Advertisement
2019 ರಲ್ಲಿ ಕಾಂಗ್ರೆಸ್ ಜತೆ ಹೊಂದಾಣಿಕೆ ಮಾಡಿಕೊಂಡಿದ್ದ ಜೆಡಿಎಸ್‌ಗೆ ತುಮಕೂರಿನಲ್ಲಿ ಪಕ್ಷದ ವರಿಷ್ಠ ಎಚ್.ಡಿ. ದೇವೇಗೌಡ, ಮಂಡ್ಯದಲ್ಲಿ ನಿಖೀಲ್ ಕುಮಾರಸ್ವಾಮಿ, ಉಡುಪಿ-ಚಿಕ್ಕಮಗಳೂರಿನಲ್ಲಿ ಪ್ರಮೋದ್ ಮಧ್ವರಾಜ್ ಹಾಗೂ ವಿಜಯಪುರದಲ್ಲಿ ಸುನೀತಾ ಚೌಹಾಣ್ ಅವರ ಸೋಲಿನ ಕಹಿ ಅರಗಿಸಿಕೊಳ್ಳಲಾಗಿರಲಿಲ್ಲ. ಏಳು ಕ್ಷೇತ್ರಗಳಲ್ಲಿ ಸ್ಪರ್ಧಿಸಿದರೂ ಗೆದ್ದಿದ್ದು ಮಾತ್ರ ಮೊದಲಿನಿಂದಲೂ ಪಾರಮ್ಯ ಮೆರೆದಿದ್ದ ಹಾಸನ ಲೋಕಸಭಾ ಕ್ಷೇತ್ರವೊಂದರಲ್ಲೇ. ಅಂದರೆ ಸ್ಪರ್ಧಿಸಿದ್ದ ಆರು ಕ್ಷೇತ್ರಗಳನ್ನು ಕಳೆದುಕೊಂಡಿತ್ತು.
ಇದೆಲ್ಲವೂ ಪಕ್ಷದ ಬೆಳವಣಿಗೆಗೆ ಮಾರಕ ಎಂಬುದನ್ನು ಅರಿತ ಜೆಡಿಎಸ್ ನಾಯಕರು, ವಿಧಾನಸಭೆ ಚುನಾವಣೆ ಬಳಿಕ ಬಿಜೆಪಿಯೊಟ್ಟಿಗೆ ಹೊಂದಾಣಿಕೆ ಮಾಡಿಕೊಳ್ಳುವ ಮಹತ್ವದ ನಿರ್ಧಾರ ಮಾಡಿದ್ದರು. ಆರಂಭದಲ್ಲಿ ಈ ಮೈತ್ರಿಯೂ ಮುರಿದು ಬೀಳುವ ಮಾತುಗಳು ಕೇಳಿಬಂದಿತ್ತಲ್ಲದೆ, ಮೇಲ್ಮಟ್ಟದ ನಾಯಕರು ಹೊಂದಾಣಿಕೆ ಮಾಡಿಕೊಂಡರೂ ಬಿಜೆಪಿ ಕಾರ್ಯಕರ್ತರೊಂದಿಗೆ ಜೆಡಿಎಸ್ ಕಾರ್ಯಕರ್ತರು ಹೊಂದಿಕೊಳ್ಳುವುದಿಲ್ಲ ಎಂಬ ಒಡಕು ಧ್ವನಿಯೇ ಹೆಚ್ಚಾಗಿತ್ತು.
Related Articles
Advertisement
ಕೈ ಕಟ್ಟಿ ಹಾಕಿ, ಬೇರು ವಿಸ್ತರಿಸುವ ಸಮಯ:ಅಂದರೆ ಮೂರು ಕ್ಷೇತ್ರದಲ್ಲಿ ಸ್ಪರ್ಧಿಸಿ ಎರಡರಲ್ಲಿ ಗೆಲ್ಲುವ ಮೂಲಕ ಶೇ.80 ರಷ್ಟು ಸ್ಥಾನಗಳನ್ನು ಗೆದ್ದಂತಾಗಿದೆ. ಒಟ್ಟಾರೆ ಚಲಾವಣೆಯಾಗಿರುವ ಮತಗಳ ಪೈಕಿ ಸುಮಾರು ಶೇ.5.60ರಷ್ಟು ಮತವು ಜೆಡಿಎಸ್‌ಗೆ ಬತ್ತಳಿಕೆಗೆ ಬಂದಿದೆ. ಚಿಂತೆಗಳು ದೂರಾಗಿ, ಮೈಕೊಡವಿಕೊಂಡು ಎದ್ದಿರುವ ಜೆಡಿಎಸ್, ಪ್ರಸ್ತುತ ವಿಧಾನ ಪರಿಷತ್ ಚುನಾವಣೆಗಳಲ್ಲೂ ಮೈತ್ರಿ ಮುಂದುವರಿಸಿದೆ. ಮುಂದಿನ ದಿನಗಳಲ್ಲಿ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ಸ್ಥಳೀಯ ಸಂಸ್ಥೆಗಳು, ಬಿಬಿಎಂಪಿ ಚುನಾವಣೆಗಳಲ್ಲೂ ಇದೇ ರೀತಿ ಹೊಂದಾಣಿಕೆಯನ್ನು ಕೆಲಸ ಮಾಡಿದರೆ, ಕಾಂಗ್ರೆಸ್‌ನ್ನು ಕಟ್ಟಿ ಹಾಕುವುದರ ಜತೆಗೆ ಜೆಡಿಎಸ್‌ನ ಬೇರುಗಳನ್ನು ಮತ್ತಷ್ಟು ಹರಡಬಹುದು ಎಂಬ ಲೆಕ್ಕಾಚಾರವಿದೆ. -ಶೇಷಾದ್ರಿ ಸಾಮಗ