ಹಾವೇರಿ: ಬಿಸಿಲಿನ ಪ್ರಖರತೆಗೆ ಪೈಪೋಟಿ ನೀಡುವಂತೆ ಹಾವೇರಿ ಲೋಕಸಭೆ ಕ್ಷೇತ್ರದಲ್ಲಿ ಚುನಾವಣೆ ಕಾವು ಸಹ ಏರುತ್ತಿದೆ. ಕಣದಲ್ಲಿರುವ ಕಲಿಗಳ ನಡುವೆ ಆರೋಪ-ಪ್ರತ್ಯಾರೋಪಗಳೇ ಜಾಸ್ತಿಯಾಗಿದ್ದು, ಕ್ಷೇತ್ರದ ಸಮಸ್ಯೆ ಅಕ್ಷರಶಃ ನಾಸ್ತಿಯಾಗಿದೆ.
ಕ್ಷೇತ್ರದಲ್ಲಿ ಪ್ರಮುಖವಾಗಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ. ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಪಕ್ಷದ ನಾಯಕರನ್ನು ಜಿಲ್ಲೆಗೆ ಪ್ರಚಾರಾರ್ಥ ಕರೆತರುವ ಯತ್ನ ಮುಂದುವರಿಸಿದ್ದಾರೆ. ರಾಜ್ಯ ಮುಖಂಡರಾಗಲಿ. ಕ್ಷೇತ್ರದ ಅಭ್ಯರ್ಥಿಯಾಗಲಿ ಇಲ್ಲವೇ ಜಿಲ್ಲೆಯ ಮುಖಂಡರಾಗಲಿ ಯಾರೂ ಕ್ಷೇತ್ರದ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುತ್ತಿಲ್ಲ. ಕೇಂದ್ರ ಸರ್ಕಾರ ಮಟ್ಟದಲ್ಲಿ ಗಮನಸೆಳೆದು ಕ್ಷೇತ್ರಕ್ಕೆ ವಿಶೇಷ ಯೋಜನೆ, ವಿಶೇಷ ಅನುದಾನ ತರುವ ಬಗ್ಗೆ ಪ್ರಚಾರದಲ್ಲಿ ಪ್ರಸ್ತಾಪಿಸುತ್ತಿಲ್ಲ. ಒಟ್ಟಾರೆ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಯಾರೂ ಮಾತನಾಡದಿರುವುದು ಪ್ರಜ್ಞಾವಂ ತಮತದಾರರಲ್ಲಿ ಅಸಮಾಧಾನ ಮೂಡಿಸಿದೆ.
ಸ್ಥಳೀಯ ಕಣದಲ್ಲೂ ಮೋದಿ-ರಾಹುಲ್ ಸ್ಪರ್ಧೆ!: ಕ್ಷೇತ್ರದಲ್ಲಿ ನಡೆಯುತ್ತಿರುವ ಪ್ರಚಾರ ವೈಖರಿ ನೋಡಿದರೆ ಸ್ಪರ್ಧೆ ಕಣದಲ್ಲಿರುವ ಅಭ್ಯರ್ಥಿಗಳ ನಡುವೆ ನಡೆಯುತ್ತಿಲ್ಲ. ಬದಲಾಗಿ ಮೋದಿ ಹಾಗೂ ಕಾಂಗ್ರೆಸ್ ನಡುವೆ ಸ್ಪರ್ಧೆ ನಡೆಯುತ್ತಿರುವಂತೆ ಭಾಸವಾಗುತ್ತಿದೆ. ಕಾಂಗ್ರೆಸ್‌ನವರು ಮೋದಿಯನ್ನೇ ಗುರಿಯಾಗಿಸಿಕೊಂಡು ಟೀಕಾಸ್ತ್ರ ಬಿಡುತ್ತಿದ್ದರೆ, ಬಿಜೆಪಿಯವರು ಈ ಹಿಂದೆ ಆಡಳಿತ ಮಾಡಿದ ಕಾಂಗ್ರೆಸ್ ಸರ್ಕಾರ ಮತ್ತು ರಾಹುಲ್ ಗಾಂಧಿಯನ್ನು ಮುಖ್ಯವಾಗಿಸಿಕೊಂಡು ಟೀಕಾ ಪ್ರಹಾರ ಮಾಡುತ್ತಿದ್ದಾರೆ. ಹೀಗಾಗಿ ಕಣದಲ್ಲಿ ಮೋದಿ-ರಾಹುಲ್ ಅವರೇ ಸ್ಪರ್ಧೆಗೆ ನಿಂತಂತಾಗಿದೆ.
“ಮೋದಿ ಮೊತ್ತೂಮ್ಮೆ’, “ದೇಶದ ರಕ್ಷಣೆಗೆ ಮೋದಿ ಅವಶ್ಯ’ ಎಂದು ಬಿಜೆಪಿಯವರು ಘೋಷಣೆ ಹಾಕುತ್ತಿದ್ದರೆ, ಕಾಂಗ್ರೆಸ್‌ನವರು “ಪ್ರಜಾಪ್ರಭುತ್ವದ ಉಳಿವಿಗೆ ಕಾಂಗ್ರೆಸ್ ಅವಶ್ಯ’, “ಕೋಮುವಾದಿ ಬಿಜೆಪಿಯನ್ನು ದೂರವಿಟ್ಟರೆ ಮಾತ್ರ ದೇಶದಲ್ಲಿ ಐಕ್ಯತೆ, ಸರ್ವ ಜನಾಂಗದ ನೆಮ್ಮದಿ ಸಾಧ್ಯ’ ಎಂದು ಪ್ರಚಾರ ಮಾಡುತ್ತಿದ್ದಾರೆ. ಇತ್ತ ಬಿಜೆಪಿ ಅಭ್ಯರ್ಥಿ ಶಿವಕುಮಾರ ಉದಾಸಿ, ಮೋದಿಯ ಗುಣಗಾನ, ಬಿಜೆಪಿ ಸರ್ಕಾರದ ಸಾಧನೆ ಬಗ್ಗೆ ಮಾತನಾಡುತ್ತಿದ್ದರೆ ಕಾಂಗ್ರೆಸ್ ಅಭ್ಯರ್ಥಿ ಡಿ.ಆರ್. ಪಾಟೀಲ, ಮೋದಿಯನ್ನು ತೆಗಳುವುದು, ಕಾಂಗ್ರೆಸ್ ಸರ್ಕಾರದ ಸಾಧನೆ ಹೊಗಳುವುದು ಮಾಡುತ್ತಿದ್ದಾರೆ.
ಯೋಜನೆ, ಯೋಚನೆ ಇಲ್ಲ: ಕ್ಷೇತ್ರದ ಅಭ್ಯರ್ಥಿಗಳು ತಮ್ಮ ವಿಚಾರ, ಯೋಜನೆ, ಆಲೋಚನೆಗಳ ಬಗ್ಗೆ ಜನರಿಗೆ ತಿಳಿಸುತ್ತಿಲ್ಲ. ಬಿಜೆಪಿ ಅಭ್ಯರ್ಥಿ ಶಿವಕುಮಾರ ಉದಾಸಿ ತಮಗಿರುವ ಅವಕಾಶ ಬಳಸಿಕೊಂಡು ಅಭಿವೃದ್ಧಿ ಮಾಡುತ್ತೇನೆ ಎನ್ನುತ್ತಾರೆಯೇ ಹೊರತು ನಿರ್ದಿಷ್ಟವಾಗಿ ಏನು ಮಾಡುತ್ತಾರೆ. ಏನು ಯೋಜನೆ ಹಾಕಿಕೊಂಡಿದ್ದಾರೆ ಎಂಬ ಬಗ್ಗೆ ಹೆಚ್ಚಾಗಿ ಪ್ರಸ್ತಾಪಿಸುತ್ತಿಲ್ಲ. ಕಾಂಗ್ರೆಸ್ ಅಭ್ಯರ್ಥಿ ಡಿ.ಆರ್. ಪಾಟೀಲ ಮಾದರಿ ಕ್ಷೇತ್ರ ಮಾಡುತ್ತೇನೆ ಎನ್ನುತ್ತಾರಾದರೂ ಏನು ಮಾಡುತ್ತೇನೆ, ಯೋಚನೆ, ಯೋಜನೆ ಏನಿದೆ ಎಂಬ ಬಗ್ಗೆ ಪ್ರಸ್ತಾಪಿಸುತ್ತಿಲ್ಲ. ಒಟ್ಟಾರೆ ಪ್ರಮುಖ ಪೈಪೋಟಿ ನಡೆಸಿರುವ ಬಿಜೆಪಿ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳು ಪರಸ್ಪರ ಆರೋಪ-ಪ್ರತ್ಯಾರೋಪಗಳಲ್ಲೇ ಪ್ರಚಾರದ ಅಸ್ತ್ರವನ್ನಾಗಿಸಿಕೊಂಡಿದ್ದಾರೆ. ಹೀಗಾಗಿ ಕ್ಷೇತ್ರದಲ್ಲಿ ಎರಡೂ ಪಕ್ಷಗಳಿಂದ ಆರೋಪ- ಪ್ರತ್ಯಾರೋಪಗಳೇ ಜಾಸ್ತಿಯಾಗಿದ್ದು ಅಭಿವೃದ್ಧಿ ನಾಸ್ತಿಯಾಗಿ¨
ಎಚ್.ಕೆ. ನಟರಾಜ