ಮುಂಬಯಿ: ರಣಜಿ ಟ್ರೋಫಿ ಕ್ರಿಕೆಟ್ ಕೂಟದ ಐತಿಹಾಸಿಕ 500ನೇ ಪಂದ್ಯದಲ್ಲಿ ಭಾರೀ ನಿರೀಕ್ಷೆಗಳೊಂದಿಗೆ ಆಡಲಿಳಿದ ಮುಂಬಯಿ ತಂಡವು ಬರೋಡ ತಂಡದ ಅತಿತ್ ಸೇs… ಮತ್ತು ಲುಕ್ಮಣ್ ಮೆರಿವಾಲ ಅವರ ದಾಳಿಗೆ ತತ್ತರಿಸಿತಲ್ಲದೇ ಕೇವಲ 171 ರನ್ನಿಗೆ ಆಲೌಟಾಗಿದೆ.
ಇದಕ್ಕುತ್ತರವಾಗಿ ಬರೋಡ ತಂಡವು ಮೊದಲ ದಿನದಾಟದ ಅಂತ್ಯಕ್ಕೆ 26 ಓವರ್ ಆಡಿದ್ದು ಒಂದು ವಿಕೆಟಿಗೆ 63 ರನ್ ಗಳಿಸಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ಮುನ್ನಡೆ ಪಡೆಯಲು ಬರೋಡ ಇನ್ನು 108 ರನ್ ಗಳಿಸಬೇಕಾಗಿದೆ. ಇದೇ ಪಂದ್ಯದ ಮೂಲಕ ರಣಜಿಗೆ ಪಾದಾರ್ಪಣೆಗೈದ ಎಡಗೈ ಆರಂಭಿಕ ಅಹ್ಮದ್ ನೂರ್ ಪಠಾಣ್ ಅವರನ್ನು ತಂಡ ಕಳೆದುಕೊಂಡಿದೆ. 24 ಎಸೆತ ಎದುರಿಸಿದ್ದ ಅವರು 14 ರನ್ ಗಳಿಸಿದ್ದರು. ಆಫ್ ಸ್ಪಿನ್ನರ್ ಕಾರ್ತಿಕ್ ಕಾಕಡೆ ರಣಜಿಗೆ ಪಾದಾರ್ಪಣೆಗೈದ ಇನ್ನೋರ್ವ ಆಟಗಾರ ಆಗಿದ್ದಾರೆ.
ವಾಂಖೇಡೆ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗಿಗೆ ಇಳಿಸಲ್ಪಟ್ಟ ಮುಂಬಯಿ ಆರಂಭದಲ್ಲಿಯೇ ಎಡವಿತು. ಮೂರನೇ ಓವರಿನಲ್ಲಿ 5 ರನ್ ಗಳಿಸುವಷ್ಟರಲ್ಲಿ ತಂಡ ಎರಡು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಬಿತ್ತು. ಉತ್ತಮ ಫಾರ್ಮ್ನಲ್ಲಿದ್ದ ಪೃಥ್ವಿ ಶಾ ಮತ್ತು ಅಜಿಂಕ್ಯ ರಹಾನೆ ಅವರನ್ನು ಶೂನ್ಯಕ್ಕೆ ಔಟ್ ಮಾಡಿಸಿದ ಸೇs… ಮುಂಬಯಿಗೆ ಪ್ರಬಲ ಹೊಡೆತ ನೀಡಿದರು. ಈ ಹೊಡೆತದಿಂದ ಮುಂಬಯಿ ಕೊನೆಯತನಕವೂ ಜೇತರಿಸಿಕೊಳ್ಳಲಿಲ್ಲ.
ನಾಯಕ ಆದಿತ್ಯ ತಾರೆ ಅವರನ್ನು ಹೊರತುಪಡಿಸಿ ಉಳಿದ ಯಾವುದೇ ಆಟಗಾರ ಬರೋಡ ದಾಳಿಯನ್ನು ಎದುರಿಸಲು ವಿಫಲರಾದರು. ತಾರೆ ಐದನೆಯವರಾಗಿ ಔಟಾಗುವ ಮೊದಲು 50 ರನ್ ಹೊಡೆದಿದ್ದರು. ಅಂತಿಮವಾಗಿ ಮುಂಬಯಿ 171 ರನ್ನಿಗೆ ಆಲೌಟಾಯಿತು.ಅತಿತ್ ಸೇs… 50 ರನ್ನಿಗೆ 5 ಮತ್ತು ಮೆರಿವಾಲ 52 ರನ್ನಿಗೆ 5 ವಿಕೆಟ್ ಕಿತ್ತರು.
ಸಂಕ್ಷಿಪ್ತ ಸ್ಕೋರು: ಮುಂಬಯಿ ಪ್ರಥಮ ಇನ್ನಿಂಗ್ಸ್ 171 (ಆದಿತ್ಯ ತಾರೆ 50, ಶ್ರೇಯಸ್ ಅಯ್ಯರ್ 28, ಸಿದ್ದೇಶ್ ಲಾಡ್ 21, ಅತಿತ್ ಸೇs… 50ಕ್ಕೆ 5, ಲುಕ್ಮಣ್ ಮೆರಿವಾಲ 52ಕ್ಕೆ 5); ಬರೋಡ ಒಂದು ವಿಕೆಟಿಗೆ 63 (ಆದಿತ್ಯ ವಾಗೊ¾àಡೆ 15 ಬ್ಯಾಟಿಂಗ್, ವಿಷ್ಣು ಸೋಲಂಕಿ 32 ಬ್ಯಾಟಿಂಗ್).