Advertisement

ದೇಶದ ಪಥ ಬದಲಿಸಿದ 10 ವರ್ಷದ ಮೋದಿ ಆಡಳಿತ

11:48 PM Jun 08, 2024 | Team Udayavani |

ಪ್ರಧಾನಮಂತ್ರಿಯಾಗಿ ಸತತ 10 ವರ್ಷಗಳ ಕಾಲ ಸೇವೆ ಸಲ್ಲಿಸಿ, ಇದೀಗ ಮೂರನೇ ಅವಧಿಗೆ ಅಧಿಕಾರವಹಿಸಿಕೊಳ್ಳಲು ನರೇಂದ್ರ ಮೋದಿ ಅವರು ಸಜ್ಜಾಗಿದ್ದಾರೆ. ಈ ಹಿಂದಿನ 2 ಅವಧಿಯಲ್ಲಿ ಮೋದಿ ಆಡಳಿತವು ಭಾರತದ ಆರ್ಥಿಕ, ರಾಜಕೀಯ, ಸಾಮಾಜಿಕ ಸ್ಥಿತಿಯಲ್ಲಿ ಗಮನಾರ್ಹ ಬದಲಾವಣೆಯನ್ನೂ ತಂದಿದ್ದು, ಮೋದಿ ಸರ್ಕಾರದ ಕೆಲವು ಪ್ರಮುಖ ಸಾಧನೆಗಳು ದೇಶದ ಇತಿಹಾಸ ಪುಟಗಳಲ್ಲಿ ತಮ್ಮದೇ ಛಾಪನ್ನೂ ಮೂಡಿಸಿವೆ.

Advertisement

ಪ್ರಮುಖ ಸುಧಾರಣೆಗಳು
1 : ಅಭಿವೃದ್ಧಿ ಹೊಂದಿದ ರಾಷ್ಟ್ರದ ಗುರಿ
– ದೇಶದ ಜಿಡಿಪಿ ಬೆಳವಣಿಗೆ ದರ ಶೇ.8.4ಕ್ಕೆ ಹೆಚ್ಚಳ
– ಆರ್ಥಿಕತೆಯನ್ನು 4 ಲಕ್ಷ ಕೋಟಿ ಡಾಲರ್‌ಗೆ ತಲುಪಿಸುವ ಗುರಿ
– ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯಾಗಿ ಭಾರತ ಮಾರ್ಪಾಡು

2 : ಸಾಮಾಜಿಕ ಸುಧಾರಣೆಗಳು
– ಜಮ್ಮು-ಕಾಶ್ಮೀರಕ್ಕೆ ನೀಡಿದ ವಿಶೇಷ ಸ್ಥಾನಮಾನ (370ನೇ ವಿಧಿ )ರದ್ದು
– ಅಯೋಧ್ಯೆಯಲ್ಲಿ ಐತಿಹಾಸಿಕ ರಾಮ ಮಂದಿರದ ನಿರ್ಮಾಣ
– ಮುಸಲ್ಮಾನರಲ್ಲಿ ಚಾಲ್ತಿಯಲ್ಲಿದ್ದ ತ್ರಿವಳಿ ತಲಾಖ್‌ ಪದ್ದತಿಯ ರದ್ದು
– ಬಡತನ ರೇಖೆಯಿಂದ 25 ಕೋಟಿ ಜನರನ್ನು ಹೊರತಂದ ದಾಖಲೆ

3 : ಆರೋಗ್ಯ ಸಂಬಂಧಿತ ಸುಧಾರಣೆಗಳು
– ಆರೋಗ್ಯ ಮೂಲಸೌಕರ್ಯ ಅಭಿವೃದ್ಧಿಪಡಿಸಿ ಕೊರೋನಾ ಬಿಕ್ಕಟ್ಟಿನ ನಿರ್ವಹಣೆ
– ದೇಶದಲ್ಲೇ ಕೊರೊನಾ ಲಸಿಕೆಯ ಅಭಿವೃದ್ಧಿ, ಮಿತ್ರ ರಾಷ್ಟ್ರಕ್ಕೂ ಸರಬರಾಜು
– ಸಾಂಕ್ರಾಮಿಕ ಪರಿಸ್ಥಿತಿಯಲ್ಲಿ ಬಡವರಿಗೆ ಉಚಿತ ಪಡಿತರ ವಿತರಣೆ ಖಾತರಿ

4 ಮೂಲಸೌಕರ್ಯ ಅಭಿವೃದ್ಧಿ
– ಬಯಲು ಶೌಚದ ಮುಕ್ತಿಗಾಗಿ ಸ್ವತ್ಛ ಭಾರತ ಮಿಷನ್‌ ಆರಂಭ
– ನಗರ ಪ್ರದೇಶದ ಬಡವರಿಗೆ ವಸತಿ ನೀಡಲು ಪಿಎಂ ಆವಾಸ್‌
– ಶುದ್ದ ಕುಡಿಯುವ ನೀರಿನ ವ್ಯವಸ್ಥೆಗಾಗಿ “ಹರ್‌-ಘರ್‌ ಜಲ್‌’
– ಬಡವರಿಗೆ ಎಲ್‌ಪಿಜಿ ಸಂಪರ್ಕ ಕಲ್ಪಿಸಲು “ಉಜ್ವಲ’ ಯೋಜನೆ
– ಸಣ್ಣ ಕೈಗಾರಿಕೆಗಳಿಗೆ ಸಾಲ ಸೌಲಭ್ಯ ನೀಡಲು ” ಮುದ್ರಾ’ ಯೋಜನೆ
– ಬೀದಿ ಬದಿ ವ್ಯಾಪಾರಿಗಳಿಗೆ ಸಾಲ ಸೌಲಭ್ಯಕ್ಕೆ “ಪಿಎಂ ಸ್ವನಿಧಿ’

5 : ಜಾಗತಿಕ ನಾಯಕತ್ವಕ್ಕೂ ಸೈ
– ಜಿ-20 ಶೃಂಗಸಭೆಗೆ ಅಧ್ಯಕ್ಷತೆ, ದೆಹಲಿಯಲ್ಲಿ ಶೃಂಗಸಭೆ
-ಕರೊನಾ ಲಸಿಕೆ ಜಾಗತಿಕ ವಿತರಣೆಯಲ್ಲಿ ಪ್ರಮುಖ ಪಾತ್ರ
– ನೆರೆ ಹೊರೆ ಮೊದಲ ನೀತಿ ಅನ್ವಯ ಲಂಕಾಗೆ ಆರ್ಥಿಕ ನೆರವು
– ಅಮೆರಿಕ, ರಷ್ಯಾ ನಡುವೆ ಸ್ವತಂತ್ರ್ಯ ನಡೆ ಕಾಯ್ದುಕೊಂಡ ಭಾರತ
– ಯಶಸ್ವಿ ರಾಯಭಾರ, ಯುದ್ಧಪೀಡಿತ ರಾಷ್ಟ್ರಗಳಿಂದ ಭಾರತೀಯರ ಪಾರು

23 ವರ್ಷಗಳಿಂದ ಆಡಳಿತ ನಡೆಸುತ್ತಿರುವ ಮೋದಿ

13 ವರ್ಷ ಗುಜರಾತ್‌ನಲ್ಲಿ ಮುಖ್ಯಮಂತ್ರಿ; ದೇಶದ ಪ್ರಧಾನಿಯಾಗಿ 10 ವರ್ಷ ನೇತೃತ್ವ
ನವದೆಹಲಿ: 3ನೇ ಬಾರಿಗೆ ಪ್ರಧಾನಿಯಾಗುತ್ತಿರುವ ನರೇಂದ್ರ ಮೋದಿಯವರ ಆಡಳಿತ ಹತ್ತು ಹಲವು ವಿಶೇಷತೆಗಳನ್ನು ಹೊಂದಿದೆ. ಇದರ ನಡುವೆ ಅವರು ಕಳೆದ 25 ವರ್ಷಗಳಿಂದ ಆಡಳಿತಗಾರರಾಗಿ ಮುಂದುವರಿದಿರುವುದು ಮತ್ತೊಂದು ವಿಶೇಷವಾಗಿದೆ.

2014 ಹಾಗೂ 2019ರಲ್ಲಿ ಪ್ರಧಾನಿಯಾಗಿ ಆಯ್ಕೆಯಾಗಿ ಯಶಸ್ವಿಯಾಗಿ 10 ವರ್ಷಗಳ ಆಡಳಿತ ನಡೆಸಿರುವ ಮೋದಿ, ಇದೀಗ ಮತ್ತೂಮ್ಮೆ ಪ್ರಧಾನಿಯಾಗಿ ಹ್ಯಾಟ್ರಿಕ್‌ ಸಾಧನೆ ಮಾಡಿದ್ದಾರೆ.

Advertisement

2001ರಲ್ಲಿ ಅವರು ಗುಜರಾತ್‌ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಮೋದಿ ಅಂದಿನಿಂದ ಮತ್ತೆ ಹಿಂದಿರುಗಿ ನೋಡಿಲ್ಲ. 2014ರವರೆಗೂ ಗುಜರಾತ್‌ನಲ್ಲಿ ಆಡಳಿತ ನಡೆಸಿ, 2014ರಲ್ಲಿ ದೇಶದ ಚುಕ್ಕಾಣಿ ಹಿಡಿದರು. 5 ವರ್ಷಗಳ ಯಶಸ್ವಿ ಆಡಳಿತದ ಪರಿಣಾಮ 2019ರಲ್ಲಿ ಪೂರ್ಣ ಬಹುಮತದೊಂದಿಗೆ ಮತ್ತೆ ಪ್ರಧಾನಿಯಾಗಿ ಆಯ್ಕೆಯಾದರು. 2 ಬಾರಿಯ ಯಶಸ್ವಿ ಪ್ರಧಾನಿಗೆ ಇದೀಗ ಮತ್ತೆ 3ನೇ ಬಾರಿಗೆ ದೇಶದ ಆಡಳಿತ ನಡೆಸುವ ಅವಕಾಶ ದೊರೆತಿದ್ದು, ಹೊಸ ದಾಖಲೆಯ ಸನ್ನಿಹಿತದಲ್ಲಿ ಅವರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next