Advertisement
ಅವರು ಮಂಗಳೂರು ಆಕಾಶವಾಣಿಯ ಕಲ್ಯಾಣವಾಣಿ ನೇರ ಪೋನ್-ಇನ್ ಕಾರ್ಯಕ್ರಮದಲ್ಲಿ ಮಾತನಾಡಿದರು. ಬಳಿಕ ಸಾರ್ವಜನಿಕರ ವಿವಿಧ ಪ್ರಶ್ನೆಗಳಿಗೆ ಸಂಸದರು ಉತ್ತರಿಸಿದರು.ಜಿಲ್ಲೆಯ ಅಭಿವೃದ್ಧಿಗೆ ಕೇಂದ್ರ ಸರಕಾರದಿಂದ ಈಗಾಗಲೇ ಸಾಕಷ್ಟು ಅನುದಾನಗಳು ಬಂದಿವೆ. 1,200 ಕೋ.ರೂ.ಗಳನ್ನು ರೈಲ್ವೇ ಇಲಾಖೆಗೆ ಬಳಕೆ ಮಾಡಲಾಗಿದೆ. ಕೃಷಿಗೆ ಪ್ರಧಾನಿ ಸಿಂಚನ ಯೋಜನೆ ಮೂಲಕ ಜಿಲ್ಲೆಗೆ 5,500 ಕೋ.ರೂ. ಪ್ರಸ್ತಾವನೆ ಸಲ್ಲಿಸಲಾಗಿದೆ. ಅಮೃತ್ ಯೋಜನೆ ಮೂಲಕ ನಗರ ಪ್ರದೇಶಕ್ಕೆ 163 ಕೋ.ರೂ., ಮಂಗಳೂರು ಸ್ಮಾರ್ಟ್ ಸಿಟಿಗೆ ಸಾವಿರ ಕೋ.ರೂ. ಅನುದಾನ ಬರುತ್ತಿದೆ.
Related Articles
ಮಂಗಳೂರು-ಬೆಂಗಳೂರು ಗೊಮ್ಮಟೇಶ್ವರ ಎಕ್ಸ್‌ಪ್ರೆಸ್ ರೈಲು ಸೆಂಟ್ರಲ್‌ನ ಬದಲು ಜಂಕ್ಷನ್ ರೈಲು ನಿಲ್ದಾಣದಿಂದ ತೆರಳುತ್ತಿದೆ. ಇದರಿಂದ ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದಾರೆ. ಜತೆಗೆ ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಕಳೆದ 25 ವರ್ಷಗಳಿಂದ ಮೂರೇ ಪ್ಲಾಟ್‌ಫಾರ್ಮ್ಗಳಿದ್ದು, 4ನೇ ಪ್ಲಾಟ್‌ಫಾರ್ಮ್ನ ಬೇಡಿಕೆಯೂ ಹಾಗೆ ಇದೆ ಎಂದು ಸಾರ್ವಜನಿಕರು ಗಮನ ಸೆಳೆದರು.
Advertisement
ಗೊಮ್ಮಟೇಶ್ವರ ಎಕ್ಸ್‌ಪ್ರೆಸ್ ರೈಲನ್ನು ಸೆಂಟ್ರಲ್‌ನಿಂದ ಓಡಿಸಲು ಪ್ರಯತ್ನ ನಡೆಯುತ್ತಿವೆ. ಜತೆಗೆ ಮೂರೇ ಪ್ಲಾಟ್‌ಫಾರ್ಮ್ನಿಂದ ಒತ್ತಡ ಹೆಚ್ಚಿದ್ದು, 4ನೇ ಪ್ಲಾಟ್‌ಫಾರ್ಮ್ಗೆ ಯತ್ನಿಸಲಾಗುತ್ತಿದೆ. ಮಂಗಳೂರು- ಹುಬ್ಬಳ್ಳಿ ಮಹಾಲಕ್ಷ್ಮೀ ಎಕ್ಸ್ ಪ್ರಸ್ ರೈಲು ಸಂಚಾರ ಆರಂಭಕ್ಕೆ ಪ್ರಯತ್ನಗಳು ನಡೆಯುತ್ತಿವೆ. ಬೈಂದೂರು-ಮಂಗಳೂರು-ಕಣ್ಣೂರು ರೈಲು ಕೂಡ ಶೀಘ್ರ ಪುನರಾರಂಭಗೊಳ್ಳಲಿದೆ ಎಂದರು.
ಸರಕಾರದ ಟೋಲ್ ರದ್ದುಹೆದ್ದಾರಿಗಳಿಗೆ ಸರಕಾರವೇ ದುಡ್ಡು ಹಾಕಿ ವಾಹನಿಗರಿಂದ ಟೋಲ್ ಸಂಗ್ರಹ ಮಾಡುವುದು ಒಂದು ವಿಧವಾದರೆ ಖಾಸಗಿ ಕಂಪೆನಿಗಳು ಪಿಪಿಪಿ ಮಾದರಿಯಲ್ಲಿ ಅವರೇ ಹಣ ಹಾಕಿ ರಸ್ತೆ ಮಾಡಿ ಟೋಲ್ ಸಂಗ್ರಹಿಸುವುದು ಇನ್ನೊಂದು. ಪ್ರಸ್ತುತ ಕೇಂದ್ರ ಸರಕಾರದ ಮೋಟಾರ್ ಬಿಲ್ ಆ್ಯಕ್ಟ್‌ನ ಮೂಲಕ ಸರಕಾರದ ಟೋಲ್‌ಗಳನ್ನು ತೆಗೆದು ಪಿಪಿಪಿ ಮಾದರಿಯ ಟೋಲನ್ನು ಮಾತ್ರ ಉಳಿಸಿಕೊಳ್ಳಲಾಗುತ್ತದೆ.
– ನಳಿನ್ ಕುಮಾರ್ ಕಟೀಲು