Advertisement

ಐರೋಪ್ಯ ಒಕ್ಕೂಟ ತೊರೆಯಲು  ಒಪ್ಪಂದ

10:44 AM Dec 09, 2017 | Team Udayavani |

ಬ್ರಸೆಲ್ಸ್‌: ಐರೋಪ್ಯ ಒಕ್ಕೂಟ ತೊರೆಯುವ ನಿಟ್ಟಿನಲ್ಲಿ ಇಂಗ್ಲೆಂಡ್‌ ಪ್ರಮುಖ ಹೆಜ್ಜೆಯನ್ನಿಟ್ಟಿದ್ದು, ಐರೋಪ್ಯ ಒಕ್ಕೂಟದೊಂದಿಗೆ ಒಪ್ಪಂದದ ನಿಯಮಾವಳಿಗಳನ್ನು ಅಂತಿಮಗೊಳಿಸಿದೆ. ಬ್ರಸೆಲ್ಸ್‌ನಲ್ಲಿ ಶುಕ್ರವಾರ ಬ್ರಿಟನ್‌ ಪ್ರಧಾನಿ ಥೆರೇಸಾ ಮೇ ಮತ್ತು ಐರೋಪ್ಯ ಒಕ್ಕೂಟದ ಮುಖ್ಯಸ್ಥ ಡೊನಾಲ್ಡ್‌ ಟಸ್ಕ್ ಮಾತುಕತೆ ನಡೆಸಿದ್ದು, ನಿಯಮಾವಳಿಗಳಿಗೆ ಸಮ್ಮತಿ ಸೂಚಿಸಿದ್ದಾರೆ.

Advertisement

ಐರಿಶ್‌ ಗಡಿ, ಬ್ರಿಟನ್‌ನ ಮಸೂದೆ, ನಾಗರಿಕ ಹಕ್ಕುಗಳಿಗೆ ಸಂಬಂಧಿಸಿ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಬ್ರೆಕ್ಸಿಟ್‌ ಪ್ರಕ್ರಿಯೆಗಾಗಿ 45-55 ಶತಕೋಟಿ ಯೂರೋ ನೀಡಲು ಇಂಗ್ಲೆಂಡ್‌ ಒಪ್ಪಿದೆ. ಜತೆಗೆ, ತನ್ನ ದೇಶದಲ್ಲಿರುವ 30 ಲಕ್ಷ ಯುರೋಪ್‌ ನಾಗರಿಕರ ಹಕ್ಕುಗಳ ರಕ್ಷಣೆಗೆ ಬದ್ಧರಾಗಿರುತ್ತೇವೆ ಎಂಬ ಭರವಸೆಯನ್ನೂ ನೀಡಿದೆ. 

Advertisement

Udayavani is now on Telegram. Click here to join our channel and stay updated with the latest news.

Next