ಮಂಡ್ಯ: ತಾಲೂಕಿನ ಕೀಲಾರ ಗ್ರಾಮದ ಲೇಟ್ ಮಂಚೇಗೌಡ ಅವರ ಕುಟುಂಬದಲ್ಲಿ ಜಾನುವಾರು ಗಳ ಸಾವಿನ ಸರಣಿ ಮುಂದುವರೆದಿದೆ.
ಗಣೇಶನ ಹಬ್ಬದ ದಿನವಾದ ಶುಕ್ರವಾರ ಮತ್ತೊಂದು ಎತ್ತು ಮೃತಪಟ್ಟಿದೆ. ಇದರೊಂದಿಗೆ ನಿಗೂಢಕ್ಕೆಬಲಿಯಾದಜಾನುವಾರುಗಳ ಸಂಖ್ಯೆ 29ಕ್ಕೆ ಏರಿಕೆಯಾಗಿದೆ.ಕಳೆದ ಎರಡೂವರೆ ವರ್ಷದಿಂದ ಜಾನುವಾರು ಸರಣಿಯಾಗಿ ಸಾವನ್ನಪ್ಪುತ್ತಿವೆ. ಆದರೆ, ನಿಖರ ಕಾರಣ ಈವರೆಗೂ ತಿಳಿದು ಬಂದಿಲ್ಲ. ಮಂಚೇಗೌಡ ಅವರ ಮಕ್ಕಳಾದ ಶಂಕರೇಗೌಡ ಹಾಗೂ ಕೃಷ್ಣೇ ಗೌಡ ಮತ್ತು ಇವರ ಮಗಳು ಶ್ರುತಿ ಅವರ ಮನೆಯಲ್ಲಿ ಜಾನುವಾರು ಮೃತಪಡುತ್ತಿವೆ. ಇದು ಕುಟುಂಬದವರನ್ನು ಸೇರಿದಂತೆ ಸ್ಥಳೀಯರಿಗೂ ಆತಂಕ ಉಂಟು ಮಾಡಿದೆ.
ಆತಂಕ: ಶುಕ್ರವಾರ ಶ್ರುತಿ ಅವರಿಗೆ ಸೇರಿದ ಎತ್ತು ಅನುಮಾನಾಸ್ಪದವಾಗಿ ಮೃತಪಟ್ಟಿದೆ. ಸ್ಥಳಕ್ಕೆ ತಹಶೀಲ್ದಾರ್ ಚಂದ್ರಶೇಖರ್ ಶಂ.ಗಾಳಿ, ಪಶು ಪಾಲನಾ ಇಲಾಖೆ ಉಪ ನಿರ್ದೇಶಕ ಡಾ.ಮಂಜು ನಾಥ್, ಡಿವೈಎಸ್ಪಿ ಮಂಜುನಾಥ್ ಭೇಟಿ ನೀಡಿ ಪರಿಶೀಲಿಸಿದರು. ಅಂತೆಯೇ ಎತ್ತಿನ ಶವದಿಂದ ಕೆಲಭಾಗವನ್ನು ಸಂಗ್ರಹಿಸಲಾಗಿದ್ದು, ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗುತ್ತಿದೆ. ಆದರೂ ಸಾವಿನ ಪ್ರಕರಣ ಮರು ಕಳಿಸುತ್ತಿರುವ ಆತಂಕಕ್ಕೆಕಾರಣವಾಗಿದೆ. ತಿಳಿಯದ ಕಾರಣ: ಕಳೆದ ವರ್ಷ ಅಕ್ಟೋಬರ್‌ನಲ್ಲಿ ಶಂಕರೇಗೌಡ ಅವರಿಗೆ ಸೇರಿದ ಹಸು ಕೂಡ ಇದೇ ರೀತಿ ಮೃತಪಟ್ಟಿತ್ತು. ಆ ವೇಳೆ ಅಂದಿನ ಪಶು ಪಾಲನಾ ಇಲಾಖೆ ಅಧಿಕಾರಿಗಳು, ಕೆರ ಗೋಡು ಠಾಣೆ ಪೊಲೀಸರು, ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದರು. ಇದಲ್ಲದೆ ಬೆಂಗಳೂರಿನ ಪ್ರಾಣಿ ಆರೋಗ್ಯ ಮತ್ತು ಜೈವಿಕ ಸಂಸ್ಥೆಯ ವಿಜ್ಞಾನಿಗಳೂ ಆಗಮಿಸಿ ಹಸುವಿನ ಶವ ಪರೀಕ್ಷೆ ನಡೆಸಿ ಕೆಲಭಾಗ ಸಂಗ್ರಹಿಸಿ ಕೊಂಡಿದ್ದರು. ಜತೆಗೆ ಕೆರಗೋಡು ಠಾಣೆಗೆ ದೂರು ಸಲ್ಲಿಸಲಾಗಿದೆ. ಆದರೆ ಈವರೆಗೂ ಜಾನುವಾರು ಸಾವಿಗೆ ಕಾರಣ ತಿಳಿದು ಬಂದಿಲ್ಲ.
ಇದನ್ನೂ ಓದಿ:ಮಹಾದಾಯಿ,ಮೇಕೆದಾಟು ಬಗ್ಗೆ ವಿಪಕ್ಷದಲ್ಲಿದ್ದಾಗ ಮಾತನಾಡಿದ ನಾಯಕರು ಈಗ ಮಾತಾಡುತ್ತಾರೋ.:ಡಿಕೆಶಿ
ಒಂದೇ ಕುಟುಂಬದಲ್ಲಿ ಜಾನುವಾರು ಸಾವನ್ನಪ್ಪಿರುವುದು ನಮಗೂ ನಿಗೂಢ ಮತ್ತು ಆಶ್ಚರ್ಯ ಎನಿಸುತ್ತಿದೆ. ಆದರೆ, ಇಲ್ಲಿಯವರೆಗೂ ಸತ್ತಿ
ರುವ ಜಾನುವಾರುಗಳ ವರದಿ ಒಂದೇ ರೀತಿಯಲ್ಲಿದೆ. ವರದಿಯಲ್ಲಿ ಟಾಕ್ಸಿನ್ ಅಂಶದ ಕುರಿತು ಉಲ್ಲೇಖ ಆಗಿದೆ. (ವಿಷ ಮಿಶ್ರಿತ ಆಹಾರ ಸೇವನೆ). ಶೀಘ್ರ ತನಿಖೆಗೆ ಡೀಸಿಗೆ ಮನವಿ ಕೊಡುತ್ತೇನೆ.
– ಡಾ.ಮಂಜುನಾಥ್,
ಉಪನಿರ್ದೇಶಕರು, ಪಶು
ಸಂಗೋಪನಾ ಇಲಾಖೆ, ಮಂಡ್ಯ.