Advertisement

ಪ್ರವಾಸಿಗರಿಗೆ ಬೆಂಗಳೂರು ಕುರಿತು ಆ್ಯಪ್‌

03:45 AM Jan 06, 2017 | Team Udayavani |

ಬೆಂಗಳೂರು: ಪ್ರವಾಸಿಗರಿಗೆ ಬೆಂಗಳೂರಿನ ಕುರಿತು ಸಮಗ್ರ ಮಾಹಿತಿ ನೀಡುವ ಆ್ಯಪ್‌ ಗಳನ್ನು ಹೊರತರಲು ಪ್ರವಾಸೋದ್ಯಮ ಇಲಾಖೆ ತೀರ್ಮಾನಿಸಿದೆ.

Advertisement

ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ವಿಶ್ವಮಟ್ಟದಲ್ಲಿ ಗುರುತಿಸಿಕೊಂಡಿರುವ ಬೆಂಗಳೂರು ತನ್ನ ಉತ್ತಮ ವಾತಾವರಣದಿಂದಾಗಿ ಎಲ್ಲರಿಗೂ ಪ್ರಿಯವಾದ ಪ್ರದೇಶವಾಗಿ ಬೆಳೆಯುತ್ತಿದೆ. ಹೀಗಾಗಿ ವಿದೇಶೀಯರು ಸೇರಿದಂತೆ
ಪ್ರವಾಸಿಗರು ಬೆಂಗಳೂರಿಗೆ ಬರುತ್ತಿದ್ದಂತೆ ಇಲ್ಲಿ ನೋಡಬೇಕಾಗಿರುವ ಪ್ರದೇಶಗಳ ಕುರಿತು ಮಾಹಿತಿ ನೀಡಲು ಆ್ಯಪ್‌ ಸಿದ್ಧಪಡಿಸಲಾಗುತ್ತಿದೆ ಎಂದು ಪ್ರವಾಸೋದ್ಯಮ ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದ್ದಾರೆ.

ವಿಧಾನಸೌಧದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದ್ಯದಲ್ಲಿಯೇ ಬೆಂಗಳೂರು ಆ್ಯಪ್‌ ತರುತ್ತೇವೆ. ಅದರಲ್ಲಿ ಬೆಂಗಳೂರಿನ ಎಲ್ಲಾ ಪ್ರವಾಸಿ ತಾಣಗಳ ಮಾಹಿತಿ ನೀಡಲಾಗುವುದು. ಒಮ್ಮೆ ಆ ಸ್ಥಳದಲ್ಲಿ ನಿಂತು ಫೋಟೋ ತೆಗೆದರೂ ಆ ಸ್ಥಳದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಆ್ಯಪ್‌ ಒದಗಿಸಲಿದೆ. ಅದೇ ರೀತಿ ಇಲ್ಲಿಯ ಹೋಟೆಲ್‌, ಮಾರ್ಗಗಳು ಸೇರಿದಂತೆ ಸಂಪೂರ್ಣ ಮಾಹಿತಿ ಯನ್ನು ಒಳಗೊಂಡಿರುತ್ತದೆ ಎಂದು ತಿಳಿಸಿದರು.

ಇದಲ್ಲದೆ, ಕಬ್ಬನ್‌ಪಾರ್ಕ್‌, ಬಸವನಗುಡಿ ಮತ್ತು ನಂದಿ ಕುರಿತಂತೆಯೂ ಆ್ಯಪ್‌ ಹೊರತರಲು ತೀರ್ಮಾನಿಸಲಾಗಿದೆ. ಕಬ್ಬನ್‌ಪಾರ್ಕ್‌ನ ಯಾವು ದಾದರೂ ಮರದ ಮುಂದೆ ನಿಂತು ಫೋಟೋ ತೆಗೆಸಿಕೊಂಡರೆ ಆ ಮರದ ಬಗ್ಗೆ ಸಂಪೂರ್ಣ
ಮಾಹಿತಿ ಆ್ಯಪ್‌ನಲ್ಲಿ ಲಭ್ಯವಾಗುತ್ತದೆ. ಅದೇ ರೀತಿ ಪಾರ್ಕ್‌ನ ಮಾಹಿತಿಯೂ ಲಭ್ಯವಾಗುತ್ತದೆ. ಇತರೆ ಎರಡು ಆ್ಯಪ್‌ಗ್ಳಲ್ಲಿ ಸಂಬಂಧಿಸಿದ ಪ್ರದೇಶದ ಸಮಗ್ರ ಮಾಹಿತಿ ಇರುತ್ತದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next