಆರೋಪಿ 2015ರಲ್ಲಿ ನಗರಕ್ಕೆ ಬಂದಿದ್ದು, ಜೆ.ಪಿ.ನಗರದ ಪುಟ್ಟೇನಹಳ್ಳಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದಾನೆ. ಕೆಲಸಕ್ಕೆ ಸೇರಿದ ಬಳಿಕ ಹುಡುಗಿಯರ ಜತೆ ಮಾತನಾಡುವ ಚಾಳಿ ಬೆಳೆಸಿಕೊಂಡಿದ್ದ.

ಕೆಲಸದ ಅವಶ್ಯಕತೆಗಾಗಿ ನೌಕರಿ ಡಾ.ಕಾಮ್‌ ಸೇರಿದಂತೆ ಇನ್ನಿತರೆ ಉದ್ಯೋಗ ಸಂಬಂಧಿ ವೆಬ್‌ಸೈಟ್‌ಗಳಲ್ಲಿ ವೈಯಕ್ತಿಕ ವಿವರದ ಜತೆಗೆ ಹಾಕುವ ಮೊಬೈಲ್‌ ಸಂಖ್ಯೆಗಳನ್ನು ಪಡೆಯುತ್ತಿದ್ದ. ಬಳಿಕ ಆ ಸಂಖ್ಯೆಗಳಿಗೆ ಕರೆ ಮಾಡಿ, ತಾನು ಪ್ರತಿಷ್ಠಿತ ಕಂಪನಿಯೊಂದರಲ್ಲಿ ಎಚ್‌ಆರ್‌ ಆಗಿದ್ದು, ನಿಮಗೆ ಕೆಲಸಕೊಡಿಸುತ್ತೇನೆ ಎಂದು ಪರಿಚಯ ಮಾಡಿಕೊಳ್ಳುತ್ತಿದ್ದ.

ಯುವತಿಯರ ಜೂತೆ  ಸ್ವಲ್ಪ ಸಲಿಗೆ ಬೆಳದ ನಂತರ ಅಶ್ಲೀಲ ಸಂಭಾಷಣೆ ನಡೆಸಿ, ದೈಹಿಕ ಸಂರ್ಪಕಕ್ಕೆ ಆಹ್ವಾನಿಸುತ್ತಿದ್ದ, ಒಂದು ವೇಳೆ ಯುವತಿ ನಿರಾಕರಿಸಿದರೆ ಅಥವಾ ಬೈದರೆ, ಮತ್ತೂಮ್ಮೆ ಕರೆ ಮಾಡುತ್ತಿರಲಿಲ್ಲ. ಈತನ ನಂಬರ್‌ನಿಂದ ಮತ್ತೂಂದು ಮೊಬೈಲ್‌ ನಂಬರ್‌ಗೆ ಕನಿಷ್ಠ ಐದಾರು ಬಾರಿಗಿಂತ ಹೆಚ್ಚು ಕರೆ ಮಾಡುತ್ತಿರಲಿಲ್ಲ, ಸ್ವಿಚ್‌ ಆಫ್ ಮಾಡಿಕೊಳ್ಳುತ್ತಿದ್ದ ಎಂದು ಅಧಿಕಾರಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next