ಹೊಸದುರ್ಗ: ವ್ಯಕ್ತಿಯೊಬ್ಬರನ್ನು ಬೆಂಗಳೂರಿನಲ್ಲಿ ಕೊಲೆ ಮಾಡಿ ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕಿನ ಮಸಣೀಹಳ್ಳಿ ಸಮೀ ಪದ ಗೋಮಾಳದಲ್ಲಿ ಹೂತು ಹಾಕಲಾಗಿದ್ದ ಆರೋಪಿಗಳನ್ನು ಹೊಸದುರ್ಗ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಕೊಲೆಯಾದ ಯದುಲ್ಲಾ ಷಫಿ ಅವರ ಪತ್ನಿ ಆಂಧ್ರಪ್ರದೇಶ ಮೂಲದ ಅರಬ್ ಜಾನ್, ಹೊಸದುರ್ಗ ತಾಲೂಕಿನ ರಂಗವ್ವನಹಳ್ಳಿ ಗ್ರಾಮದ ಹರೀಶ , ಮಾಚೇನಹಳ್ಳಿ ಗ್ರಾಮದ ಗೋಪಿ, ಅತ್ತಿಮಗ್ಗೆ ಗ್ರಾಮದ ಕೇಶವ ಬಂಧಿತರು.
ಜೂ.9ರಂದು ಹೊಸದುರ್ಗ ತಾಲೂಕಿನ ಮಸಣಿಹಳ್ಳಿ ಗ್ರಾಮದ ಬಳಿ ಇರುವ ಗೋಮಾಳ ಜಾಗದಲ್ಲಿ ಪುರುಷನ ಶವ ಹೂತು ಹಾಕಿರುವುದು ಕಂಡು ಬಂದಿತ್ತು. ಈ ಬಗ್ಗೆ ಮಸಣೀಹಳ್ಳಿ ಗ್ರಾಮದ ಹರೀಶ್ ನಾಯ್ಕ ಎಂಬುವವರು ನೀಡಿದ್ದ ದೂರಿನ ಮೇರೆಗೆ ಪ್ರಕರಣ ದಾಖಲಾಗಿತ್ತು. ಹೊಸದುರ್ಗ ಪೊಲೀಸರು ಮೃತ ವ್ಯಕ್ತಿಯ ಗುರುತು ಪತ್ತೆ ಹಚ್ಚಿದ್ದರು.
ಇದನ್ನೂ ಓದಿ: ನ್ಯಾಯಾಂಗ ನಿಂದನೆ ಕೇಸ್:ಉದ್ಯಮಿ ಮಲ್ಯಗೆ 4 ತಿಂಗಳು ಜೈಲುಶಿಕ್ಷೆ, 2 ಸಾವಿರ ರೂ. ದಂಡ:ಸುಪ್ರೀಂ
ಮೃತನ ಭಾವ ನವಾಬ್ ಜಾನ್, ತನ್ನ ಪತ್ನಿಯ ಸಹೋದರ ಯದುಲ್ಲಾ ಷಫಿಯನ್ನು ಆತನ ಹೆಂಡತಿ ಹಾಗೂ ಮೂವರು ಯುವಕರು ಸೇರಿ ಕೊಲೆ ಮಾಡಿರಬಹುದೆಂದು ಶಂಕಿಸಿ ದೂರು ನೀಡಿದ್ದರು. ದೂರಿನ ಮೇರೆಗೆ ತಂಡ ರಚಿಸಿದದು, ಕೊಲೆ ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ತಂಡ ಯಶಸ್ವಿಯಾಗಿದೆ.