Advertisement

ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿ

03:07 PM Feb 10, 2017 | |

ಜೇವರ್ಗಿ: ಮಕ್ಕಳಿಗೆ ಕಲಿಕೆ ಎನ್ನುವುದು ಆನಂದವಾಗಿರಬೇಕೆ ವಿನಃ ಒತ್ತಡವಾಗಿರಬಾರದು. ಮಕ್ಕಳ ಆಸಕ್ತಿ ಗಮನಿಸಿ ಶೈಕ್ಷಣಿಕ ಚಟುವಟಿಕೆ ಹಮ್ಮಿಕೊಳ್ಳಬೇಕು ಎಂದು ಯಲಗೋಡ-ಮೋರಟಗಿ ವಿರಕ್ತ ಮಠದ ಪೀಠಾಧಿಧಿಪತಿ ಗುರುಲಿಂಗ ದೇವರು ಹೇಳಿದರು. 

Advertisement

ಪಟ್ಟಣದ ನರಿಬೋಳ ರಸ್ತೆಯಲ್ಲಿರುವ ಶ್ರೀ ನೂರಂದೇಶ್ವರ ಆಂಗ್ಲ ಮತ್ತು ಕನ್ನಡ ಮಾಧ್ಯಮ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಲಾಗಿದ್ದ ಮಕ್ಕಳ ಸಾಂಸ್ಕೃತಿಕ ಸೌರಭ ಹಾಗೂ ಮಕ್ಕಳಿಂದ ತಾಯಂದಿರ ಪಾದಪೂಜೆ ಕಾರ್ಯಕ್ರಮದ ನೇತೃತ್ವ ವಹಿಸಿ ಅವರು ಮಾತನಾಡಿದರು. 

ಸರ್ವತೋಮುಖ ಅಭಿವೃದ್ಧಿಗಾಗಿ ಪಠ್ಯೇತರ ಚಟುವಟಿಕೆಗಳಲ್ಲಿ ಮಕ್ಕಳು ಸಕ್ರಿಯವಾಗಿ ಪಾಲ್ಗೊಳ್ಳುವುದು ಅಗತ್ಯ. ಪ್ರತಿ ಶಾಲೆಯಲ್ಲಿಯೂ ಮಕ್ಕಳ ಆಸಕ್ತಿಗೆ ಅನುಗುಣವಾಗಿ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳನ್ನು ಸಮನಾಗಿ ಆಯೋಜನೆ ಮಾಡಬೇಕು. ಇದರಿಂದ ಮಕ್ಕಳು ಪರಿಪೂರ್ಣ ವ್ಯಕ್ತಿಗಳಾಗಿ ಹೊರಬರಲು ಸಾಧ್ಯವಾಗುತ್ತದೆ ಎಂದರು.

ಪ್ರತಿಯೊಬ್ಬ ವಿದ್ಯಾರ್ಥಿ ಗುರಿಯಿಟ್ಟುಕೊಂಡು ಮುಂದೆ ಸಾಗಿದರೆ ಯಶಸ್ಸು ಖಂಡಿತವಾಗಿ ದೊರೆಯುತ್ತದೆ. ಮಕ್ಕಳಲ್ಲಿ ಹುದುಗಿರುವ ಪ್ರತಿಭೆ ಹೊರ ಹಾಕುವುದಕ್ಕಾಗಿ ಹಾಗೂ ಮಕ್ಕಳ ವಿಕಸನಕ್ಕಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳು ಅತ್ಯಗತ್ಯ. ಮಕ್ಕಳಲ್ಲಿ ಹುದುಗಿರುವ ಅದ್ಭುತ ಶಕ್ತಿಯನ್ನು ಶಿಕ್ಷಕರು ಹಾಗೂ ಪಾಲಕರು ಗುರುತಿಸುವ ಕೆಲಸ ಮಾಡಬೇಕು ಎಂದು ಹೇಳಿದರು. ಇದಕ್ಕೂ ಮುನ್ನ ಸಮಾರಂಭವನ್ನು ಜೇರಟಗಿ ವಿರಕ್ತ ಮಠದ ಮಹಾಂತ ಸ್ವಾಮೀಜಿ ಉದ್ಘಾಟಿಸಿದರು.

ಮಳಖೇಡದ ಹಜರತ್‌ ಸಯ್ಯದ್‌ ಶಹಾ ಮುಸ್ತಫಾ ಖಾದ್ರಿ ಸಾನಿಧ್ಯ, ಸಂಸ್ಥೆಯ ನಿರ್ದೇಶಕ ಡಾ| ಪಿ.ಎಂ.ಮಠ ಅಧ್ಯಕ್ಷತೆ ವಹಿಸಿದ್ದರು. ನಿರ್ದೇಶಕರಾದ ಬಾಪುರಾವ ಪಾಗಾ, ರತನಸಿಂಗ್‌ ರಾಠೊಡ, ಸಂಸ್ಥೆಯ ಕಾರ್ಯದರ್ಶಿ ಎಂ.ಎಸ್‌.ಹಿರೇಮಠ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಸಂಚಾಲಕ ಎ.ಸಿ.ಹಾರಿವಾಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖ್ಯಶಿಕ್ಷಕ ಬಿ.ಎಸ್‌. ಪಾಟೀಲ ಸ್ವಾಗತಿಸಿದರು, ಪರಶುರಾಮ ನಿರೂಪಿಸಿದರು, ಕರುಣಾ ಹಿರೇಮಠ ವಂದಿಸಿದರು. 

Advertisement

ತಾಯಂದಿರ ಪಾದಪೂಜೆ: ನೂರಂದೇಶ್ವರ ಶಾಲೆ ಆವರಣದಲ್ಲಿ ನೂರಾರು ಮಾತೆಯರಿಗೆ ಮಕ್ಕಳಿಂದ ಪಾದಪೂಜೆ ಹಾಗೂ ಕೈತುತ್ತು ತಿನ್ನಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಪ್ರಾಚಾರ್ಯರಾದ ವೆಂಕಟರಾವ್‌ ಮುಜುಮದಾರ, ನಿಂಬೆಣ್ಣ ರುದ್ರಪ್ಪಗೋಳ, ಮಹಾದೇವಯ್ಯ ಸ್ಥಾವರಮಠ, ಸಿ.ಬಿ. ಕಮರಿಮಠ, ರಾಘವೆಂದ್ರ ಕುಲಕರ್ಣಿ, ರಾಕೇಶ ಹರಸೂರ, ಪ್ರಶಾಂತ ಸಂಗಶೆಟ್ಟಿ, ಆಯಾಜ್‌ ಜಮಾದಾರ ಹಾಜರಿದ್ದರು.  

Advertisement

Udayavani is now on Telegram. Click here to join our channel and stay updated with the latest news.

Next