Advertisement

Theft Case: ಗೆಳೆಯನ ಶೋರೂಂನಲ್ಲಿ ಹಣ ಕದು ಸಿಕ್ಕಿಬಿದ್ಕ ಆರೋಪಿ

11:05 AM Aug 05, 2024 | Team Udayavani |

ಬೆಂಗಳೂರು: ಗಿರಿನಗರ ಪೊಲೀಸ್‌ ಠಾಣಾ ವ್ಯಾಪ್ತಿಯ ವಾಹನಗಳ ಸೆಕೆಂಡ್‌ ಶೋ ರೂಂವೊಂದರಲ್ಲಿ 1 ಲಕ್ಷ ರೂ. ದುಡ್ಡು ಕದ್ದ ಮಾಲೀಕನ ಸ್ನೇಹಿತ ನನ್ನು ಗಿರಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

Advertisement

ಗಿರಿ ನಗರದ ಲಿತಿನ್‌ ಬಂಧಿತ ಆರೋಪಿ. ಗಿರಿನಗರದ ಸೆಕೆಂಡ್‌ ಶೋ ರೂಂವೊಂದರ ಮಾಲೀಕ ಕೆಂಪೇ ಗೌಡರ ಆಪ್ತ ವಲಯದಲ್ಲಿ ಲಿತಿನ್‌ ಗುರುತಿಸಿಕೊಂಡಿದ್ದ. ಕೆಲ ದಿನಗಳ ಹಿಂದೆ ಮಾಲೀಕರಿಗೆ ತಿಳಿಯದಂತೆ ಶೋರೂಂ ಕಚೇರಿಯ ಕೀ ಪಡೆದುಕೊಂಡು ಮಧ್ಯರಾತ್ರಿ ಕ್ಯಾಪ್‌ ಹಾಗೂ ಮಾಸ್ಕ್ ಹಾಕಿ ಕಚೇರಿಯೊಳಗೆ ಹೋಗಿದ್ದ. ನಂತರ ಡ್ರಾಯರ್‌ನಲ್ಲಿದ್ದ 1 ಲಕ್ಷ ರೂ. ಕದ್ದಿದ್ದ. ಇಷ್ಟಕ್ಕೆ ಸುಮ್ಮನಾಗದ ಲಿತಿನ್‌ ಶೋರೂಂ ಮುಂಭಾಗ ನಿಲುಗಡೆ ಮಾಡಿದ್ದ ಕಾರನ್ನು ಕದ್ದು ಅಕ್ಕ-ಪಕ್ಕದಲ್ಲಿ ಸುತ್ತಾಡಿ ಶೋರೂಂಗೆ ವಾಪಸ್‌ ಬಂದಿದ್ದ. ಕಾರನ್ನು ಶೋರೂಂ ಮುಂದೆ ಬಿಟ್ಟು ಅದರ ಕೀಯನ್ನು ಗೇಟ್‌ ಬಳಿ ಎಸೆದು ಹೋಗಿದ್ದ. ಮಾಲೀಕರು ಮರುದಿನ ಶೋರೂಂಗೆ ಬಂದು ನೋಡಿದಾಗ ಕಳ್ಳತನವಾಗಿರುವುದು ಪತ್ತೆಯಾಗಿತ್ತು.

ಕೂಡಲೇ ಕಚೇರಿಯ ಸಿಸಿ ಕ್ಯಾಮೆರಾ ಪರಿಶೀಲಿಸಿದಾಗ ಲಿತಿನ್‌ ಕೃತ್ಯ ಬೆಳಕಿಗೆ ಬಂದಿದೆ. ಕೂಡಲೇ ಮಾಲೀಕರು ಗಿರಿನಗರ ಪೊಲೀಸರಿಗೆ ದೂರು ನೀಡಿದ್ದರು. ತನಿಖೆ ನಡೆಸಿದ ಪೊಲೀಸರು ಆರೋಪಿ ಲಿತಿನ್‌ನನ್ನು ಬಂಧಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next