Advertisement

70 ವರ್ಷ ವಯೋಮಿತಿ ಬದಲಿಸಲು ಯೋಚಿಸಿಲ್ಲ: ಧುಮಾಲ್‌ ಸ್ಪಷ್ಟನೆ

12:21 AM Nov 27, 2019 | Team Udayavani |

ಹೊಸದಿಲ್ಲಿ: ಲೋಧಾ ಸಮಿತಿ ಶಿಫಾರಸಿನಂತೆ ಹೊಸ ಸಂವಿಧಾನವನ್ನು ಅಳವಡಿಸಿಕೊಂಡ ಅನಂತರ ಹೊಸ ಆಡಳಿತ ಮಂಡಳಿ ಅಸ್ತಿತ್ವಕ್ಕೆ ಬಂದಿದೆ. ಹೊಸ ನಾಯಕತ್ವ ವಿನೋದ್‌ ರಾಯ್‌ ನೇತೃತ್ವದ ಆಡಳಿತಾಧಿಕಾರಿಗಳು ಮಾಡಿದ ಮಹ ತ್ವದ ಸುಧಾರಣೆಯನ್ನು ಕೈಬಿಡುವ ಸಿದ್ಧತೆಯಲ್ಲಿದೆ. ಆದರೆ ಈ ತಿದ್ದುಪಡಿ ಪಟ್ಟಿಯಲ್ಲಿ ಪದಾಧಿಕಾರಿಗಳ 70 ವರ್ಷ ವಯೋಮಿತಿ ಬದಲಿಸಲು ಯೋಚಿಸಿಲ್ಲ ಎಂದು ಭಾರತೀಯ ಕ್ರಿಕೆಟ್‌ ಮಂಡಳಿ (ಬಿಸಿಸಿಐ) ನೂತನ ಕಾರ್ಯದರ್ಶಿ ಅರುಣ್‌ ಧುಮಾಲ್‌ ತಿಳಿಸಿದ್ದಾರೆ.

Advertisement

70 ವರ್ಷ ವಯೋಮಿತಿಯನ್ನು ತಿದ್ದುಪಡಿ ಮಾಡುವ ಉದ್ದೇಶ ನಮ ಗಿಲ್ಲ. ಆದರೆ ಕಡ್ಡಾಯ ವಿಶ್ರಾಂತಿ ನಿಯಮವನ್ನು ಬದಲಿಸುವುದು ಮಾತ್ರ ಯೋಚನೆ ಎಂದು ಹೇಳಿದ್ದಾರೆ. ರಾಜ್ಯ ಕ್ರಿಕೆಟ್‌ ಸಂಸ್ಥೆಗಳಲ್ಲಿ ಕೆಲಸ ಮಾಡಿ ಅನುಭವಿಗಳಾದವರನ್ನು ಬಿಸಿಸಿಐನಲ್ಲಿ ಯಾಕೆ ಬಳಸಿಕೊಳ್ಳ ಬಾರದು? ಆ ಅನುಭವವನ್ನು ಮಂಡಳಿಯ ಆಡಳಿತದಲ್ಲಿ ಪ್ರಭಾವಿ ಯಾಗಿ ಬಳಸಿಕೊಳ್ಳಬಹುದು ಎಂದು ಧುಮಾಲ್‌ ಹೇಳಿದ್ದಾರೆ.

ಬದಲಾವಣೆಗೆ ವಿಶಾಲ ಉದ್ದೇಶ
ವಿದೆ ಎಂದು ಧುಮಾಲ್‌ ಹೇಳಿದ್ದರೂ, ಅದು ನೇರವಾಗಿ ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ, ಕಾರ್ಯದರ್ಶಿ ಜೇ ಶಾ ಅವರನ್ನು ಕಾಪಾಡುವ ಗುರಿ ಹೊಂದಿರುವುದು ಸ್ಪಷ್ಟ. ಈ ಇಬ್ಬರೂ ತಮ್ಮ ರಾಜ್ಯಸಂಸ್ಥೆಗಳಲ್ಲಿ ಐದು ವರ್ಷ 3 ತಿಂಗಳ ಕಾಲ ಆಡಳಿತ ನಡೆಸಿದ್ದಾರೆ. ಉಳಿದ 9 ತಿಂಗಳ ಅವಧಿಗೆ ಬಿಸಿಸಿಐ ಹುದ್ದೆ ಪಡೆದಿದ್ದಾರೆ. ಅದರಲ್ಲಿ ಈಗಾಗಲೇ 2 ತಿಂಗಳು ಮುಗಿದಿವೆೆ. ನೂತನ ನಿಯಮದ ಪ್ರಕಾರ ಸತತ 3 ವರ್ಷ ಅಧಿಕಾರ ಮುಗಿದರೆ ಮುಂದಿನ 3 ವರ್ಷ ವಿರಾಮ ಪಡೆಯಬೇಕು.

ಡಿ. 1ಕ್ಕೆ ಬಿಸಿಸಿಐ ಸರ್ವ ಸದಸ್ಯರ ಸಭೆ ನಡೆಯಲಿದೆ. ಅಲ್ಲಿ ಹಲವು ಬದಲಾವಣೆಗಳನ್ನು ನೂತನ ಆಡಳಿತ ಮಂಡಳಿ ಮಂಡಿಸಲಿದ್ದು 4ರಲ್ಲಿ 3ರಷ್ಟು ಮಂದಿ ಒಪ್ಪಿದರೆ ಅಂಗೀಕೃ ತವಾಗಲಿದೆ. ಅದನ್ನು ಮತ್ತೆ ಸರ್ವೋಚ್ಚ ನ್ಯಾಯಾಲ ಯದಲ್ಲಿ ಮಂಡಿಸಬೇಕು. ಅಲ್ಲೂ ಅಂಗೀಕೃತವಾದರೆ ಬಿಸಿಸಿಐ ನಿಯಮವಾಗಿ ಬದಲಾಗಲಿದೆ.

ಏನು ಬದಲಾವಣೆ ?
ಹೊಸ ಬದಲಾವಣೆ ಪ್ರಕಾರ, ಸತತ 6 ವರ್ಷ ಅಧಿಕಾರಾವಧಿ ಮಾಡಿದ ಮೇಲೆ 3 ವರ್ಷ ಕಡ್ಡಾಯ ವಿಶ್ರಾಂತಿ ತೆಗೆದುಕೊಳ್ಳಬೇಕು. ರಾಜ್ಯ ಸಂಸ್ಥೆ, ಬಿಸಿಸಿಐ ಸೇರಿ 6 ವರ್ಷವಾಗಿದ್ದರೂ, ಯಾವುದೋ ಒಂದರಲ್ಲಿ 6 ವರ್ಷವಾಗಿದ್ದರೂ ವಿಶ್ರಾಂತಿ ಪಡೆಯಲೇಬೇಕು. ಇದಕ್ಕೆ ಬದಲಾವಣೆ ಮಾಡಲು ನಿರ್ಧರಿಸಲಾಗಿದೆ. ಬಿಸಿಸಿಐ ಅಥವಾ ರಾಜ್ಯಸಂಸ್ಥೆಯಲ್ಲಿ ಪ್ರತ್ಯೇಕವಾಗಿ ಸತತ 6 ವರ್ಷ ಅಧಿಕಾರ ನಡೆಸಿದ ಮೇಲೆ ಮಾತ್ರ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳು ವಿಶ್ರಾಂತಿ ಪಡೆಯಬೇಕು. ಜತೆಗೆ ಇತರೆ ಪದಾಧಿಕಾರಿಗಳು ಸತತ 9 ವರ್ಷ ಅಧಿಕಾರ ನಡೆಸಲು ಅವಕಾಶ ನೀಡಬೇಕು ಎಂದು ಹೇಳಲಾಗಿದೆ. ಅದೂ ಅಲ್ಲದೇ ರಾಜ್ಯಸಂಸ್ಥೆಯಲ್ಲಿ 9 ವರ್ಷ ಅಧಿಕಾರಾವಧಿ ಪೂರೈಸಿದ ವ್ಯಕ್ತಿ ಬಿಸಿಸಿಐನಲ್ಲಿ ಅಧಿಕಾರ ನಡೆಸಲು ಅವಕಾಶ ನೀಡಬೇಕು ಎನ್ನುವ ಪ್ರಸ್ತಾವವನ್ನೂ ಮಾಡಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next