Advertisement

ತಹಶೀಲ್ದಾರ್‌ ಕಚೇರಿಯಲ್ಲೇ ಆಧಾರ್‌ ತಿದ್ದುಪಡಿ

12:54 PM Sep 24, 2019 | Suhan S |

ಹೊನ್ನಾವರ: ತಾಲೂಕಿನ ಆಧಾರ ಸಮಸ್ಯೆಯಿಂದ ರಸ್ತೆ ಪಕ್ಕದಲ್ಲಿ ನಿಂತು ಸಮಸ್ಯೆ ಉದ್ಭವಿಸಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ಶಾಸಕ ದಿನಕರ ಶೆಟ್ಟಿ ಸ್ಥಳಕ್ಕೆ ಘಟನೆಯ ದಿನವೇ ಭೇಟಿ ನೀಡಿ ಪರಿಶೀಲನೆ ಮಾಡುವ ಮೂಲಕ ಸಮಸ್ಯೆ ಶೀಘ್ರ ಬಗೆಹರಿಸುವ ಭರವಸೆ ನೀಡಿದ್ದರು.

Advertisement

ಮಾರನೇ ದಿನವೇ ತಹಶೀಲ್ದಾರ್‌ ಕಚೇರಿಗೆ ಭೇಟಿ ನೀಡಿ ಸಮಸ್ಯೆ ಕುರಿತು ಅಧ್ಯಯನ ನಡೆಸಿ ಜಿಲ್ಲಾಡಳಿತಕ್ಕೆ ಖಡಕ್‌ ಆದೇಶ ನೀಡಿ ಸಮಯವಕಾಶ ನೀಡಿದ್ದರು. ಮೂರು ತಿಂಗಳಿನಿಂದ ಸಮಸ್ಯೆ ಬಗ್ಗೆ ತಲೆ ಕೆಡಿಸಿಕೊಳ್ಳದ ಜಿಲ್ಲಾಡಳಿತ ಕೂಡಲೇ ಸಮಸ್ಯೆ ಬಗೆಹರಿಸುವ ಪ್ರಯತ್ನ ನಡೆಸಿ ಸೂಕ್ತ ವ್ಯವಸ್ಥೆ ಕಲ್ಪಿಸುವ ಭರವಸೆ ನೀಡಿತ್ತು.

ಮತ್ತೆ ಸೋಮವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ ಶಾಸಕರು ಒಂದು ಘಟಕ ವ್ಯವಹರಿಸುವ ವಿಧಾನ ಪರಿಶೀಲನೆ ನಡೆಸಿದರು. ಅಲ್ಲದೇ ಇನ್ನೊಂದು ಘಟಕದ ಅಗತ್ಯತೆ ಜೊತೆ ತೆರೆಯಲು ಮೀನಾಮೇಷ ವ್ಯಕ್ತಪಡಿಸುವ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು 2 ದಿನ ಕಾಲವಕಾಶ ನೀಡಿದರು.

ಈ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ ಹೊನ್ನಾವರದ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಇನ್ನೊಮ್ಮೆ ಉದ್ಭವಿಸದಂತೆ ವ್ಯವಸ್ಥೆ ಕಲ್ಪಿಸುತ್ತಿದ್ದೇನೆ. ಈಗಾಗಲೇ ತಹಶೀಲ್ದಾರ ಕಚೇರಿಯಲ್ಲಿ ಒಂದು ಘಟಕ ತೆರೆದಿದ್ದು ಇನ್ನೆರಡು ದಿನದಲ್ಲಿ ಮತ್ತೂಂದು ಘಟಕ ಆರಂಭವಾಗಲಿದೆ ಎಂದರು.

ಹೊನ್ನಾವರದ ಸಮಸ್ಯೆ ಕೂಡಲೇ ಬಗೆಹರಿಸುವುದಕ್ಕೆ ಸಾರ್ವಜನಿಕರು ಹರ್ಷ ವ್ಯಕ್ತಪಡಿಸಿದ್ದು ಮುಂದಿನ ದಿನದಲ್ಲಿ ಆಧಾರ್‌ ಸಮಸ್ಯೆ ಉದ್ಭವಿಸದಂತೆ ತಿಳಿಸಿದರು. ಪಪಂ ಸದಸ್ಯರಾದ ಶಿವರಾಜ ಮೇಸ್ತ, ವಿ.ಜು. ಕಾಮತ್‌, ಮೇದಾ ನಾಯ್ಕ, ನಿಶಾ ಶೇಟ್‌, ಮಹೇಶ ಮೆಸ್ತ, ಗ್ರಾಪಂ ಅಧ್ಯಕ್ಷ ಟಿ.ಎಸ್‌. ಹೆಗಡೆ, ಸುರೇಶ ಶೆಟ್ಟಿ, ಮುಖಂಡರಾದ ರಾಜುಭಂಡಾರಿ, ಎಂ.ಎಸ್‌. ಹೆಗಡೆ ಮತ್ತಿತರರುಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next