Advertisement

ಸಂರಕ್ಷಿತ ಸ್ಮಾರಕ ಪಟ್ಟಿಯಲ್ಲಿ ಕರ್ನಾಟಕದ 242 ದೇಗುಲ

08:48 AM Aug 01, 2017 | |

ಹೊಸದಿಲ್ಲಿ: ಕರ್ನಾಟಕದ 242 ದೇವಾಲಯಗಳು ಸೇರಿ ದೇಶಾದ್ಯಂತ 1,076 ದೇಗುಲಗಳನ್ನು ಸಂರಕ್ಷಿತ ಸ್ಮಾರಕಗಳೆಂದು ಭಾರತೀಯ ಪುರಾತತ್ವ ಸರ್ವೇಕ್ಷಣ ಸಂಸ್ಥೆ ಘೋಷಿಸಿದೆ. ಈ ಬಗ್ಗೆ ಸಂಸತ್ತಿಗೆ ಲಿಖೀತ ಉತ್ತರ ನೀಡಿದ ಕೇಂದ್ರ ಸಂಸ್ಕೃತಿ ಸಚಿವ ಮಹೇಶ್‌ ಶರ್ಮಾ, 1,076 ದೇಗುಲಗಳನ್ನು ಸಂರಕ್ಷಿತ ಸ್ಮಾರಕಗಳೆಂದು ಘೋಷಿಸಲಾಗಿದೆ. ಇದರಲ್ಲಿ 242 ದೇಗುಲಗಳು ಸೇರಿದಂತೆ ಒಟ್ಟು 506 ಸ್ಮಾರಕಗಳು ಕರ್ನಾಟಕ ಒಂದರಲ್ಲೇ ಇವೆ. ಸಂರಕ್ಷಣೆ ದೃಷ್ಟಿಯಿಂದ ಇವುಗಳು ಉತ್ತಮ ಸ್ಥಿತಿಯಲ್ಲಿವೆ ಎಂದು ಅವರು ಹೇಳಿದ್ದಾರೆ.  

Advertisement

ರಾಷ್ಟ್ರೀಯ ಮಹತ್ವದ ಸ್ಮಾರಕ ಕಾಯ್ದೆ 1951 ಅಥವಾ ರಾಜ್ಯ ಮರುಸಂಘಟನಾ ಕಾಯ್ದೆಯ 126ನೇ ಸೆಕ್ಷನ್‌ ಅನ್ವಯ ಪುರಾತನ ಕಟ್ಟಡಗಳು, ದೇಗುಲಗಳು, ವಿವಿಧ ಸಂರಚನೆಗಳನ್ನು ಸಂರಕ್ಷಿತ ಸ್ಮಾರಕಗಳೆಂದು ಘೋಷಿಸಲಾಗು ತ್ತದೆ. ಇದರನ್ವಯ ಗುರುತಿಸಲಾದ ಸ್ಥಳಗಳನ್ನು ಸಂರಕ್ಷಿತ ನಿಯ ಮಾವಳಿ ಮತ್ತು ಮಾರ್ಗದರ್ಶಕ ನೀತಿಗಳನ್ವಯ ಕಾಪಿ ಡಲಾಗುತ್ತದೆ. ದೇಶಾದ್ಯಂತ ಈ ವರೆಗೆ ಒಟ್ಟು 3,686 ಸ್ಮಾರಕ ಗಳನ್ನು ಭಾರತೀಯ ಪುರಾತತ್ವ ಇಲಾಖೆ ಘೋಷಿಸಿದ್ದು, ಅವುಗಳ ಸಂರಕ್ಷಣೆ ಮಾಡುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next