Advertisement

ಪಟ್ಟಣದ ಸರ್ವತೋಮುಖ ಅಭಿವೃದ್ಧಿಗೆ ಕೈ ಜೋಡಿಸಿ

01:13 PM Mar 11, 2017 | Team Udayavani |

ಹೊನ್ನಾಳಿ: 2017-18 ನೇ ಸಾಲಿನ ಪಪಂ ಬಜೆಟ್‌ನಲ್ಲಿ 25,03,943 ರೂ. ಉಳಿತಾಯ ಬಜೆಟ್‌ ಮಂಡನೆ ಮಾಡಲಾಗಿದ್ದು, ಪಟ್ಟಣದ ಸರ್ವತೋಮುಖ ಅಭಿವೃದ್ಧಿಗೆ ಎಲ್ಲ ಸದಸ್ಯರು ಕೈಜೋಡಿಸಬೇಕು ಎಂದು ಪಪಂ ಅಧ್ಯಕ್ಷೆ ಶ್ರೀದೇವಿ ಧರ್ಮಪ್ಪ ಹೇಳಿದರು. ಪ್ರಥಮ ಬಾರಿಗೆ ತುಂಗಭದ್ರಾ ನದಿ ತಟದಲ್ಲಿರುವ ನೀರು ಸರಬರಾಜು ಕೇಂದ್ರದ ಅವರಣದಲ್ಲಿ 2017-18ರ ಪಪಂ ಬಜೆಟ್‌ ಮಂಡಿಸಿ ಅವರು ಮಾತನಾಡಿದರು. 

Advertisement

ಆರಂಭಿಕ ಶಿಲ್ಕು 26,14,152 ರೂ., ವಿವಿಧ ಬಾಬಿ¤ನ ಜಮೆಗಳು 8,71,07,000 ರೂ. ಇದ್ದು ಅಂದಾಜು ಖರ್ಚು 8,72,17,209 ರೂ. ಇರುತ್ತದೆ ಎಂದು ತಿಳಿಸಿದರು. ಪಟ್ಟಣದ ಅಭಿವೃದ್ಧಿಗಾಗಿ ಎಲ್ಲ ಕ್ಷೇತ್ರಗಳಿಗೆ ಗಮನ ಹರಿಸಿ ಅನುದಾನದ ಹಂಚಿಕೆ ಮಾಡಲಾಗಿದೆ. ಪಟ್ಟಣದಲ್ಲಿ ನಡೆಯುವ ಕಾಮಗಾರಿಗಳು ಕಳಪೆ ಇಲ್ಲದಂತೆ ನಡೆಯಬೇಕು. 

ಜನರಿಂದ ಆಯ್ಕೆಯಾದ ನಾವುಗಳು ಸಾಮಾನ್ಯರ ಸಂಕಷ್ಟಕ್ಕೆ ಸ್ಪಂದಿಸಿ ಕೆಲಸ ಮಾಡಬೇಕು ಎಂದರು.ವಿರೋಧ ಪಕ್ಷದ ಸದಸ್ಯ ಪ್ರಶಾಂತ್‌ ಮಾತನಾಡಿ, ಬಜೆಟ್‌ನಲ್ಲಿ ಅಂಗನವಾಡಿ, ಶಾಲಾ ಕಟ್ಟಡಗಳ ಬಗ್ಗೆ ಮತ್ತು ಮಾಜಿ ಸೈನಿಕರ ಹಿತ ಕಾಪಾಡುವ ಬಗ್ಗೆ ಅನುದಾನ ಮೀಸಲಿಡಲಾಗಿಲ್ಲ  ಎಂದು ಟೀಕಿಸಿದರು. ಸದಸ್ಯ ಕೆ.ಪಿ. ಕುಬೇಂದ್ರಪ್ಪ ಮಾತನಾಡಿ, ಪಟ್ಟಣದಲ್ಲಿ ರಸ್ತೆಗಳೆಲ್ಲ ಹಾಳಾಗಿ ಹೋಗಿದ್ದು ತಕ್ಷಣದ ದುರಸ್ತಿಗೆ ಬಜೆಟ್‌ನಲ್ಲಿ ವಿಶೇಷ ಅನುದಾನ ತೆಗೆದಿಲ್ಲ.

ಪಟ್ಟಣದಲ್ಲಿ ಯಾವ ಕೇರಿಯಲ್ಲಿಯೂ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ ಮಾಡಿರುವುದಿಲ್ಲ. ಬಜೆಟ್‌ ಮಂಡನೆಗೂ ಮುನ್ನ ಪಟ್ಟಣದ ವಿವಿಧ ಸಂಘ ಸಂಸ್ಥೆಗಳ ಪದಾಧಿಧಿಕಾರಿಗಳು ಹಾಗೂ ಮುಖಂಡರನ್ನು ಕರೆದು ಪೂರ್ವಭಾವಿ ಸಭೆ ಮಾಡಿ ಸಲಹೆ ಸೂಚನೆಗಳನ್ನು ಪಡೆಯಬೇಕಿತ್ತು ಎಂದು ಹೇಳಿದರು. 

ಇದಕ್ಕೆ ಪ್ರತಿಕ್ರಿಯಿಸಿದ ಆಡಳಿತ ಪಕ್ಷದ ಸದಸ್ಯಎಚ್‌.ಬಿ.ಅಣ್ಣಪ್ಪ, ಮುಂದಿನ ದಿನಗಳಲ್ಲಿ ಇತರೆ ಅನುದಾನವನ್ನು ಬಳಸಿಕೊಂಡು ರಸ್ತೆ ಅಭಿವೃದ್ಧಿ ಸೇರಿದಂತೆ, ಇತರ ಕಾಮಗಾರಿಗಳಿಗೆ ಗಮನ ನೀಡಲಾಗುವುದು ಎಂದು ಹೇಳಿದರು. ಪಪಂ ಮುಖ್ಯಾಧಿಕಾರಿ ಎಸ್‌.ಆರ್‌. ವೀರಭದ್ರಯ್ಯ ಮಾತನಾಡಿ, ಬಜೆಟ್‌ ಮಂಡನೆಯ ಪೂರ್ವದಲ್ಲಿ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಮುಖಂಡರ ಸಭೆ ಮಾಡಲಾಗಿದೆ.

Advertisement

ಪಟ್ಟಣಕ್ಕೆ ಬೇಕಾಗಿರುವಮುಕ್ತಿವಾಹಿನಿ, ಸಾಂಸ್ಕೃತಿಕ ಕಾರ್ಯಕ್ರಮಗಳ ಬಗ್ಗೆ ಸಲಹೆ ಸೂಚನೆಗಳನ್ನು ನೀಡಿದ್ದಾರೆ. ಈಗ ಸದಸ್ಯರು ಕೇಳಿರುವ ಎಲ್ಲ ಅಂಶಗಳ ಬಗ್ಗೆ ಗಮನನೀಡಲಾಗುವುದು ಎಂದು ಹೇಳಿದರು. ಸದಸ್ಯ ವಿಜೇಂದ್ರಪ್ಪ ಮಾತನಾಡಿ, ಶಾಸಕ ಡಿ.ಜಿ. ಶಾಂತನಗೌಡ ಈಗಾಗಲೇ ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಿದ್ದಾರೆ.

ಮುಂದಿನ ದಿನಗಳಲ್ಲಿ ಶಾಸಕರ ಸಹಾಯ ಪಡೆದು ಶುದ್ಧ ಕುಡಿಯುವ ನೀರಿನ ಘಟಕಗಳನ್ನು 16 ವಾಡ್‌ ಗಳಲ್ಲಿ ಸ್ಥಾಪಿಸಲಾಗುವುದು ಎಂದರು. ಪಪಂ ಸದಸ್ಯರಾದ ಸುರೇಶ್‌ ಹೊಸಕೇರಿ, ಮಂಜಪ್ಪ ಸರಳಿನಮನೆ ಮಾತನಾಡಿದರು. ಪಪಂ ಉಪಾಧ್ಯಕ್ಷೆ ವೀಣಾ ಸುರೇಶ್‌, ಸದಸ್ಯರಾದ ಎಸ್‌.ಎನ್‌. ಪ್ರಕಾಶ್‌, ಚಂದ್ರಶೇಖರ ಪಾಟೀಲ್‌, ಗುಲ್‌ಶಿರಾಖಾನಂ, ಜಿ.ಆರ್‌. ಕವಿತಾ, ವಿಜಯಮ್ಮ, ಸುಶೀಲಮ್ಮ ದುರ್ಗಪ್ಪ, ನೂತನ ನಾಮ ನಿರ್ದೇಶನ ಸದಸ್ಯರಾದ ಮಾಲತೇಶ್‌ ಪಾಟೀಲ್‌, ಚಮನ್‌ಸಾಬ್‌, ಅಶೋಕ್‌,  ಕಂದಾಯ ನಿರೀಕ್ಷಕ ವಸಂತ್‌ ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next