ಹಿರೇಕೆರೂರ: 12ನೇ ಶತಮಾನದಲ್ಲಿ ಶಿವಶರಣೆ ಅಕ್ಕಮಹಾದೇವಿ ರಚಿಸಿದ ವಚನಗಳು ಇಂದಿಗೂ ಪ್ರಸ್ತುತ. ಶಿವಶರಣೆ ಅಕ್ಕಮಹಾದೇವಿ ಜೀವನ ಮಹಿಳೆಯರಿಗೆ ಆತ್ಮಸ್ಥೈರ್ಯ ತುಂಬಿದ ಮಾರ್ಗದರ್ಶನಗಳಾಗಿವೆ ಎಂದು ತಿಪ್ಪಾಯಿಕೊಪ್ಪದ ಶ್ರೀ ಗುರುಮೂಕಪ್ಪ ಶಿವಯೋಗಿಗಳ ಮಠದ ಉತ್ತರಾಧಿಕಾರಿ ಶ್ರೀ ಮಹಾಂತ ದೇವರು ಹೇಳಿದರು.
ಶಿವಶರಣರ ನಾಮಸ್ಮರಣೆಯಿಂದ ಫಲ ದೊರೆಯುತ್ತದೆ. ಶಿವಶರಣೆ ಅಕ್ಕಮಹಾದೇವಿ ವಚನಗಳು ನಮ್ಮ ಬದುಕಿಗೆ ಮಾರ್ಗದರ್ಶನಗಳಾಗಿವೆ. ಅಂತಹ ವಚನಗಳನ್ನು ಆಲಿಸುವ ಮೂಲಕ ಬದುಕಿನಲ್ಲಿ ತೃಪ್ತಿ ಕಾಣಬೇಕು ಎಂದು ಹೇಳಿದರು.
ಮದ್ವೀರಶೈವ ಮಹಾಸಮಾಜದ ಅಧ್ಯಕ್ಷ ಗುರುಶಾಂತ ಯತ್ತಿನಹಳ್ಳಿ ಶಿವಶರಣೆ ಅಕ್ಕಮಹಾದೇವಿ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಜಿಲ್ಲಾ ವಚನ ಸಾಹಿತ್ಯ ಪರಿಷತ್ ಅಧ್ಯಕ್ಷ ಮಾರುತಿ ಶಿಡ್ಲಾಪುರ, ರಟ್ಟೀಹಳ್ಳಿ ಸರ್ಕಾರಿ ಪಿಯು ಕಾಲೇಜಿನ ಪ್ರಾಚಾರ್ಯ ಜಿ.ಸಿ.ಕಮ್ಮಾರ ಅಕ್ಕಮಹಾದೇವಿ ಕುರಿತು ಉಪನ್ಯಾಸ ನೀಡಿದರು.
Advertisement
ಪಟ್ಟಣದ ಪೇಟೆ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ತಾಲೂಕು ವೀರರಾಣಿ ಕಿತ್ತೂರ ಚೆನ್ನಮ್ಮ ಮಹಿಳಾ ಘಟಕ, ಅಕ್ಕನ ಬಳಗ ಹಾಗೂ ತಾಲೂಕು ಪಂಚಮಸಾಲಿ ಮಹಿಳಾ ಘಟಕದ ಆಶ್ರಯದಲ್ಲಿ ಏರ್ಪಡಿಸಿದ್ದ ಶಿವಶರಣೆ ಅಕ್ಕಮಹಾದೇವಿ ಜಯಂತ್ಯುತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಶ್ರೀಗಳು ಮಾತನಾಡಿ, ಅಕ್ಕಮಹಾದೇವಿ ಮೌಲ್ಯ ತುಂಬಿದ ವಚನಗಳನ್ನು ರಚಿಸುವ ಮೂಲಕ ಸಮಾಜಕ್ಕೆ ಮಾರ್ಗದರ್ಶನ ನೀಡಿದ್ದಾರೆ.
Related Articles
Advertisement
ಅಕ್ಕನಬಳಗದ ಅಧ್ಯಕ್ಷೆ ಆಶಾ ಕಲ್ಯಾಣಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಶಶಿಕಲಾ ಹಾದ್ರಿಹಳ್ಳಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ರಾಮು ಮುದಿಗೌಡರ್, ಅಕ್ಕನಬಳಗದ ಪ್ರಧಾನ ಕಾರ್ಯದರ್ಶಿ ಶಶಿಕಲಾ ಹಾದ್ರಿಹಳ್ಳಿ, ಲತಾ ವಾಲಿ, ಶಶಿಕಲಾ ಬೇತೂರು, ಪ್ರೇಮಾ ಕುಬಸದ, ಶಶಿಕಲಾ ಕಾಯಕದ, ಬಸಮ್ಮ ಅಬಲೂರು, ಕವಿತಾ ಕಲ್ಯಾಣಿ, ಶೈಲಾ ಹಾದ್ರೀಹಳ್ಳಿ, ಕವಿತಾ ಹಲವಾಗಿಲ, ಸರೋಜಮ್ಮ ಹಿರೇಮಠ, ಚಂದ್ರಕಲಾ ಹಿರೇಮಠ ಹಾಗೂ ಮತ್ತಿತರರು ಇದ್ದರು.
ಅನ್ನಪೂರ್ಣ ಇಂಗಳಗಿ ಪ್ರಾರ್ಥಿಸಿದರು. ಕವಿತಾ ಹಲವಾಗಿಲ ಸ್ವಾಗತಿಸಿದರು. ನ್ಯಾಯವಾದಿ ಬಸಮ್ಮ ಅಬಲೂರು ನಿರೂಪಿಸಿ, ವಂದಿಸಿದರು.
ಇದೇ ಸಂದರ್ಭದಲ್ಲಿ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ರಂಗೋಲಿ ಸ್ಪರ್ಧೆ ಏರ್ಪಡಿಸಲಾಗಿತ್ತು.