ಹೊಸದಿಲ್ಲಿ: ಆಸ್ಟ್ರೇಲಿಯದ ಗೋಲ್ಟ್ ಕೋಸ್ಟ್ ಸಿಟಿಯಲ್ಲಿ ಎ. 4ರಿಂದ 15ರ ವರೆಗೆ ನಡೆಯಲಿರುವ 2018ರ ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಪಾಲ್ಗೊಳ್ಳುವ 325 ಸದಸ್ಯರ ಭಾರತೀಯ ದಂಡಿಗೆ ಕ್ರೀಡಾ ಸಚಿವಾಲಯ ಒಪ್ಪಿಗೆ ಸೂಚಿಸಿದೆ. ಈ ದಂಡಿಯಲ್ಲಿ 221 ಆ್ಯತ್ಲೀಟ್ಸ್, 58 ತರಬೇತಿದಾರರು. 17 ವೈದ್ಯರು ಮತ್ತು ಫಿಸಿಯೋಥೆರಪಿಸ್ಟ್, 7 ವ್ಯವಸ್ಥಾಪಕರು ಹಾಗೂ 22 ಇತರ ಅಧಿಕಾರಿಗಳಿದ್ದಾರೆ.
ವೈಯಕ್ತಿಕ ಕ್ರೀಡಾ ಸ್ಪರ್ಧೆಯಲ್ಲಿ ಆ್ಯತ್ಲೆಟಿಕ್ಸ್ ಮತ್ತು ಶೂಟಿಂಗ್‌ನಲ್ಲಿ ಗರಿಷ್ಠ ಸಂಖ್ಯೆಯ ಕ್ರೀಡಾಪಟುಗಳಿದ್ದಾರೆ. ಆ್ಯತ್ಲೆಟಿಕ್ಸ್‌ನಲ್ಲಿ 31 ಮತ್ತು ಶೂಟಿಂಗ್‌ನಲ್ಲಿ 21 ಮಂದಿ ಇದ್ದರೆ ವೇಟ್‌ಲಿಫ್ಟಿಂಗ್ ಮತ್ತು ಕುಸ್ತಿಯಲ್ಲಿ ಅನುಕ್ರಮ ವಾಗಿ 16 ಮತ್ತು 12 ಮಂದಿ ಭಾರತವನ್ನು ಪ್ರತಿನಿಧಿಸಲಿದ್ದಾರೆ. ಬ್ಯಾಡ್ಮಿಂಟನ್‌ನಲ್ಲಿ ವಿಶ್ವದ ಎರಡನೇ ರ್‍ಯಾಂಕಿನ ಕಿದಂಬಿ ಶ್ರೀಕಾಂತ್ ಮತ್ತು ಮೂರನೇ ರ್‍ಯಾಂಕಿನ ಪಿವಿ ಸಿಂಧು ಸಹಿತ 10 ಮಂದಿ ಗರಿಷ್ಠ ಪದಕಕ್ಕಾಗಿ ಪೈಪೋಟಿ ನೀಡಲಿದ್ದಾರೆ. ಸಿಂಧು ಅವರು ಭಾರತದ ಧ್ವಜಧಾರಿಯಾಗಿ ಗೇಮ್ಸ್‌ನ
ಉದ್ಘಾಟನ ಸಮಾರಂಭದ ವೇಳೆ ನಡೆಯುವ ಪಥಸಂಚಲನದಲ್ಲಿ ಭಾಗವಹಿಸಲಿದ್ದಾರೆ.
ಭಾರತೀಯ ದಂಡಿನ ಎಲ್ಲ ಖರ್ಚು ವೆಚ್ಚಗಳನ್ನು ಭಾರತೀಯ ಕ್ರೀಡಾ ಪ್ರಾಧಿಕಾರ (ಸಾಯ್) ನೋಡಿಕೊಳ್ಳ ಲಿದೆ. ಇದಕ್ಕಾಗಿ ಸಾಯ್ ನೋಡಲ್ ಅಧಿಕಾರಿಯೊಬ್ಬರನ್ನು ನೇಮಕ ಮಾಡ ಲಿದೆ. ಅವರು ಆಟಗಾರರ ಖರ್ಚು ಸಹಿತ ಇತರ ಕಾರ್ಯಚಟುವಟಿಕೆಗಳ ಬಗ್ಗೆ ಸಹಕಾರ ನೀಡಲಿದ್ದಾರೆ ಎಂದು ಕ್ರೀಡಾ ಸಚಿವಾಲಯ ತಿಳಿಸಿದೆ.
ಗೇಮ್ಸ್‌ನಲ್ಲಿ ಪಾಲ್ಗೊಳ್ಳುವ ಆ್ಯತ್ಲೀಟ್‌ಗಳ ದ್ರವ್ಯ ಪರೀಕ್ಷೆ ನಡೆಸಲು ಭಾರತೀಯ ಒಲಿಂಪಿಕ್ ಅಸೋಸಿಯೇಶನ್ (ಐಒಎ), ಭಾರತೀಯ ಕ್ರೀಡಾ ಪ್ರಾಧಿಕಾರ (ಸಾಯ್), ರಾಷ್ಟ್ರೀಯ ದ್ರವ್ಯ ವಿರೋಧಿ ದಳ (ನಾಡಾ) ಮತ್ತು ಸಂಬಂಧಪಟ್ಟ ನ್ಯಾಶನಲ್ ನ್ಪೋರ್ಟ್ಸ್ ಫೆಡರೇಶನ್‌ಗಳು ಅಗತ್ಯವಿರುವ ಕ್ರಮಕೈಗೊಳ್ಳಲಿವೆ. ಆಸ್ಟ್ರೇಲಿಯಕ್ಕೆ ತೆರಳುವ ಮೊದಲು ಕ್ರೀಡಾಪಟುಗಳ ವೈದ್ಯಕೀಯ ಫಿಟ್‌ನೆಸ್ ಅನ್ನು ಐಒಎ ಪರಿಶೀಲಿಸಲಿದೆ.
ಗೇಮ್ಸ್‌ಗೆ ತೆರಳುವ ದಂಡಿನಲ್ಲಿರುವ ಹೆಚ್ಚುವರಿ ಅಧಿಕಾರಿಗಳ ಉಪಸ್ಥಿತಿಯ ಬಗೆಗ ಕ್ರೀಡಾ ಸಚಿವಾಲಯ ಮತ್ತು ಐಒಎ ನಡುವೆ ಭಾರೀ ಚರ್ಚೆ ನಡೆಯುತ್ತಿದೆ. ಹೆಚ್ಚುವರಿ ಅಧಿಕಾರಿ ಗಳ ಪ್ರಯಾಣಕ್ಕೆ ಅನುಮತಿ ನೀಡದ ಸರಕಾರದ ನೀತಿ ಬಗ್ಗೆ ಮರು ಪರಿಶೀಲನೆ ಮಾಡುವುದಾಗಿ ಕ್ರೀಡಾ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ ತಿಳಿಸಿದ್ದಾರೆ.