Advertisement

ಗುರಿ ಸಾಧಿಸುವ ಮಹತ್ವಾಕಾಂಕ್ಷಿ ಹೊಂದಿ

12:47 PM Nov 18, 2017 | Team Udayavani |

ಹುಬ್ಬಳ್ಳಿ: ಸಾಧನೆಗೆ ಯಾವುದೇ ಮಿತಿ ಹಾಕಿಕೊಳ್ಳದೇ ಉನ್ನತ ಮಟ್ಟದ ಗುರಿಯನ್ನು ಈಡೇರಿಸಿಕೊಳ್ಳುವ ಮಹತ್ವಾಕಾಂಕ್ಷೆಯನ್ನು ವಿದ್ಯಾರ್ಥಿಗಳು ಹೊಂದುವುದು ಸೂಕ್ತ ಎಂದು ಶೈಕ್ಷಣಿಕ ತಜ್ಞ, ಸ್ಪೂನಿ ಬ್ರೂಕ್‌ ವಿಶ್ವವಿದ್ಯಾಲಯದ ಭಾರತೀಯ ಅಧ್ಯಯನ ಕೇಂದ್ರದ ಖಜಾಂಚಿ ರವಿಶಂಕರ ಭೂಪಳಾಪುರ ಹೇಳಿದರು. 

Advertisement

ಕೆಎಲ್‌ಇ ಸಂಸ್ಥೆಯ ಐಎಂಎಸ್‌ ಆರ್‌ ಎಂಬಿಎ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು. ಒಬ್ಬ ವಿದ್ಯಾರ್ಥಿ ಉತ್ತಮ ನಾಗರಿಕನಾಗಿ ಹೊರಹೊಮ್ಮಲು ಸಾಂಸ್ಕೃತಿಕ ಮೌಲ್ಯಗಳು ಪ್ರಭಾವ ಬೀರುತ್ತವೆ ಎಂದರು. 

ಸಾಮಾನ್ಯವಾಗಿ ದ್ವಿತೀಯ ಹಾಗೂ ತೃತೀಯ ದರ್ಜೆ ಪಟ್ಟಣಗಳ ವಿದ್ಯಾರ್ಥಿಗಳೇ ಅಮೋಘ ಸಾಧನೆ ಮಾಡುತ್ತಿದ್ದಾರೆ. ಜಾಗತೀಕರಣದ ಪರಿಣಾಮದಿಂದ ಉದ್ಯೋಗಾವಕಾಶಗಳು ವಿಶ್ವದೆಲ್ಲೆಡೆ ಹೇರಳವಾಗಿದ್ದು, ಇದರ ಸದುಪಯೋಗ ಪಡೆದುಕೊಳ್ಳುವಲ್ಲಿ ವಿದ್ಯಾರ್ಥಿಗಳು ಯತ್ನಿಸಬೇಕು.

ವಿದ್ಯಾರ್ಥಿಗಳು ಕೀಳರಿಮೆ ತೊರೆದು ಆತ್ಮವಿಶ್ವಾಸದ ಮೂಲಕ ಪ್ರತಿಭೆ ಪ್ರದರ್ಶಿಸಿ ಸವಾಲುಗಳನ್ನು ಮೆಟ್ಟಿ ನಿಲ್ಲಬೇಕು ಎಂದರು. ಡಾ| ಎಸ್‌.ವಿ. ಪಾಟೀಲ, ಡಾ| ರಾಜೇಂದ್ರ ಪ್ರಸಾದ ಹನಗಂಡಿ ಮೊದಲಾದವರಿದ್ದರು. ಡಾ| ಪ್ರಸಾದ ರೂಡಗಿ ಸ್ವಾಗತಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next