Advertisement
ಈ ವಿಚಾರವನ್ನು ನೊಬೆಲ್ ಸಮಿತಿಯು ಸ್ವೀಡನ್‌ನ ರಾಜಧಾನಿ ಸ್ಟಾಕ್‌ಹೋಮ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದ್ದು, ಇಬ್ಬರು ಜೊತೆಯಾಗಿ ಸಂಶೋಧಿಸಿದ ರಾಸಾಯನಿಕ ಟೂಲ್ಕಿಟ್ ಅನ್ನು ಹೊಸ ಔಷಧಿಗಳನ್ನು ಕಂಡುಹಿಡಿಯಲು ಮತ್ತು ಸೌರ ಕೋಶಗಳಲ್ಲಿ ಬೆಳಕನ್ನು ಸೆರೆಹಿಡಿಯಬಲ್ಲ ಅಣುಗಳನ್ನು ತಯಾರಿಸಲು ಬಳಸಲಾಗುತ್ತಿದೆ, ಅವರ ಮಹತ್ತರ ಕೊಡುಗೆಯನ್ನು ಪರಿಗಣಿಸಿ ಪ್ರಶಸ್ತಿ ನೀಡಲಾಗುತ್ತಿದೆ ಎಂದು ತಿಳಿಸಿದೆ.
ಸ್ವೀಡನ್‌ನ ವಿಜ್ಞಾನಿ ಆಲ್ಫ್ರೆಡ್ ನೊಬೆಲ್ ಅವರ ಹೆಸರಿನ ಪುರಸ್ಕಾರ ಇದಾಗಿದ್ದು, ತಾನು ಆವಿಷ್ಕರಿಸಿದ್ದ ಡೈನಮೈಟ್ ಸ್ಫೋಟಕ ಯುದ್ಧದಲ್ಲಿ ಮಾಡಿದ ಹಾನಿಯನ್ನು ಕಂಡು ನೊಬೆಲ್ ಕೊರಗಿದ್ದರು. ಈ ನೋವಿನಂದ ಹೊರ ಬರಲು 1895ರಲ್ಲಿ ತನ್ನ ಸಂಪತ್ತಿನ ಶೇ. 94ರಷ್ಟು ಭಾಗವನ್ನು ಭೌತಶಾಸ್ತ್ರ, ರಸಾಯನ ಶಾಸ್ತ್ರ, ಸಾಹಿತ್ಯ, ಶಾಂತಿ ಮತ್ತು ವೈದ್ಯಕೀಯ ಕ್ಷೇತ್ರಗಳಲ್ಲಿ ಅತ್ಯುನ್ನತ ಸಾಧನೆಗೈದಿರುವವರಿಗೆ ಪ್ರಶಸ್ತಿ ರೂಪದಲ್ಲಿ ನೀಡಲು ಉಯಿಲು ಬರೆದಿದ್ದರು.