ಮೈಸೂರು: ಶ್ರೀ ಚಾಮರಾಜೇಂದ್ರ ಮೃಗಾಲಯ ಪುನಾರಂಭಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಸೋಮಶೇಖರ್, ಸಂಸದೆ ಸುಮಲತಾ, ಶಾಸಕರು ಸೋಮವಾರ ಮೃಗಾಲಯ ಆವರಣದಲ್ಲಿ ಚಾಲನೆ ನೀಡಿದರು. ಕನ್ನಡ ಚಿತ್ರರಂಗದ ಮೇರು ನಟರಾದ ಹಾಗೂ ಮೈಸೂರು ಮೂಲದ ಡಾ.ರಾಜ್ ಕುಮಾರ್ ಹೆಸರಲ್ಲಿ ಆನೆ, ರೆಬೆಲ್‌ಸ್ಟಾರ್ ಅಂಬರೀಶ್ ಹೆಸರಲ್ಲಿ ಆಫ್ರಿಕನ್ ಆನೆ, ಸಾಹಸಸಿಂಹ ವಿಷ್ಣುವರ್ಧನ್ ಹೆಸರಲ್ಲಿ ಸಿಂಹವನ್ನು ಒಂದು ವರ್ಷಕ್ಕೆ ದತ್ತು ಪಡೆದು ಚಿತ್ರನಟರಿಗೆ ಗೌರವ ಸೂಚಿಸಿದರು.
ಅವಿಸ್ಮರಣೀಯ: ಕೋವಿಡ್ 19 ಹಿನ್ನೆಲೆ ಮೂರು ತಿಂಗಳಿಂದ ಮೃಗಾಲಯಕ್ಕೆ ಸಾರ್ವಜನಿಕ ಪ್ರವೇಶ ನಿಷೇಧದಿಂದ ಆದಾಯ, ಸರ್ಕಾರದ ಅನುದಾನಗಳೂ ಇಲ್ಲದೆ ಮೃಗಾಲ ಯ ನಿರ್ವಹಣೆ ತುಂಬಾ ಕಷ್ಟವಾಗಿದ್ದು, ಕ್ಷೇತ್ರದ ಜನತೆ, ಆಪ್ತರು, ಜನಪ್ರತಿನಿಧಿಗಳಿಂದ ಮೃಗಾಲಯಕ್ಕೆ ಒಟ್ಟು 3.23 ಕೋಟಿ ರೂ. ದೇಣಿಗೆ ಸಂಗ್ರಹಿಸಿ ಹಸ್ತಾಂತರಿಸಿರುವುದಾಗಿ ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಅಜಿತ್ ಕುಲಕರ್ಣಿ ಹೇಳಿದರು.
ಎಸ್‌ಟಿಎಸ್ ಹೆಸರಲ್ಲಿ ಫಲಕ: ಸಂಕಷ್ಟದಲ್ಲಿ ಮೃಗಾಲಯಕ್ಕೆ 3.23 ಕೋಟಿ ರೂ. ದೇಣಿಗೆ ಸಂಗ್ರಹಿಸಿಕೊಟ್ಟ ಜಿÇಲ್ಲಾ ಉಸ್ತುವಾರಿ ಸಚಿವ ಸೋಮಶೇಖರ್ ಗೌರವಾರ್ಥ ಅವರ ಹೆಸರಲ್ಲಿ ಮೃಗಾಲಯದ ಮುಖ್ಯ ಪ್ರವೇಶ ದ್ವಾರದ ಎದುರು ನಿರ್ಮಿಸಿರುವ ಫಲಕ ವನ್ನು ಮೃಗಾಲ ಯದ ಪುನಾರಂಭಗೊಳಿಸುವ ಸಂದರ್ಭ ದಲ್ಲಿ ಅನಾವರಣಗೊಳಿಸಲಾ ಯಿತು. ಮೃಗಾಲ ಯದ ಪ್ರವೇಶದ್ವಾರ ಬಳಿ ಚಾಮುಂಡೇಶ್ವರಿ ಮೂರ್ತಿಗೆ ಪೂಜೆ ಸಲ್ಲಿಸಿದ ಬಳಿಕ, ಜಿಲ್ಲಾ ಉಸ್ತುವಾರಿ ಸಚಿವ ಸೋಮ ಶೇಖರ್ ಮೈಸೂರು ಮೃಗಾಲಯ ಪುನಾರಂಭದ ವೇಳೆ, ತಮ್ಮ ಜೊತೆಯಲ್ಲಿದ್ದ 50 ಮಂದಿಗೆ ಟಿಕೆಟ್ ಪಡೆದು ಪ್ರವೇಶಕ್ಕೆ ಚಾಲನೆ ನೀಡಿದರು.
ಜಿರಾಫೆ ಮರಿಗಳಿಗೆ ನಾಮಕರಣ: ಈಚೆಗೆ ಜನಿಸಿದ ಜಿರಾಫೆ ಮರಿಗಳಿಗೆ ಆದ್ಯ ಯದುವೀರ (ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಮಗನ ಹೆಸರು) ಹಾಗೂ ಬಾಲಾಜಿ ಎಂದು ನಾಮಕರಣ ಮಾಡಿ ನಾಮಫಲಕವನ್ನು ಸಚಿವ ಸೋಮಶೇಖರ್ ಹಾಗೂ ಸಂಸದೆ ಸುಮಲತಾ ಪ್ರದರ್ಶಿಸಿದರು. ಇಲ್ಲಿ ಪ್ರಸ್ತುತ ಸಾರಾ ಎಂಬ ಹೆಣ್ಣು ಬಿಳಿ ಹುಲಿ ವಿಹಾರಕ್ಕೆ ವ್ಯವಸ್ಥೆ ಮಾಡಲಾಗಿದೆ. ಬಳಿಕ ಶಾಸಕ ರಾಮದಾಸ್ ಜಿಲ್ಲಾ ಉಸ್ತುವಾರಿ ಸಚಿವರಿಗೆ ಕೃತಜ್ಞತೆ ಸಲ್ಲಿಸಿದರು. ಶಾಸಕರಾ ದ ದೇವೇಗೌಡ, ನಾಗೇಂದ್ರ, ಹರ್ಷವ ರ್ಧನ್, ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್, ಡಿಸಿಪಿ ಪ್ರಕಾಶ್ ಗೌಡ, ಮೇಯರ್ ತಸ್ನಿಂ, ಜಿಪಂ ಸಿಇಒ ಪ್ರಶಾಂತ್ ಕುಮಾರ್, ಶಿವಮೂರ್ತಿ ಕಿಲಾರ್ ಇದ್ದರು.
ಅಕ್ಕ ಸಂಸ್ಥೆಯಿಂದ 40 ಲಕ್ಷ ರೂ. ದೇಣಿಗೆ: ಅಮೆರಿಕದ ಅಕ್ಕ ಸಂಸ್ಥೆಯಿಂದ ಮೃಗಾಲಯದ ನಿರ್ವಹಣೆಗೆ 40 ಲಕ್ಷ ರೂ. ಚೆಕ್ ಅನ್ನು ಜಿÇಲ್ಲಾ ಉಸ್ತುವಾರಿ ಸಚಿವರ ಮೂಲಕ ಅಕ್ಕ ಸಂಘಟನೆಯ ಮಾಜಿ ಅಧ್ಯಕ್ಷ ಶಿವಮೂರ್ತಿ ಕಿಲಾರ ಮೃಗಾಲಯಕ್ಕೆ ಹಸ್ತಾಂತರಿಸಿದರು.