Advertisement
ಕ್ರಿಸ್ಮಸ್ ಪ್ರಯುಕ್ತ ನಗರದ ಚರ್ಚ್‌ಗಳು, ಮಾಲ್, ಬ್ರಿಗೇಡ್ ರಸ್ತೆ, ಕ್ರೈಸ್ತರ ಮನೆಗಳನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಚರ್ಚ್ ಆವರಣ ಮತ್ತು ಮನೆಗಳಲ್ಲಿ ಆಕರ್ಷಕ ಗೋದಲಿಗಳನ್ನು ನಿರ್ಮಿಸಲಾಗಿತ್ತು, ನಕ್ಷತ್ರಗಳನ್ನು ಜೋಡಿಸಲಾಗಿತ್ತು.
Related Articles
Advertisement
ಎಲ್ಲಾ ಚರ್ಚ್‌ಗಳನ್ನು ಅಲಂಕಾರಿಕ ಸಾಮಗ್ರಿಗಳಿಂದ ಸಿಂಗರಿಸಲಾಗಿತ್ತು. ಚರ್ಚ್ ಮುಂಭಾಗದಲ್ಲಿರುವ ಕ್ರಿಸ್ಮಸ್ ಟ್ರೀಗಳಿಗೂ ಅಲಂಕಾರ ಮತ್ತು ಬಣ್ಣಬಣ್ಣದ ದೀಪ ಜೋಡಿಸಲಾಗಿತ್ತು. ಚರ್ಚ್‌ಗಳಲ್ಲಿ ವಿಶೇಷ ಪಾರ್ಥನೆ ನಡೆದವು.
ಮಾಲ್‌ಗಳಲ್ಲೂ ಸಡಗರ: ಕ್ರಿಸ್ಮಸ್ ಸಡಗರ ನಗರದ ಮಾಲ್‌ಗಳಿಗೂ ಆವರಿಸಿತ್ತು. ಹೀಗಾಗಿ ವಿಶೇಷ ಕೊಡುಗೆ ಘೋಷಿಸಿದ್ದವು. ಎಲ್ಲಾ ಮಾಲ್‌ಗಳಲ್ಲೂ ಕ್ರಿಸ್ಮಸ್ ಟ್ರೀ ಸ್ಥಾಪನೆ ಮಾಡಿ, ಅದಕ್ಕೂ ಅಲಂಕಾರ ಮಾಡಿದ್ದರು. ಮಾಲ್‌ಗೆ ಭೇಟಿ ನೀಡಿದ ಬಹುತೇಕರು ಕ್ರಿಸ್ಮಸ್ ಟ್ರೀ ಎದುರು ನಿಂತು ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದರು. ಸಾಂತಾಕ್ಲಾಸ್ ಟೋಪಿಗಳನ್ನು ಯುವ ಸಮೂಹ ಧರಿಸಿ ಚರ್ಚ್‌ಗಳ ಮುಂದೆ ಸೆಲ್ಫಿ ಕ್ಲಿಕ್ಕಿಸಿಕೊಂಡರು.
ಮಕ್ಕಳ ಕಲರವ: ಬಿಳಿಗಡ್ಡ, ಉದ್ದನೆಯ ಬಿಳಿಪಟ್ಟಿಯ ಕೆಂಪಂಗಿ, ಟೋಪಿ ಧರಿಸಿರುವ ಸಾಂತಾಕ್ಲಾಸ್ ಕೈ ಹಿಡಿದು ಆಟ ಆಡುವುದೇ ಮಕ್ಕಳಿಗೆ ಸಂಭ್ರಮ. ಶಿವಾಜಿನಗರ, ಎಂ.ಜಿ.ರಸ್ತೆ, ಜೆ.ಸಿ.ರಸ್ತೆ, ಚಾಮರಾಜಪೇಟೆ ಮೊದಲಾದ ಚರ್ಚ್‌ಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಸೇರಿದ್ದರು. ಕುಟುಂಬ ಸಮೇತರಾಗಿ ಬಂದಿದ್ದರಿಂದ ಮಕ್ಕಳು ಸಾಂತಾಕ್ಲಾಸ್‌ಜತೆ ಸಂಭ್ರಮದಿಂದ ಕುಣಿದು ಕುಪ್ಪಳಿಸಿದರು.
ಕ್ರಿಸ್ಮಸ್ ಆಚರಣೆ ಮನೆ ಮತ್ತು ಚರ್ಚ್‌ನಲ್ಲಿ ವೈಭವದಿಂದ ಮಾಡುತ್ತೇವೆ. ಯಾವುದೇ ಭೇದಭಾವ ಇಲ್ಲದೇ ಸ್ನೇಹಿತರನ್ನು ಮನೆಗೆ ಕರೆಯುತ್ತೇವೆ. ವಿಶೇಷ ಅಡುಗೆ ಮಾಡಿ ಎಲ್ಲರು ಜತೆಯಾಗಿ ಊಟ ಮಾಡಿ, ವೈನ್ ಕುಡಿದು ಸಂಭ್ರಮಿಸುತ್ತೇವೆ.-ಜಸಿಕಾ, ಗೃಹಿಣಿ ಸಾಂತಾಕ್ಲಾಸ್ ಬರುತ್ತಾರೆ ಎಂದರೆ ಅದೇ ಸಂತೋಷದ ವಿಷಯ. ಕ್ರಿಸ್ಮಸ್ ಗಿಫ್ಟ್ ಹಂಚಿಕೊಳ್ಳುತ್ತೇವೆ. ಹಬ್ಬದ ಸಂತಸವನ್ನು ಎಲ್ಲರೊಂದಿಗೂ ಕಳೆಯುತ್ತೇವೆ. ಕೇಕ್ ಮತ್ತು ವೈನ್ ವಿಶೇಷವಾಗಿರುತ್ತದೆ.
-ರಾಯನ್, ವಿದ್ಯಾರ್ಥಿ