Advertisement
ಮಾ.19 ರಂದು ಚುನಾವಣೆಯ ಆಧಿಸೂಚನೆ ಹೊರ ಬೀಳಲಿದ್ದು, ವಿವಿಧ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆ ಸಲ್ಲಿಸಲು ಮುಹೂರ್ತ ನಿಗದಿಪಡಿಸಿಕೊಳ್ಳುತ್ತಿದ್ದಾರೆ. ಅಖಾಡಕ್ಕೆ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಬಳಕವಷ್ಟೇ ಕ್ಷೇತ್ರದಲ್ಲಿ ಚುನಾವಣ ಕಣ ರಂಗೇರಲಿದೆ.
Related Articles
Advertisement
ಗೌರಿಬಿದನೂರು ಕ್ಷೇತ್ರದಲ್ಲಿ ಒಟ್ಟು 261 ಮತಗಟ್ಟೆಗಳ ಪೈಕಿ 30 ಅತ್ಯಂತ ಕ್ಲಿಷ್ಟಕರವಾಗಿದ್ದರೆ 231 ಸಾಮಾನ್ಯ ಮತಗಟ್ಟೆಗಳಾಗಿವೆ. ಬಾಗೇಪಲ್ಲಿ ಕ್ಷೇತ್ರದಲ್ಲಿ ಗುಡಿಬಂಡೆ ತಾಲೂಕು ಸೇರಿಕೊಂಡು ಒಟ್ಟು 263 ಪೈಕಿ 50 ಸೂಕ್ಷ್ಮವಾಗಿದ್ದರೆ, ಉಳಿದ 213 ಮತಗಟ್ಟೆಗಳು ಸಾಮಾನ್ಯವಾಗಿವೆ.
ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಒಟ್ಟು 254 ಮತಗಟ್ಟೆಗಳಿದ್ದು, ಆ ಪೈಕಿ 67 ಅತ್ಯಂತ ಕ್ಲಿಷ್ಟಕರೆ, 187 ಸಾಮಾನ್ಯ ಮತಗಟ್ಟೆಗಳಾಗಿವೆ. ಯಲಹಂಕ ಕ್ಷೇತ್ರದಲ್ಲಿ ಒಟ್ಟು 376 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಆ ಪೈಕಿ 88 ಅತ್ಯಂತ ಕ್ಲಿಷ್ಟಕರ ಹಾಗೂ 288 ಸಾಮಾನ್ಯ ಮತಗಟ್ಟೆಗಳಾಗಿ ಜಿಲ್ಲಾಡಳಿತ ಗುರುತಿಸಲಾಗಿದೆ.
ಹೊಸಕೋಟೆ ಕ್ಷೇತ್ರದಲ್ಲಿ ಒಟ್ಟು 286 ಮತಗಟ್ಟೆಗಳಿದ್ದು, ಆ ಪೈಕಿ 85 ಅತಿ ಸೂಕ್ಷ್ಮ ಹಾಗೂ ಉಳಿದ 201 ಸಾಮಾನ್ಯ ಮತಗಟ್ಟೆಗಳಾಗಿವೆ. ದೇವನಹಳ್ಳಿ ಕ್ಷೇತ್ರದಲ್ಲಿ ಒಟ್ಟು 292 ಮತಗಟ್ಟೆಗಳಿದ್ದು, ಆ ಪೈಕಿ 58 ಅತ್ಯಂತ ಕ್ಲಿಷ್ಟಕರ ಹಾಗೂ 234 ಸಾಮಾನ್ಯ ಮತಗಟ್ಟೆಗಳಾಗಿವೆ. ದೊಡ್ಡಬಳ್ಳಾಪುರ ಕ್ಷೇತ್ರದಲ್ಲಿ 276 ಮತಗಟ್ಟೆಗಳಿದ್ದು, ಆ ಪೈಕಿ 56 ಅತ್ಯಂತ ಕ್ಲಿಷ್ಟಕರ ಹಾಗೂ 220 ಸಾಮಾನ್ಯ ಮತಗಟ್ಟೆ ಮತ್ತು ನೆಲಮಂಗಲ ಕ್ಷೇತ್ರದಲ್ಲಿ 276 ಮತಗಟ್ಟೆಗಳಿದ್ದು, ಆ ಪೈಕಿ 52 ಅತ್ಯಂತ ಕಿಷ್ಟಕರ 224 ಸಾಮಾನ್ಯ ಮತಗಟ್ಟೆಗಳಾಗಿವೆ.
ಚಿಂತಾಮಣಿ 80, ಶಿಡ್ಲಘಟ್ಟದಲ್ಲಿ 57: ಕೋಲಾರ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಸೇರುವ ಜಿಲ್ಲೆಯ ಜಿದ್ದಾಜಿದ್ದಿನ ರಾಜಕಾರಣಕ್ಕೆ ಹೆಸರಾಗಿರುವ ಚಿಂತಾಮಣಿ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 265 ಮತಗಟ್ಟೆಗಳಿದ್ದು ಆ ಪೈಕಿ 80 ಕ್ಕೂ ಹೆಚ್ಚು ಮತಗಟ್ಟೆಗಳು ಅತ್ಯಂತ ಅತ್ಯಂತ ಕ್ಲಿಷ್ಟಕರವಾಗಿದೆ.
ಶಿಡ್ಲಘಟ್ಟ ಕ್ಷೇತ್ರದಲ್ಲಿ 242 ಮತಗಟ್ಟೆಗಳಿದ್ದು, ಆ ಪೈಕಿ 57 ಮತಗಟ್ಟೆಗಳು ಮಾತ್ರ ಅತ್ಯಂತ ಕ್ಲಿಷ್ಟಕರವಾಗಿದ್ದು ಉಳಿದ 185 ಮತಗಟ್ಟೆಗಳು ಸಾಮಾನ್ಯ ಮತಗಟ್ಟೆಗಳಾಗಿವೆ. ಇಲ್ಲಿ ಕೂಡ ಅತ್ಯಂತ ಕ್ಲಿಷ್ಟಕರ ಮತಗಟ್ಟೆಗಳಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲು ಜಿಲ್ಲಾಡಳಿತ ನಿರ್ಧರಿಸಿದೆ.
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಸದ್ಯಕ್ಕೆ 486 ಮತಗಟ್ಟೆಗಳನ್ನು ಅತ್ಯಂತ ಅತ್ಯಂತ ಕ್ಲಿಷ್ಟಕರ ಮತಗಟ್ಟೆಗಳಾಗಿ ಗುರುತಿಸಲಾಗಿದೆ. ಸ್ಥಳೀಯವಾಗಿ ಕ್ಷೇತ್ರದಲ್ಲಿ ಯಾರ್ಯಾರು ಅಭ್ಯರ್ಥಿಗಳಾಗುತ್ತಾರೆ ಎಂಬುದನ್ನು ನೋಡಿಕೊಂಡು ಅತ್ಯಂತ ಕ್ಲಿಷ್ಟಕರ ಮತಗಟ್ಟೆಗಳು ಹೆಚ್ಚಾಗಬಹುದು ಅಥವಾ ಕಡಿಮೆ ಆಗಬಹುದು. ಅತ್ಯಂತ ಕ್ಲಿಷ್ಟಕರ ಮತಗಟ್ಟೆಗೂ ಸಿಆರ್‌ಪಿಎಫ್ ಯೋಧರನ್ನು ಹೆಚ್ಚುವರಿಯಾಗಿ ನಿಯೋಜಿಸುವ ನಿಟ್ಟಿನಲ್ಲಿ ಚಿಂತನೆ ನಡೆಸಲಾಗಿದೆ. ಸಾಮಾನ್ಯ ಮತಗಟ್ಟೆಗೆ ಪೊಲೀಸ್ ಪೇದೆ ಅಥವಾ ಗೃಹ ರಕ್ಷಕರನ್ನು ನಿಯೋಜಿಸಲಾಗುವುದು.-ಕೆ.ಸಂತೋಷ ಬಾಬು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಒಟ್ಟು 486 ಅತ್ಯಂತ ಕ್ಲಿಷ್ಟಕರ ಮತಗಟ್ಟೆಗಳಲ್ಲಿ ಮತದಾನದ ವೇಳೆ ಕಾನೂನು ಸುವ್ಯವಸ್ಥೆ ಪರಿಸ್ಥಿತಿಯನ್ನು ಕ್ಷಣ ಕ್ಷಣಕ್ಕೂ ತಿಳಿಯುವ ನಿಟ್ಟಿನಲ್ಲಿ ಪ್ರತಿ ಮತಗಟ್ಟೆಯಲ್ಲೂ ಕೂಡ ವೆಬ್‌ಕಾಸ್ಟಿಂಗ್ ಮಾಡಲು ಚಿಂತನೆ ನಡೆಸಲಾಗಿದೆ. ಪ್ರತಿ ಮತಗಟ್ಟೆಗೂ ಮೈಕ್ರೋ ವೀಕ್ಷಕರನ್ನು ಚುನಾವಣಾ ಕಾರ್ಯಗಳಿಗೆ ನಿಯೋಜಿಸಲಾಗುತ್ತಿದೆ. ಹೆಚ್ಚಿನ ಪೊಲೀಸ್ ಭದ್ರತೆಯನ್ನು ಈ ಮತಗಟ್ಟೆಗಳಲ್ಲಿ ನಿಯೋಜಿಸಲಾಗುವುದು.
-ಅನಿರುದ್ಧ್ ಶ್ರವಣ್, ಜಿಲ್ಲಾಧಿಕಾರಿ * ಕಾಗತಿ ನಾಗರಾಜಪ್ಪ