Advertisement

ಆಂಗ್ಲರ ಐಪಿಎಲ್‌ ಎ. 26ಕ್ಕೆ ಅಂತ್ಯ

09:51 AM Apr 19, 2019 | Sriram |

ಹೊಸದಿಲ್ಲಿ: ಈ ಬಾರಿಯ ಐಪಿಎಲ್‌ನಲ್ಲಿ ಇಂಗ್ಲೆಂಡ್‌ ಕ್ರಿಕೆಟಿಗರ ಆಟ ಮುಗಿಯುವ ಹಂತಕ್ಕೆ ಬಂದಿದೆ. ಮೊದಲೇ ನಿಗದಿಯಾದಂತೆ ಇಂಗ್ಲೆಂಡ್‌ ಆಟಗಾರರು ಎ. 26ರ ಬಳಿಕ ಐಪಿಎಲ್‌ಗೆ ಲಭ್ಯರಿರುವುದಿಲ್ಲ.

Advertisement

ಈ ಐಪಿಎಲ್‌ನಲ್ಲಿ ಆಡುತ್ತಿರುವ ಇಂಗ್ಲೆಂಡಿನ ಆಟಗಾರರೆಂದರೆ ಜಾಸ್‌ ಬಟ್ಲರ್‌, ಜಾನಿ ಬೇರ್‌ಸ್ಟೊ, ಬೆನ್‌ ಸ್ಟೋಕ್ಸ್‌, ಮೊಯಿನ್‌ ಅಲಿ, ಜೋ ಡೆನ್ಲಿ ಮತ್ತು ಜೋಫ‌Å ಆರ್ಚರ್‌. ಇವರಲ್ಲಿ ಮೊದಲ 5 ಮಂದಿ ಇಂಗ್ಲೆಂಡಿನ ವಿಶ್ವಕಪ್‌ ತಂಡಕ್ಕೆ ಆಯ್ಕೆಯಾಗಿದ್ದಾರೆ. ಆರ್ಚರ್‌ ಪಾಕಿಸ್ಥಾನ ವಿರುದ್ಧದ ಏಕದಿನ ಸರಣಿಯಲ್ಲಿ ಆಡಲಿದ್ದಾರೆ.

ರಾಯಲ್ಸ್‌ ಹೊಡೆತ
ಇವರಲ್ಲಿ ದೊಡ್ಡ ಮಟ್ಟದ ನಷ್ಟ ಸಂಭವಿಸುವುದು ರಾಜಸ್ಥಾನ್‌ ರಾಯಲ್ಸ್‌ ತಂಡಕ್ಕೆ. ಈಗಾಗಲೇ 7ನೇ ಸ್ಥಾನಕ್ಕೆ ಕುಸಿದಿರುವ ರಾಜಸ್ಥಾನ್‌ ತಂಡದಲ್ಲಿ ಇಂಗ್ಲೆಂಡಿನ ಮೂವರು ಆಟಗಾರರಿದ್ದಾರೆ-ಬಟ್ಲರ್‌, ಸ್ಟೋಕ್ಸ್‌ ಮತ್ತು ಆರ್ಚರ್‌. ಇವರಲ್ಲಿ ಮಿಂಚಿದ್ದು ಬಟ್ಲರ್‌ ಮಾತ್ರ. ಅವರು 8 ಪಂದ್ಯಗಳಿಂದ 311 ರನ್‌ ಪೇರಿಸಿದ್ದಾರೆ. ಆದರೆ ಸ್ಟೋಕ್ಸ್‌ 6 ಪಂದ್ಯಗಳಿಂದ ಗಳಿಸಿದ್ದು ಕೇವಲ 104 ರನ್‌. ಆರ್ಚರ್‌ ರಾಜಸ್ಥಾನ್‌ ಪರ ಸರ್ವಾಧಿಕ ವಿಕೆಟ್‌ ಉರುಳಿಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ (8 ಇನ್ನಿಂಗ್ಸ್‌, 10 ವಿಕೆಟ್‌). ಡೆತ್‌ ಓವರ್‌ನಲ್ಲಿ ಆರ್ಚರ್‌ ಬೌಲಿಂಗ್‌ ಅತ್ಯಂತ ಘಾತಕವಾಗಿ ಪರಿಣಮಿಸಿತ್ತು.

ಆರ್‌ಸಿಬಿ ತಂಡದ ಆಲ್‌ರೌಂಡರ್‌ ಮೊಯಿನ್‌ ಅಲಿ ಗಮನಾರ್ಹ ಪ್ರದರ್ಶನ ನೀಡುತ್ತ ಬಂದಿದ್ದಾರೆ. 124 ರನ್‌ ಜತೆಗೆ 5 ವಿಕೆಟ್‌ ಸಂಪಾದಿಸಿದ್ದಾರೆ. ಆದರೆ ಈಗಾಗಲೇ ಪ್ಲೇ ಆಫ್ ರೇಸ್‌ನಿಂದ ಬಹುತೇಕ ಹೊರಬಿದ್ದಿರುವುದರಿಂದ ಅಲಿ ನಿರ್ಗಮನ ಆರ್‌ಸಿಬಿ ಪಾಲಿಗೆ ನಷ್ಟವೇನೂ ಉಂಟುಮಾಡದು!
ಕೆಕೆಆರ್‌ ತಂಡದ ಜೋ ಡೆನ್ಲಿ ಈವರೆಗೆ ಆಡಿದ್ದು ಒಂದು ಪಂದ್ಯ ಮಾತ್ರ. ಅದರಲ್ಲಿ “ಗೋಲ್ಡನ್‌ ಡಕ್‌’ ಸಂಕಟಕ್ಕೆ ಸಿಲುಕಿದ್ದಾರೆ.

ಹೈದರಾಬಾದ್‌ಗೆ ನಷ್ಟ
ಜಾನಿ ಬೇರ್‌ಸ್ಟೊ ಹೈದರಾಬಾದ್‌ ತಂಡದ ಪ್ರಮುಖ ಆಟಗಾರನಾಗಿ ಮಿಂಚುತ್ತ ಬಂದಿದ್ದಾರೆ. ವಾರ್ನರ್‌-ಬೇರ್‌ಸ್ಟೊ ಈ ಐಪಿಎಲ್‌ನ ಯಶಸ್ವೀ ಆರಂಭಿಕ ಜೋಡಿಯಾಗಿದೆ. 7 ಪಂದ್ಯಗಳಿಂದ 304 ರನ್‌ ಬಾರಿಸಿದ್ದು ಬೇರ್‌ಸ್ಟೊ ಸಾಧನೆ. ಸದ್ಯ ಈ ಬಾರಿಯ ಗರಿಷ್ಠ ರನ್‌ ಸಾಧಕರಲ್ಲಿ ಬೇರ್‌ಸ್ಟೊ ಅವರಿಗೆ ದ್ವಿತೀಯ ಸ್ಥಾನ.

Advertisement
Advertisement

Udayavani is now on Telegram. Click here to join our channel and stay updated with the latest news.

Next