ನಾವೆಲ್ಲಾ ಮನೆಯಲ್ಲಿ ಸಾಕಿದ ನಾಯಿಗಳು ಮನೆ ಮಾತು ಕೇಳುವುದನ್ನು ನೋಡಿದ್ದೇವೆ. ಕೆಲವು ಪ್ರಾಣಿಗಳು ಬಹಳ ಚುರುಕು. ನಮಗೆ ಗೊತ್ತಾಗದ ಹಾಗೆ ಅವುಗಳು ನಮ್ಮ ಮಾತನ್ನು ಆಲಿಸುತ್ತವೆ.ನಮ್ಮ ನಡೆ-ನುಡಿಯನ್ನು ಗಮನಿಸುತ್ತವೆ. ಕ್ರಮೇಣ ಅವು ನಾವು ಮಾಡುವಂಥ ಸಾಹಸವನ್ನು ಮಾಡಲು ಕಲಿಯುತ್ತವೆ.
ಇಲ್ಲೊಂದು ಸಾಕು ಬಾತುಕೋಳಿ ಇಂಥ ಸಾಹಸವನ್ನು ಮಾಡಿ ಅಚ್ಚರಿ ಮೂಡಿಸಿದೆ. ಮೈಲಾ ಅಗುಯಿಲಾ ಎನ್ನುವ ಮಹಿಳೆ ತನ್ನ ಮನೆಯಲ್ಲಿ ಬಾತುಕೋಳಿಯನ್ನು ಸಾಕುತ್ತಿದ್ದಾಳೆ. ಒಂದು ದಿನ ಬಾತುಕೋಳಿಯ ಚಲನ-ವಲನವನ್ನು ಗಮನಿಸುತ್ತಿದ್ದ ಅಗುಯಿಲಾ ಬಾತುಕೋಳಿ ಮಾಡಿದ ಸಾಹಸವನ್ನು ನೋಡಿ ದಂಗಾಗಿದ್ದಾಳೆ. ಮತ್ತು ಆ ಕೊಡಲೇ ವೀಡಿಯೋ ಮಾಡಿ ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಹರಿಯಬಿಟ್ಟಿದ್ದಾಳೆ. ಈಗ ಈ ವೀಡಿಯೋ ವೈರಲ್ ಆಗಿದೆ.
ಮೈಲಾ ಅಗುಯಿಲಾ ಬಾತುಕೋಳಿಗಳ ಜೊತೆ ಇದ್ದಾಗ ಮನೆಯ ಪಕ್ಕದಲ್ಲಿ ಸಣ್ಣ ಮಣ್ಣಿನ ಗುಡ್ಡೆಯ ಮೇಲೆ ಒಬ್ಬ ಪುಟ್ಟ ಹುಡುಗ ಕೂತಿದ್ದಾನೆ. ಆ ಹುಡುಗನ ಒಂದು ಕಾಲಿನ ಚಪ್ಪಲಿ ಕೆಳಕ್ಕೆ ಬಿದ್ದಿದೆ. ಈ ವೇಳೆ ಅಲ್ಲೇ ಅಲೆದಾಡುತ್ತಿದ್ದ ಬಾತುಕೋಳಿ ಹುಡುಗ ಚಪ್ಪಲಿಯನ್ನು ಮೇಲಕ್ಕೆ ಎತ್ತಲು ಪಡುತ್ತಿರುವ ಪಾಡನ್ನು ನೋಡಿದೆ. ತಕ್ಷಣ ಬಾತುಕೋಳಿ ಬಾಲಕನ ಚಪ್ಪಲಿಯನ್ನು ತನ್ನ ಕೊಕ್ಕಿನಲ್ಲಿ ಹಿಡಿದು ತರಲು ಪ್ರಯತ್ನ ನಡೆಸುತ್ತದೆ. ಎರಡು ಮೂರು ಬಾರಿ ಪ್ರಯತ್ನ ನಡೆಸಿ ಕೊನೆಗೂ ಬಾತುಕೋಳಿ ಬಾಲಕನ ಚಪ್ಪಲಿಯನ್ನು ಎತ್ತಿಕೊಂಡು ಅವನ ಕೈ ಗೆ ಕೊಡುತ್ತದೆ. ಇದನ್ನು ವೀಡಿಯೋ ಮಾಡುತ್ತಿದ್ದ ಮೈಲಾ ಬಾತುಕೋಳಿಯ ಈ ಸಾಹಸವನ್ನು ನೋಡಿ ಅಚ್ಚರಿ ಪಟ್ಟಿದ್ದಾಳೆ.
52 ಸೆಕೆಂಡಿನ ವೀಡಿಯೋ ಈಗ ಇಂಟರ್ ನೆಟ್ ಪ್ರಿಯರ ಮನಗೆದ್ದಿದೆ. 6 ಸಾವಿರದ ಮೇಲೆ ಲೈಕ್ಸ್ ಗಳನ್ನು ಪಡೆದಿದ್ದು, 52 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಣೆ ಮಾಡಿದ್ದು 8 ಸಾವಿರಕ್ಕೂ ಅಧಿಕ ಮಂದಿ ಹಂಚಿಕೊಂಡಿದ್ದಾರೆ. ಇಲ್ಲಿದೆ ನೋಡಿ ಆ ವೀಡಿಯೋ