Advertisement
ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ಪ್ರಪ್ರಥಮ ಬಾರಿಗೆ 1915 ಬೆಂಗಳೂರಿನಲ್ಲಿ ಜರುಗಿದ್ದು, ಇದೀಗ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಆತಿಥ್ಯಕ್ಕೆ ಹಾವೇರಿ ನೆಲ ಸಾಕ್ಷಿಯಾಗಲಿದೆ. ಈವರೆಗೂ ನಡೆದ 85 ಸಾಹಿತ್ಯ ಸಮ್ಮೇಳನಗಳು ನಡೆದ ವರ್ಷ, ಸ್ಥಳ ಹಾಗೂ ಸಮ್ಮೇನಾಧ್ಯಕ್ಷರ ವಿವರ ಈ ಕೆಳಗಿನಂತಿದೆ.
Related Articles
Advertisement
1933ರ ಡಿ.29ರಿಂದ 31ರವರೆಗೆ ಹುಬ್ಬಳ್ಳಿಯಲ್ಲಿ ನಡೆದ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ವೈ.ನಾಗೇಶ ಶಾಸ್ತ್ರಿ ಅಧ್ಯಕ್ಷತೆ ವಹಿಸಿದ್ದರು. 1934ರ ಡಿ.28-30ರವರೆಗೆ ರಾಯಚೂರಿನಲ್ಲಿ ಪಂಜೆ ಮಂಗೇಶರಾವ್ ಅಧ್ಯಕ್ಷತೆಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ಜರುಗಿತು. ಎನ್.ಎಸ್. ಸುಬ್ಬರಾವ್ ಅಧ್ಯಕ್ಷತೆಯಲ್ಲಿ ಮುಂಬೈನಲ್ಲಿ 1935ರಲ್ಲಿ ಡಿ.26-28ರವರೆಗೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಿತು. 1937ರ ಡಿ.29ರಿಂದ 31ರವರೆಗೆಜಮಖಂಡಿಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಬೆಳ್ಳಾವೆ ವೆಂಕಟನಾರಾಣಪ್ಪ ಅಧ್ಯಕ್ಷತೆ ವಹಿಸಿದ್ದರು. 1938ರ 29-31ರವರೆಗೆ ಬಳ್ಳಾರಿಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ರಂಗನಾಥ ದಿವಾಕರ ವಹಿಸಿದ್ದರು. ಡಿ.25ರಿಂದ 28ರವರೆಗೆ 1939ರಲ್ಲಿ ಬೆಳಗಾವಿಯಲ್ಲಿ ಮುದವೀಡು ಕೃಷ್ಣರಾವ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. 1940ರ ಡಿ.27-29ರವರೆಗೆ ಧಾರವಾಡದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ವೈ.ಚಂದ್ರಶೇಖರ ಶಾಸ್ತ್ರಿ ವಹಿಸಿದ್ದರು. 1941ರಲ್ಲಿ ಡಿ.27ರಿಂದ 29ರವರೆಗ ಹೈದರಾಬಾದ್‌ನಲ್ಲಿ ನಡೆದ ಸಾಹಿತ್ಯ ಸಮ್ಮೇಳನ ಎ.ಆರ್.ಕೃಷ್ಣಶಾಸ್ತ್ರಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. 1943ರ ಜ.26-28ರವರೆಗೆ ಶಿವಮೊಗ್ಗದಲ್ಲಿ ನಡೆದ ಸಾಹಿತ್ಯ ಸಮ್ಮೇಳನದಲ್ಲಿ ದ.ರಾ.ಬೇಂದ್ರೆ ಅಧ್ಯಕ್ಷತೆ ವಹಿಸಿದ್ದರು. 1944ರ ಡಿ.28-30ರವರೆಗೆ ರಬಕವಿಯಲ್ಲಿ ನಡೆದ ಸಾಹಿತ್ಯ ಸಮ್ಮೇಳನ ಶಿ.ಶಿ.ಬಸವನಾಳ ಅಧ್ಯಕ್ಷತೆಯಲ್ಲಿ ಜರುಗಿತು. 1945ರ ಡಿ.26ರಿಂದ 28ರವರೆಗೆ ಮದರಾಸುನಲ್ಲಿ ನಡೆದ ಸಾಹಿತ್ಯ ಸ ಳನದ ಅಧ್ಯಕ್ಷತೆಯನ್ನು ಟಿ.ಪಿ.ಕೈಲಾಸಂ ವಹಿಸಿದ್ದರು. 1947ರ ಮೇ 7ರಿಂದ 9ರವರೆಗೆ ಹರಪನಹಳ್ಳಿಯಲ್ಲಿ ನಡೆದ ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ ಸಿ.ಕೆ.ವೆಂಕಟರಾಮಯ್ಯ ಅಧ್ಯಕ್ಷತೆ ವಹಿಸಿದ್ದರು. 1948 ಡಿ.29-31ರವರೆಗೆ ಕಾಸರಗೋಡುನಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನ ತಿ.ತಾ.ಶರ್ಮ ಅವರ ಅಧ್ಯಕ್ಷತೆಯಲ್ಲಿ ಜರುಗಿತು. 1949 ಮಾ.5ರಿಂದ 7ರವರೆಗೆ ಕಲಬುರಗಿಯಲ್ಲಿ ನಡೆದ ಸಾಹಿತ್ಯ ಸಮ್ಮೇಳನದಲ್ಲಿ ಉತ್ತಂಗಿ ಚನ್ನಪ್ಪ ಅಧ್ಯಕ್ಷತೆ ವಹಿಸಿದ್ದರು. 1950ರ ಮೇ 24-26ರವರೆಗೆ ಸೊಲ್ಲಾಪುರದಲ್ಲಿ ನಡೆದ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ಎಂ.ಆರ್.ಶ್ರೀನಿವಾಸಮೂರ್ತಿ ವಹಿಸಿದ್ದರು. 1951ರ ಡಿ.26ರಿಂದ 28ರವರೆಗೆ ಮುಂಬೈನಲ್ಲಿ ಗೋವಿಂದ ಪೈ ಅವರ ಅಧ್ಯಕ್ಷತೆಯಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಿತು. 1952ರ ಮೇ 16ರಿಂದ 18ರವರೆಗೆ ಬೇಲೂರಿನಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ಶಿ.ಚ. ನಂದೀಮಠ ವಹಿಸಿದ್ದರು. 1954ರ ಡಿ. 26-28ರವರೆಗೆ ಕುಮಟಾದಲ್ಲಿ ವಿ.ಸೀತಾರಾಮಯ್ಯ ಅಧ್ಯಕ್ಷತೆಯಲ್ಲಿ ನುಡಿ ಜಾತ್ರೆ ಜರುಗಿತು. 1955ರ ಜೂ.10ರಿಂದ 12ರವರೆಗೆ ಮೈಸೂರಿನಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ಶಿವರಾಮ ಕಾರಂತ ವಹಿಸಿದ್ದರು. 1956ರ ಡಿ.25ರಿಂದ 27ರವರೆಗೆ ರಾಯಚೂರುನಲ್ಲಿ ಆದ್ಯ ರಂಗಾಚಾರ್ಯ ಅಧ್ಯಕ್ಷತೆಯಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಜರುಗಿತು. 1957ರ ಮೇ 7-9ರವರೆಗೆ ಧಾರವಾಡದಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ಕುವೆಂಪು ವಹಿಸಿದ್ದರು. 1958ರ ಜ.18ರಿಂದ 20ರವರೆಗೆ ಬಳ್ಳಾರಿಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ವಿ.ಕೃ. ಗೋಕಾಕ ವಹಿಸಿದ್ದರು. 1959ರಲ್ಲಿ ಬೀದರ್‌ನಲ್ಲಿ ಜರುಗಿದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ಡಿ.ಎಲ್.ನರಸಿಂಹಚಾರ್ಯ ವಹಿಸಿದ್ದರು. 1960 ಫೆ.11-13ರವರೆಗೆ ಬೀದರ್‌ನಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಡಿ.ಎಲ್. ನರಸಿಂಹಾಚಾರ್ ಅಧ್ಯಕ್ಷತೆ ಹಾಗೂ ಡಿ.27-29ರವರೆಗೆ ಮಣಿಪಾಲದಲ್ಲಿ ನಡೆದ ಸಾಹಿತ್ಯ ಸಮ್ಮೇಳನದಲ್ಲಿ ಅ.ನ.ಕೃಷ್ಣರಾಯ ಅಧ್ಯಕ್ಷತೆ ವಹಿಸಿದ್ದರು. 1961ರ ಡಿ.27ರಿಂದ 29ರವರೆಗೆ ಗದಗನಲ್ಲಿ ಕೆ.ಜಿ.ಕುಂದಣಗಾರ ಅವರ ಅಧ್ಯಕ್ಷತೆಯಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಿತು. 1963 ಡಿ.28-30ರವರೆಗೆ ಸಿದ್ಧಗಂಗಾದಲ್ಲಿ ನಡೆದ ಕನ್ನಡ ಸಾಹಿತ್ಯಸಮ್ಮೇಳನದ ಅಧ್ಯಕ್ಷತೆಯನ್ನು ರಂ.ಶ್ರೀ ಮುಗಳಿ ವಹಿಸಿದ್ದರು. ಹೊರ ರಾಜ್ಯಗಳಲ್ಲೂ ಸಮೇಳನ ಆಯೋಜನೆ
1915ರಲ್ಲಿ ಮೊದಲ ಸಮ್ಮೇಳನ ಆರಂಭಗೊಂಡರೂ 1936, 1942, 1962, 1964, 1968, 1969, 1975, 1983, 1986, 1988, 1989, 1991, 1998, 2021 ಹಾಗೂ 2022ರಲ್ಲಿ ಸಮ್ಮೇಳನಗಳು ನಡೆದಿಲ್ಲ. ಬಹುಪಾಲು ಸಮ್ಮೇಳನಗಳು ಕರ್ನಾಟಕ ರಾಜ್ಯದೊಳಗೆ ನಡೆದಿವೆಯಾದರೂ 1941ರ ತೆಲಗು ಭಾಷಾ ನೆಲ ಹೈದರಾಬಾದನಲ್ಲಿ 1945ರಲ್ಲಿ ತಮಿಳು ಭಾಷಾ ಪ್ರದೇಶ ಮದರಾಸಿನಲ್ಲಿ, 1948ರಲ್ಲಿ ಮಲಿಯಾಳಂ ಭಾಷಾ ರಾಜ್ಯಕ್ಕೆ ಸೇರುವ ಕಾಸರಗೋಡಿನಲ್ಲಿ, 1950ರಲ್ಲಿ ಮರಾಠಿ ಭಾಷಾ ರಾಜ್ಯ ಸೊಲ್ಲಾಪುರದಲ್ಲಿ, 1951ರಲ್ಲಿ ಹಿಂದಿ ಪ್ರಾಬಲ್ಯದ ಮುಂಬಯಿನಲ್ಲಿ ಸಾಹಿತ್ಯ ಸಮ್ಮೇಳನ ಆಯೋಜಿಸಲಾಗಿತ್ತು. 1965ರ ಮೇ 10-12ರವರೆಗೆ ಕಾರವಾರದಲ್ಲಿ ಕಡೆಂಗೋಡ್ಲು ಶಂಕರಭಟ್ಟ ಅಧ್ಯಕ್ಷತೆಯಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಿತು. 1967ರ ಮೇ 26-28ರವರೆಗೆ ಶ್ರವಣಬೆಳಗೊಳದಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ಆ.ನೇ ಉಪಾಧ್ಯೆ ವಹಿಸಿದ್ದರು. 1970ರ ಡಿ.27ರಿಂದ 29ರವರೆಗೆ ಬೆಂಗಳೂರಿನಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ದೇ.ಜವರೇಗೌಡ ವಹಿಸಿದ್ದರು. 1974ರ ಮೇ.31ರಿಂದ ಜೂ.2ರವರೆಗೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ಮಂಡ್ಯದಲ್ಲಿ ಜಯದೇವಿತಾಯಿ ಲಿಗಾಡೆ ಅಧ್ಯಕ್ಷತೆಯಲ್ಲಿ ಜರುಗಿತು. 1976ರ ಡಿ.11-13ರವರೆಗೆ ಶಿವಮೊಗ್ಗದಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ಎಸ್.ವಿ. ರಂಗಣ್ಣ ವಹಿಸಿದ್ದರು. 1978ರ ಏ.23-25ರವರೆಗೆ ದೆಹಲಿಯಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಜಿ.ಪಿ.ರಾಜರತ್ನಂ ಅಧ್ಯಕ್ಷತೆಯಲ್ಲಿ ನಡೆಯಿತು. 1979ರ ಮಾ.9-11ರವರೆಗೆ ಧರ್ಮಸ್ಥಳದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ಗೋಪಾಲಕೃಷ್ಣ ಅಡಿಗ ವಹಿಸಿದ್ದರು. 1980ರ 7ರಿಂದ 10ರವರೆಗೆ ಅಖೀಲ ಭಾರತ ಸಾಹಿತ್ಯ ಸಮ್ಮೇಳನ ಬೆಳಗಾವಿಯಲ್ಲಿ ಬಸವರಾಜ ಕಟ್ಟಿಮನಿ ಅವರ ಅಧ್ಯಕ್ಷತೆಯಲ್ಲಿ ಜರುಗಿತು. 1981ರ ಮಾ.13ರಿಂದ 15ರವರೆಗೆ ಚಿಕ್ಕಮಗಳೂರಿನಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ಪು.ತಿ.ನರಸಿಂಹಾಚಾರ್
ವಹಿಸಿದ್ದರು. 1981ರ ನವೆಂಬರ್ 27ರಿಂದ 30ರವರೆಗೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ಶಂ.ಬಾ.ಜೋಶಿ ಅಧ್ಯಕ್ಷತೆಯಲ್ಲಿ ಮಡಿಕೇರಿಯಲ್ಲಿ ನಡೆಯಿತು. 1982ರ ಡಿ.23ರಿಂದ 26ರವರೆಗೆ ಶಿರಸಿಯಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ಗೊರೂರು ರಾಮಸ್ವಾಮಿ ಅಯ್ಯಂಗಾರ್ ವಹಿಸಿದ್ದರು. 1984ರಲ್ಲಿ ಮಾ.23-25ರವರೆಗೆ ಕೈವಾರದಲ್ಲಿ ಎ.ಎನ್.ಮೂರ್ತಿರಾವ್ ಅಧ್ಯಕ್ಷತೆಯಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಿತು. 1985ರ ಏ.5ರಿಂದ 7ರವರೆಗೆ ಬೀದರ್‌ನಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ಹಾ.ಮಾ.ನಾಯಕ ವಹಿಸಿದ್ದರು. 1987ರಲ್ಲಿ ಅಕ್ಟೋಬರ್ 29ರಿಂದ ನವೆಂಬರ್ 1ರವರೆಗೆ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ಸಿದ್ಧಯ್ಯ ಪುರಾಣಿಕ ವಹಿಸಿದ್ದರು. 1990ರ ಫೆಬ್ರುವರಿ 16ರಿಂದ 18ರವರೆಗೆ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ಆರ್.ಸಿ.ಹಿರೇಮಠ ಅಧ್ಯಕ್ಷತೆಯಲ್ಲಿ ಹುಬ್ಬಳ್ಳಿಯಲ್ಲಿ 28ರಿಂದ 30ರವರೆಗೆ ಮೈಸೂರಿನಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ಕೆ.ಎಸ್.ನರಸಿಂಹಸ್ವಾಮಿ ವಹಿಸಿದ್ದರು. 1991ರ ಜನವರಿ 9-12ರವರೆಗೆ ಜೆ.ಎಸ್.ಶಿವರುದ್ರಪ್ಪ ಅವರ ಅಧ್ಯಕ್ಷತೆಯಲ್ಲಿ ದಾವಣಗೆರೆಯಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳ ನಡೆಯಿತು. 1993ರ ಫೆ.5ರಿಂದ 7ರವರೆಗೆ ಕೊಪ್ಪಳದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ಸಿಂಪಿ ಲಿಂಗಣ್ಣ ವಹಿಸಿದ್ದರು. 1994ರ ಫೆ.11ರಿಂದ 13ರವರೆಗೆ ಮಂಡ್ಯದಲ್ಲಿ ನಡೆದ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಚದುರಂಗ ಅಧ್ಯಕ್ಷತೆ ವಹಿಸಿದ್ದರು. 1995ರಲ್ಲಿ ಜೂ.3-5ರವರೆಗೆ ಎಚ್.ಎಲ್. ನಾಗೇಗೌಡರ ಅಧ್ಯಕ್ಷತೆಯಲ್ಲಿ ಮುಧೋಳದಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳ ನಡೆಯಿತು.1996ರ ಡಿ.21-24ರವರೆಗೆ ಹಾಸನದಲ್ಲಿ ನಡೆದ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ಚನ್ನವೀರ ಕಣವಿ ವಹಿಸಿದ್ದರು. 1997ರಲ್ಲಿ ಡಿ.11ರಿಂದ 14ರವರೆಗೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮಂಗಳೂರಿನಲ್ಲಿ ಕಯ್ಯಾರ ಕಿಞ್ಞಣ್ಣ ರೈ ಅಧ್ಯಕ್ಷತೆಯಲ್ಲಿ ಜರುಗಿತು. 1999ರ ಫೆ.11ರಿಂದ 14ರವರೆಗೆ ಕನಕಪುರದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ಎಸ್. ಎಲ್.ಭೈರಪ್ಪ ವಹಿಸಿದ್ದರು. 2000ರಲ್ಲಿ ಜೂನ್ 24-26ರವರೆಗೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಬಾಗಲಕೋಟೆಯಲ್ಲಿ ಶಾಂತಾದೇವಿ ಮಾಳವಾಡ ಅಧ್ಯಕ್ಷತೆಯಲ್ಲಿ ನಡೆಯಿತು. 2002ರ ಫೆ.15ರಿಂದ 17ರವರೆಗೆ ತುಮಕೂರುನಲ್ಲಿ ನಡೆದ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ಯು. ಆರ್. ಅನಂತಮೂರ್ತಿ ವಹಿಸಿದ್ದರು. 2003ರಲ್ಲಿ ಮಾ.7-9ರವರೆಗೆ ಬೆಳಗಾವಿಯಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಪಾಟೀಲ ಪುಟ್ಟಪ್ಪನವರ ಅಧ್ಯಕ್ಷತೆಯಲ್ಲಿ ಜರುಗಿತು. 2003ರ ಡಿ.18ರಿಂದ 21ರವರೆಗೆ ಮೂಡುಬಿದಿರೆಯಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ಕಮಲಾ ಹಂಪನಾ ವಹಿಸಿದ್ದರು. 2006ರ ಜನವರಿ 27ರಿಂದ 29ರವರೆಗೆ ಬೀದರ್‌ನಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ಶಾಂತರಸ ಹೆಂಬೆರಳು ವಹಿಸಿದ್ದರು. 2007ರಲ್ಲಿ ಡಿ.20-23ರವರೆಗೆ ಶಿವಮೊಗ್ಗದಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಕೆ.ಎಸ್.ನಿಸಾರ್ ಅಹಮ್ಮದ್ ಅಧ್ಯಕ್ಷತೆಯಲ್ಲಿ ಜರುಗಿತು. 2007ರ ಡಿ.12-15ರವರೆಗೆ ಉಡುಪಿಯಲ್ಲಿ ನಡೆದ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ಎಲ್. ಎಸ್.ಶೇಷಗಿರಿರಾವ್ ವಹಿಸಿದ್ದರು. 2009ರ ಫೆ.4ರಿಂದ 6ರವರೆಗೆ ಚಿತ್ರದುರ್ಗದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಎಲ್.ಬಸವರಾಜು ಅಧ್ಯಕ್ಷತೆ ವಹಿಸಿದ್ದರು. 2010ರಲ್ಲಿ ಫೆ.19ರಿಂದ 21ರವರೆಗೆ ಅಖಿ ಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಗದಗದಲ್ಲಿ ಗೀತಾ ನಾಗಭೂಷಣ ಅಧ್ಯಕ್ಷತೆಯಲ್ಲಿ ನಡೆಯಿತು. 2011ರ ಫೆ.4-6ರವರೆಗೆ ಬೆಂಗಳೂರಿನಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ಜಿ.ವೆಂಕಟಸುಬ್ಬಯ್ಯ ವಹಿಸಿದ್ದರು. 2011ರ ಡಿ.9-11ರವರೆಗೆ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಗಂಗಾವತಿಯಲ್ಲಿ ಸಿ.ಪಿ.ಕೃಷ್ಣಕುಮಾರ್ ಅವರ ಅಧ್ಯಕ್ಷತೆಯಲ್ಲಿ ಜರುಗಿತು. 2013ರ ಫೆ.9-11ರವರೆಗೆ ವಿಜಯಪುರದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ಕೋ.ಚೆನ್ನಬಸಪ್ಪ ವಹಿಸಿದ್ದರು. 2014 ಜನವರಿ 7ರಿಂದ 9ರವರೆಗೆ ಕೊಡಗಿನಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನಾ.ಡಿಸೋಜಾ ಅಧ್ಯಕ್ಷತೆ ವಹಿಸಿದ್ದರು.2015ರಲ್ಲಿ ಜ.31ರಿಂದ ಫೆಬ್ರುವರಿ 3ರವರೆಗೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಶ್ರವಣಬೆಳಗೊಳದಲ್ಲಿ ಸಿದ್ಧಲಿಂಗಯ್ಯ ಅವರ ಅಧ್ಯಕ್ಷತೆಯಲ್ಲಿ ಜರುಗಿತು. 2016ರ ಡಿ.2ರಿಂದ 4ರವರೆಗೆ ರಾಯಚೂರಿನಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ಬರಗೂರು ರಾಮಚಂದ್ರಪ್ಪ ವಹಿಸಿದ್ದರು. 2017ರ ನವೆಂಬರ್ 24ರಿಂದ 26ರವರೆಗೆ ಮೈಸೂರಿನಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಚಂದ್ರಶೇಖರ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. 2019ರ ಜನವರಿ 4ರಿಂದ 6ರವರೆಗೆ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಧಾರವಾಡದಲ್ಲಿ ಚಂದ್ರಶೇಖರ ಕಂಬಾರ ಅಧ್ಯಕ್ಷತೆಯಲ್ಲಿ ಜರುಗಿತು. 2020ರ ಫೆ.5-7ರವರೆಗೆ ಕಲಬುರಗಿಯಲ್ಲಿ ಎಚ್.ಎಸ್. ವೆಂಕಟೇಶಮೂರ್ತಿ ಅಧ್ಯಕ್ಷತೆಯಲ್ಲಿ ಅಖಿ ಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಿತು. ಇದೀಗ ಜ.6,7 ಹಾಗೂ 8 ರಂದು ಹಾವೇರಿಯಲ್ಲಿ ಅಖಿಲ ಭಾರತ 86ನೇ ಕನ್ನಡ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷ ಸಾಹಿತಿ ಡಾ.ದೊಡ್ಡರಂಗೇಗೌಡರ ಅಧ್ಯಕ್ಷತೆಯಲ್ಲಿ ಅದ್ಧೂರಿಯಾಗಿ ನುಡಿ ಜಾತ್ರೆ ನಡೆಯುತ್ತಿರುವುದು ಜಿಲ್ಲೆಯ ಹೆಮ್ಮೆಯ ಸಂಗತಿಯಾಗಿದೆ.