Advertisement

ಉದಯವಾಣಿ ಫಲಶ್ರುತಿ : ಬೆಟ್ಟ ಶಂಭೋನಹಳ್ಳಿ ರಸ್ತೆ ಒತ್ತುವರಿ ತೆರವು ಮಾಡಿದ ಆಡಳಿತ

06:31 PM Jun 25, 2022 | Team Udayavani |

ಕೊರಟಗೆರೆ : ತಾಲೂಕಿನ ಚನ್ನರಾಯನದುರ್ಗ ಹೋಬಳಿಯ ಬೆಟ್ಟ ಶಂಭೋನಹಳ್ಳಿ ಗ್ರಾಮದ ನಕಾಶೆ ರಸ್ತೆ ಒತ್ತುವರಿ ತೆರವು ಮಾಡುವಲ್ಲಿ ಕೊರಟಗೆರೆ ತಾಲ್ಲೂಕು ಆಡಳಿತ ಯಶಸ್ವಿಯಾಗಿದೆ .ಈ ವಿಚಾರವಾಗಿ ದಿನಾಂಕ ಜೂನ್ 16 ರಂದು ಉದಯವಾಣಿ ಆನ್ ಲೈನ್ ನಲ್ಲಿ ಸುದ್ದಿಯನ್ನು ಪ್ರಕಟಿಸಲಾಗಿತ್ತು, ಪ್ರಕಟಣೆಯ ಫಲಶ್ರುತಿ ಎಂಬಂತೆ ಕೊನೆಗೂ ಎಚ್ಚೆತ್ತ ಕೊರಟಗೆರೆ ತಾಲೂಕು ಆಡಳಿತ ಒತ್ತುವರಿ ತೆರವುಗೊಳಿಸಿದೆ.

Advertisement

ಬೆಟ್ಟ ಶಂಭೋನಹಳ್ಳಿ ಗ್ರಾಮದ ಸರ್ವೇ ನಂಬರ್ 52,10,11,14 ,15 ರ ಜಮೀನಿನ ರೈತರು  ಸಂಚಾರ ಮಾಡಲು ಪ್ರತಿನಿತ್ಯ ತೊಂದರೆ ಅನುಭವಿಸಿ ತಹಶೀಲ್ದಾರ್ ರಿಗೆ ಮನವಿ ಸಲ್ಲಿಸಿದ್ದರು.

ಗ್ರಾಮದ ರೈತರು ಮತ್ತು ಸಾರ್ವಜನಿಕರು ತಹಶೀಲ್ದಾರ್ ರವರಿಗೆ 2020 ರ ಜೂನ್ 17 ರ ಹಿಂದಿನಿಂದಲೂ ಮನವಿ ಸಲ್ಲಿಸಿದ್ದರು ಸಂಬಂಧ ಪಟ್ಟ ಅಧಿಕಾರಿಗಳು ಮೂರ್ನಾಲ್ಕು ಬಾರಿ ಸರ್ವೆ ಮಾಡಿ ನಕಾಶೆ ರಸ್ತೆಯನ್ನು ಒತ್ತುವರಿ ತೆರವು ಕಾರ್ಯಾಚರಣೆಗೆ ಮುಂದಾದಾಗ ಸರ್ವೇ ನಂಬರ್ 52 ರ ಖಾತೆ ಮಾಲೀಕ ಮತ್ತು ಅವರಕುಟುಂಬಸ್ಥರು  ತೊಂದರೆ ಮಾಡುತ್ತಿದ್ದರು. ಈ ಎಲ್ಲಾ ಸಮಸ್ಯೆಗಳು ತಹಶೀಲ್ದಾರ್ ನಹೀದಾ ಜಂ ಜಂ ರವರ ಗಮನಕ್ಕೆ ತಂದಿದ್ದರು. ನಂತರ ತಹಶೀಲ್ದಾರ್ ಅವರು ದಿನಾಂಕವನ್ನು ನಿಗದಿಪಡಿಸಿ ಖುದ್ದು ಸ್ಥಳಕ್ಕೆ ಭೇಟಿ ನೀಡಿ ಎಲ್ಲವನ್ನೂ ಪರಿಶೀಲಿಸಿ ಕಾನೂನು ರೀತಿಯ ಕ್ರಮ ಕೈಗೊಂಡು ನಕಾಶೆ ರಸ್ತೆ ಒತ್ತುವರಿ ತೆರವು ಮಾಡಿಸಿದರು.

ರಸ್ತೆ ಒತ್ತುವರಿ ತೆರವು ಕಾರ್ಯಾಚರಣೆಗೆ ಮುಂದಾದ ಅಧಿಕಾರಿಗಳನ್ನು ಅಡ್ಡಿ ಪಡಿಸಿ, ಬಿಗುವಿನ ವಾತಾವರಣ ಸೃಷ್ಟಿಸಿದ ಗ್ರಾಮ ಪಂಚಾಯತಿ ಸದಸ್ಯ ನಟೇಶ್ ಮತ್ತು ಅವರ ತಾಯಿಯನ್ನು ಸ್ಥಳದಲ್ಲೇ ಇದ್ದ ಕೊರಟಗೆರೆ ಪೋಲೀಸ್ ಅಧಿಕಾರಿಗಳು ವಶಕ್ಕೆ ಪಡೆದು ತೆರವು ಕಾರ್ಯಾಚರಣೆ ಮುಗಿದ ನಂತರ ಅವರಿಗೆ ತಿಳುವಳಿಕೆಯನ್ನು ನೀಡಿ ಬಿಡುಗಡೆ ಮಾಡಿದರು.

ಜೆಸಿಬಿ ಯಂತ್ರ ಮೂಲಕ ಒತ್ತುವರಿ ತೆರವು ಮಾಡಿ ಗ್ರಾಮದ ರೈತರಿಗೆ ಸಾರ್ವಜನಿಕರಿಗೆ ಮುಂದಿನ ದಿನಗಳಲ್ಲಿ ಯಾವುದೇ ಗಲಾಟೆ ಮಾಡಿಕೊಳ್ಳದಂತೆ ಅನ್ಯೋನ್ಯವಾಗಿರಲು ತಹಶೀಲ್ದಾರ್ ನಾಹೀದ ಜಂ ಜಂ ಮತ್ತು ಸಿಪಿಐ ಸಿದ್ದರಾಮೇಶ್ವರ್ ತಿಳುವಳಿಕೆ ನೀಡಿದರು.

Advertisement

ಈ ಸಂದರ್ಭದಲ್ಲಿ ಉಪ ತಹಶೀಲ್ದಾರ್ ಎ ಜಿ ರಾಜು,ಪಿಎಸ್ಐ ನಾಗರಾಜು,ಎಎಸ್ ಐ ರಾಮಚಂದ್ರಯ್ಯ,ಕಂದಾಯ ಇಲಾಖೆ ಅಧಿಕಾರಿಗಳಾದ ಪ್ರತಾಪ್, ತಾಲ್ಲೂಕು ಸರ್ವೇ ಅಧಿಕಾರಿ ನಾಗರಾಜು,ರಮೇಶ್,ಕಲ್ಪನಾ,ವೀಣಾ,ಕಾಳಸೆ ಗೌಡ,ಸುನೀಲ್,ಗ್ರಾಮ ಸಹಾಯಕರು,ಪೋಲೀಸ್ ಇಲಾಖೆಯ ಸಿಬ್ಬಂದಿಗಳು,ಹಾಗೂ ರೈತರು,ಸಾರ್ವಜನಿಕರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next