ಬೆಂಗಳೂರು: ನಗರ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಯಲ್ಲಿ ಕಳೆದ 7 ವರ್ಷದಿಂದ ಚಿಕಿತ್ಸೆ ಪಡೆಯುತ್ತಿದ್ದ ನವದೆಹಲಿ ಮೂಲದ ಮಹಿಳೆ ಮೇ 24ರಂದು ಕೋಮಾ ಸ್ಥಿತಿಯಲ್ಲಿರುವಾಗಲೇ ಮೃತಪಟ್ಟಿದ್ದಾರೆ.
ಸಾಫ್ಟ್‌ವೇರ್ ಎಂಜಿನಿಯರ್ ಉದ್ಯೋಗಿಯಾಗಿದ್ದ ಪೂನಮ್ ಮೃತ ಮಹಿಳೆ(35). ಈಕೆ 7 ವರ್ಷಗಳ ಹಿಂದೆ ಹೊಟ್ಟೆ ನೋವಿನಿಂದಾಗಿ 2014ರಲ್ಲಿ ನಗರ ಆಸ್ಪತ್ರೆಯ ಎಂಐಸಿಯುಗೆ ದಾಖಲಾಗಿದ್ದರು.
ಕಳೆದ 7 ವರ್ಷದಿಂದ ವಿವಿಧ ರೀತಿ ಚಿಕಿತ್ಸೆ ಹಾಗೂ ಆರೈಕೆಗೆ ಒಳಗಾಗಿದ್ದರು. ಪ್ರಾರಂಭದಲ್ಲಿ ಸಾಮಾನ್ಯ ಪ್ರಕರಣ ವೆಂದು ಸಣ್ಣ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಅನಂತರ ಸಾಕಷ್ಟು ಸಮಸ್ಯೆ ಎದುರಾಗಿತ್ತು. ಸುದೀರ್ಘ ಅವಧಿಯಲ್ಲಿ ಚಿಕಿತ್ಸೆಗೆ ಬರೋಬ್ಬರಿ 9.5 ಕೋಟಿ ರೂ. ಬಿಲ್ ಆಗಿದ್ದು, ಈ ಪೈಕಿ 2 ಕೋಟಿ ರೂ. ಪಾವತಿಸಲಾಗಿದೆ ಎಂದು ಪೂನಮ್ ಪತಿ ರಾಜೇಶ್ ನಾಯಕ್ ತಿಳಿಸಿದರು.
ಕೇರಳ ಮೂಲದ ರಾಜೇಶ್ ನಾಯಕ್ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ರಾಜೇಶ್ ದಂಪತಿಗಳಿಗೆ ಮಕ್ಕಳು ಇರಲಿಲ್ಲ. ಈ ಹಿಂದೆ ಮುಂಬೈ ಆಸ್ಪತ್ರೆಯಲ್ಲಿ 42 ವರ್ಷಗಳ ಕಾಲ ಕೋಮಾ ಸ್ಥಿತಿಯಲ್ಲಿ ದಾಖಲಾಗಿದ್ದ ಅರುಣಾ ಶಾನ್ ಬಾಗ್ ಬಳಿಕ ದೀರ್ಘ ಅವಧಿಯ ಕಾಲ ಆಸ್ಪತ್ರೆಯಲ್ಲಿ ದಾಖಲಾದ 2ನೇ ಪ್ರಕರಣ ಪೂನಮ್ ಅವರದ್ದು.
ಇದನ್ನೂ ಓದಿ:ವೇಶ್ಯಾವಾಟಿಕೆಯೂ ಒಂದು ಕಾನೂನು ಬದ್ಧ ವೃತ್ತಿ
2014ರಲ್ಲಿ ಪೂನಮ್ ಅವರು ಎಂಐಸಿಯುಗೆ ದಾಖಲಾಗಿದ್ದರು. ಇದುವರೆಗೆ ವಿವಿಧ ಚಿಕಿತ್ಸೆ ಹಾಗೂ ಆರೈಕೆಗೆ ಒಳಗಾಗಿದ್ದರು. ಇದೆಲ್ಲರ ನಡುವೆ ಮೇ 24ರ ಮಧ್ಯರಾತ್ರಿ ಮೃತಪಟ್ಟಿದ್ದಾರೆ ಎಂದು ನಗರ ಪ್ರತಿಷ್ಠಿತ ಆಸ್ಪತ್ರೆ ಮೂಲಗಳು ತಿಳಿಸಿವೆ.