Advertisement

ಅಪಾರ್ಟ್‌ಮೆಂಟ್‌ ಕಾರ್ಯದರ್ಶಿ ಕೊಲೆ

09:38 AM Nov 11, 2021 | Team Udayavani |

ಬೆಂಗಳೂರು: ಸರಿಯಾಗಿ ಕೆಲಸ ಮಾಡುವಂತೆ ಸೂಚಿಸಿದಕ್ಕೆ ನೇಪಾಳ ಮೂಲದ ಭದ್ರತಾ ಸಿಬ್ಬಂದಿಯೊಬ್ಬ ಅಪಾರ್ಟ್‌ಮೆಂಟ್‌ ಅಸೋಸಿಯೇಷನ್‌ ಕಾರ್ಯದರ್ಶಿಯನ್ನು ಚಾಕುವಿ ನಿಂದ ಇರಿದು ಕೊಲೆಗೈದಿರುವ ಘಟನೆ ಎಚ್‌ಎಎಲ್‌ ಠಾಣೆ ವ್ಯಾಪ್ತಿಯ ಎಇಸಿಎಸ್‌ ಲೇಔಟ್‌ನಲ್ಲಿ ಬುಧವಾರ ಬೆಳಗ್ಗೆ ನಡೆದಿದೆ. ಪದ್ಮಾನಿಲಯ ಅಪಾರ್ಟ್‌ಮೆಂಟ್‌ ನಿವಾಸಿ ಹಾಗೂ ಅಪಾರ್ಟ್‌ಮೆಂಟ್‌ ಅಸೋಸಿಯೇಷನ್‌ ಕಾರ್ಯದರ್ಶಿಯಾಗಿದ್ದ ಭಾಸ್ಕರ್‌ ರೆಡ್ಡಿ (65) ಕೊಲೆಯಾದವರು.

Advertisement

ಈ ಸಂಬಂಧ ಆರೋಪಿ ನೇಪಾಳ ಮೂಲದ ಭದ್ರತಾ ಸಿಬ್ಬಂದಿ ಬಸಂತ್‌(32) ಎಂಬಾತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು. ಭಾಸ್ಕರ್‌ ರೆಡ್ಡಿ ಪುತ್ರ ಸಾಫ್ಟ್ವೇರ್‌ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಪುತ್ರನ ಜತೆ ಪದ್ಮಾನಿಲಯ ಅಪಾರ್ಟ್‌ಮೆಂಟ್‌ನಲ್ಲಿ ಎರಡೂವರೆ ವರ್ಷಗಳಿಂದ ವಾಸವಾಗಿದ್ದರು. ಆರೋಪಿ ಬಸಂತ್‌ ಮೂರು ತಿಂಗಳಿಂದ ಅಪಾರ್ಟ್‌ಮೆಂಟ್‌ನಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದಾನೆ.

ಇದನ್ನೂ ಓದಿ:- ಜೋರಾಯ್ತು ರಿಲೀಸ್‌ ಸಿನಿಮಾ ಧಮಾಕ: ನವೆಂಬರ್‌ ತಿಂಗಳಲ್ಲಿ 15ಕ್ಕೂ ಹೆಚ್ಚು ಸಿನಿಮಾಗಳು ತೆರೆಗೆ

ನಿತ್ಯ ಮದ್ಯದ ಅಮಲಿನಲ್ಲಿಯೇ ಕೆಲಸ ಮಾಡು ತ್ತಿದ್ದ. ಅದನ್ನು ಗಮನಿಸಿದ ಭಾಸ್ಕರ್‌ ರೆಡ್ಡಿ, ಕುಡಿದು ಕೆಲಸ ಮಾಡಬೇಡ. ಸರಿಯಾಗಿ ಕೆಲಸಕ್ಕೆ ಹಾಜರಾಗಿ ಕರ್ತವ್ಯ ನಿರ್ವಹಿಸಬೇಕು. ಒಂದು ವೇಳೆ ಮದ್ಯ ಸೇವಿಸಿ ಕೆಲಸಕ್ಕೆ ಬಂದರೆ ಕೆಲಸದಿಂದ ತೆಗೆಯುವುದಾಗಿ ಬಸಂತ್‌ಗೆ ಎಚ್ಚರಿಕೆ ನೀಡಿದ್ದಾರೆ. ಅದರಿಂದ ಆಕ್ರೋಶಗೊಂಡಿದ್ದ ಆರೋಪಿ, ಕೆಲ ದಿನಗಳ ಹಿಂದೆಯೇ ಹತ್ಯೆಗೆ ಸಂಚು ರೂಪಿಸಿದ್ದ. ಆದರೆ, ಸಾಧ್ಯವಾಗಿಲ್ಲ ಎಂಬುದು ಗೊತ್ತಾಗಿದೆ ಎಂದು ಪೊಲೀಸರು ಹೇಳಿದರು.

ಕಾರು ಪಾರ್ಕಿಂಗ್‌ನಲ್ಲಿ ಕೊಲೆ: ಬುಧವಾರ ಬೆಳಗ್ಗೆ 9 ಗಂಟೆ ಸುಮಾರಿಗೆ ಕಾರು ಪಾರ್ಕಿಂಗ್‌ಗೆ ಬಂದ ಭಾಸ್ಕರ್‌ರೆಡ್ಡಿ ಅವರನ್ನು ಗಮನಿಸಿದ ಆರೋಪಿ, ಕಸ ಗುಡಿಸುವ ಸೋಗಿನಲ್ಲಿ ಪಾರ್ಕಿಂಗ್‌ ಸ್ಥಳಕ್ಕೆ ಹೋಗಿದ್ದಾನೆ. ಆಗ ಯಾರು ಇಲ್ಲದ ವೇಳೆ ಏಕಾಏಕಿ ಭಾಸ್ಕರ್‌ರೆಡ್ಡಿ ಅವರ ಕುತ್ತಿಗೆಗೆ ಚಾಕುವಿನಿಂದ ಇರಿದು ಕೊಲೆಗೈದಿದ್ದಾನೆ. ಕೂಡಲೇ ಸ್ಥಳೀ ಯರು ಭಾಸ್ಕರ್‌ ರೆಡ್ಡಿಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ತೀವ್ರರಕ್ತಸ್ರಾವ ಆಗುತ್ತಿದ್ದರಿಂದ ಚಿಕಿತ್ಸೆ ಫ‌ಲಕಾರಿಯಾಗದೆ 11 ಗಂಟೆ ಸುಮಾರಿಗೆ ಮೃತಪಟ್ಟಿದ್ದಾರೆ. ಘಟನೆ ಸಂಬಂಧ ಆರೋಪಿ ಬಸಂತ್‌ನನ್ನು ಬಂಧಿ.

Advertisement

ಪೆಟ್ರೋಲ್‌ ಬಂಕ್‌ ಸಿಬ್ಬಂದಿ ದರೋಡೆ ಯತ್ನ

ಬೆಂಗಳೂರು: ವಿಳಾಸ ಕೇಳುವ ಸೋಗಿನಲ್ಲಿ ಪೆಟ್ರೋಲ್‌ ಬಂಕ್‌ಗೆ ಬಂದ ದುಷ್ಕರ್ಮಿಯೊಬ್ಬ ಪೆಟ್ರೋಲ್‌ ಬಂಕ್‌ ಸಿಬ್ಬಂದಿಯಿಂದ ಹಣದ ಬ್ಯಾಗ್‌ ಕಸಿದು ಕೊಳ್ಳಲು ವಿಫ‌ಲ ಯತ್ನ ನಡೆಸಿರುವ ಘಟನೆ ಬ್ಯಾಟರಾಯನಪುರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಎರಡು ದಿನಗಳ ಹಿಂದೆ ಮೈಸೂರು ರಸ್ತೆಯಲ್ಲಿರುವ ಪೆಟ್ರೋಲ್‌ ಬಂಕ್‌ಗೆ ಹೆಲ್ಮೆಟ್‌ ಧರಿಸಿ ಬಂದ ದುಷ್ಕರ್ಮಿಯೊಬ್ಬ ವಿಳಾಸ ಕೇಳುವ ಸೋಗಿನಲ್ಲಿ ಪೆಟ್ರೋಲ್‌ ಬಂಕ್‌ ಸಿಬ್ಬಂದಿಯನ್ನು ಮಾತನಾಡಿಸಿದ್ದಾನೆ.

ಈ ವೇಳೆ ನೋಡ ನೋಡುತ್ತಿದ್ದಂತೆ ಏಕಾಏಕಿ ಮಾರಕಾಸ್ತ್ರ ತೋರಿಸಿ, ಸಿಬ್ಬಂದಿ ಕೈಯಲ್ಲಿದ್ದ ಹಣದ ಬ್ಯಾಗ್‌ ಕಸಿದುಕೊಳ್ಳಲು ಮುಂದಾಗಿ ದ್ದಾನೆ. ಆಗ ಸಿಬ್ಬಂದಿ ಪ್ರತಿರೋಧ ವ್ಯಕ್ತಪಡಿಸಿದಾಗ, ಮಾರಕಾಸ್ತ್ರದಿಂದ ಹಲ್ಲೆ ನಡೆಸಿದ್ದಾನೆ ಎಂದು ಪೊಲೀಸರು ಹೇಳಿದರು. ಆದರೂ ಸಿಬ್ಬಂದಿ ಹಣದ ಬ್ಯಾಗ್‌ ಬಿಟ್ಟಿಲ್ಲ. ನಡು ರಸ್ತೆಯಲ್ಲಿ ಇಬ್ಬರು ಜಗಳ ಮಾಡುತ್ತಿದ್ದರಿಂದ ಸಾರ್ವಜ ನಿಕರು ಜಮಾವಣೆಗೊಂಡಿದ್ದಾರೆ. ಆಗ ಗಾಬರಿಗೊಂಡ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಬಂಕ್‌ ಸಿಬ್ಬಂದಿ ದೂರು ನೀಡಿದ್ದಾರೆ. ಆರೋಪಿಗಾಗಿ ಶೋಧ ಕಾರ್ಯ ಮುಂದುವರಿದಿದೆ ಎಂದು ಪೊಲೀಸರು ಹೇಳಿದರು. ಬ್ಯಾಟರಾಯನಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next