Advertisement

ಸಮಸ್ಯೆ ಪರಿಹಾರಕ್ಕೆ ಸಿದ್ಧವಾದ ಮೇಲ್ಪರಂಬ ಠಾಣೆ

12:30 AM Feb 10, 2019 | Team Udayavani |

ಕಾಸರಗೋಡು: ಸಾರ್ವಜನಿಕರ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಚೆಮ್ನಾಡ್‌ ಗ್ರಾಮ ಪಂಚಾಯತ್‌ನ ಮೇಲ್ಪರಂಬದಲ್ಲಿ ನೂತನ ಪೊಲೀಸ್‌ ಠಾಣೆ ಆರಂಭಗೊಳ್ಳಲಿದೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರು ವಿಡಿಯೋ ಕಾನ್ಫರೆನ್ಸ್‌ ಮೂಲಕ ಠಾಣೆ ಉದ್ಘಾಟಿಸುವರು.

Advertisement

ರಾಜ್ಯ ಸರಕಾರ ಒಂದು ಸಾವಿರ ದಿನ ಪೂರೈಸಿದ ನಿಟ್ಟಿನಲ್ಲಿ ನಡೆಯುವ ಜನಪರ ಉತ್ಸವಗಳ ಅಂಗವಾಗಿ ಈ ಠಾಣೆಯ ಚಾಲನೆ ನಡೆಯಲಿದೆ.ಈ ಮೂಲಕ ಜಿಲ್ಲೆಯಲ್ಲಿ ಮೂರನೇ ಹೈವೇ ಪೊಲೀಸ್‌ ಠಾಣೆ ಶುಭಾರಂಭ ಕಾಣುತ್ತಿದೆ.

ರಾಷ್ಟ್ರೀಯ ಹೆದ್ದಾರಿಯಲ್ಲಿ ಯಾತ್ರಿಕರಿಗೆ ಪ್ರಯಾಣ ಮಧ್ಯೆ ಯಾವುದಾದರೂ ಸಮಸ್ಯೆ ತಲೆದೋರಿದಲ್ಲಿ ಕಾಸರಗೋಡು ಯಾ ನೀಲೇಶ್ವರ ಠಾಣೆಗಳನ್ನು ಸಂಪರ್ಕಿಸಬೇಕಾಗಿ ಬರುತ್ತಿತ್ತು. ಬಹಳ ಅಂತರದ ಹಿನ್ನೆಲೆಯಲ್ಲಿ ಇದು ಬಹುತೇಕ ಬಾರಿ ಸಮಸ್ಯೆಯಾಗುತ್ತಿತ್ತು. ಮೇಲ್ಪರಂಬ ಠಾಣೆ ಆರಂಭ ಮೂಲಕ ಈ ಸಮಸ್ಯೆ ಬಗೆಹರಿಯಲಿದೆ.ಎರಡು ಅಂತಸ್ತಿನ ಕಟ್ಟಡದಲ್ಲಿ ಈ ಪೊಲೀಸ್‌ ಠಾಣೆ ಚಟುವಟಿಕೆ ನಡೆಸಲಿದೆ.ಈ ಮೂಲಕ ರಾಷ್ಟ್ರೀಯ ಹೆದ್ದಾರಿ 66ರ ಸಮಸ್ಯೆಗಳ ಬಗೆಹರಿಕೆ ಸಾಧ್ಯ ಎಂದು ಅಧಿಕಾರಿಗಳು ಮತ್ತು ಸಾರ್ವಜನಿಕರು ನಿರೀಕ್ಷಿಸಿದ್ದಾರೆ.

36 ಪೊಲೀಸರು
36 ಪೊಲೀಸರು ಇಲ್ಲಿ 36 ಮಂದಿ ಪೊಲೀಸರು ಕರ್ತವ್ಯದಲ್ಲಿರುವರು. ಒಬ್ಬ ಸರ್ಕಲ್‌ ಇನ್ಸ್‌ ಪೆಕ್ಟರ್‌, ಇಬ್ಬರು ಸಬ್‌ ಇನ್ಸ್‌ ಪೆಕ್ಟರ್‌ಗಳು, ಒಬ್ಬ ಸಹಾಯಕ ಸಬ್‌ ಇನ್ಸ್‌ಪೆಕ್ಟರ್‌, 5 ಮಂದಿ ಹಿರಿಯ ನಾಗರಿಕ ಪೊಲೀಸರು, 20 ಮಂದಿ ನಾಗರಿಕ ಪೊಲೀಸರು, 5 ಮಂದಿ ಮಹಿಳಾ ಪೊಲೀಸರು, ಇಬ್ಬರು ವಾಹನ ಚಾಲಕರು ಇರುವರು17ರಂದು ಪೊಲೀಸ್‌ ಠಾಣೆಯ ಉದ್ಘಾಟನೆ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next