Advertisement
ಈ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್, ಇಂತಹ ಇನ್ನಷ್ಟು ಶಸ್ತ್ರಾಸ್ತ್ರಗಳನ್ನು ಮುಂದಿನ ವರ್ಷಗಳಲ್ಲಿ ಸೇನೆಗೆ ನಿಯೋಜಿಸಲಾಗುತ್ತದೆ ಎಂದಿದ್ದಾರೆ. ಬೋಫೋರ್ಸ್ ಗನ್‌ಗಳನ್ನು ನಿಯೋಜಿಸಿದ 30 ವರ್ಷಗಳ ಬಳಿಕ ಈ ಗನ್‌ಗಳು ಲಭ್ಯವಾಗಿವೆ. ಹೊವಿಟ್ಜರ್ ಗನ್‌ಗಳನ್ನು ಅಮೆರಿಕದಿಂದ ಖರೀದಿಸಲಾಗಿದೆ. ಮಹಿಂದ್ರಾ ಡಿಫೆನ್ಸ್ ಬಿಎಇ ಸಿಸ್ಟಮ್ಸ್ ಸಹಭಾಗಿತ್ವದಲ್ಲಿ ಭಾರತದಲ್ಲಿ ಜೋಡಿಸಲಾಗಿದೆ. ಇವು ವಿಶಿಷ್ಟ ಗನ್‌ಗಳಾಗಿದ್ದು ಸುಲಭವಾಗಿ ಸಾಗಿಸಬಹುದಾಗಿದೆ. ಸದ್ಯ ಅಮೆರಿಕ, ಕೆನಡಾ ಆಸ್ಟ್ರೇಲಿಯಾದಲ್ಲಿ ಈ ಗನ್‌ಗಳನ್ನು ಬಳಕೆ ಮಾಡಲಾಗುತ್ತಿದೆ. ಕೆ-9 ವಜ್ರ ಸೆಲ್ಫ್ ಗನ್‌ಗಳನ್ನು ದ. ಕೊರಿಯಾದಿಂದ ಖರೀದಿಸಿ, ಭಾರತದಲ್ಲಿ ಎಲ್ ಆ್ಯಂಡ್ ಟಿ ಕಂಪೆನಿ ಜೋಡಿಸಿದೆ. ಮೊದಲ 10ನ್ನು ಖರೀದಿ ಸಲಾಗಿದ್ದು, ಉಳಿದ 90 ಗನ್‌ಗಳನ್ನು ದೇಶೀಯವಾಗಿಯೇ ತಯಾರಿಸಲಾಗುತ್ತದೆ. ಆರ್ಟಿಲರಿ ಟ್ರ್ಯಾಕ್ಟರ್ ಅನ್ನು ಭಾರತದಲ್ಲೇ ಅಶೋಕ್ ಲೇಲ್ಯಾಂಡ್ ತಯಾರಿಸಿದೆ. Advertisement
ಸೇನೆಗೆ ಸಿಕ್ಕಿತು ಶಸ್ತ್ರಬಲ
08:41 AM Nov 10, 2018 | |
Advertisement
Udayavani is now on Telegram. Click here to join our channel and stay updated with the latest news.