Advertisement
ಬಾಯಿ ಕಿರಿದು ನಕ್ಕಾಗ ಮೂರು ನಾಲ್ಕು ಹಲ್ಲು ಕಂಡರೆ ಪುಣ್ಯ! ಅದನ್ನೆಲ್ಲ ಯೋಚಿಸುವವರ್ಯಾರು ಎಂಬಂತೆ ಬಾಯಿ ಬಿಟ್ಟು ನಗುತ್ತಾಳೆ. “ಅಪ್ಪಿ, ಯಾವಾಗ ಬಂದೀರಿ? ನಾಲ್ಕು ದಿನ ಆದ್ರೂ ಉಳ್ಕಂಲೆ? ಎಂತಾ ಸಾಲಿಯೇ ನಿಮ್ದು?’ ಎಂದು ಬೊಚ್ಚು ಬಾಯಿ ಅಗಲಿಸಿ ಮತ್ತೆ ತನ್ನ ಅಳಿದುಳಿದ ಹಲ್ಲುಗಳನ್ನು ಪ್ರದರ್ಶಿಸುತ್ತಾಳೆ. ಶಾಲೆ, ಕಾಲೇಜು ಎಂದು ಯಾವಾಗಲೂ ಹಾಸ್ಟೆಲಿನಲ್ಲಿದ್ದು ಅಪರೂಪಕ್ಕೊಮ್ಮೆ ಮನೆಗೆ ಹೋದರೆ ಅವಳ ಈ ಪ್ರಶ್ನೆ ಕಾದಿರುತ್ತದೆ.
Related Articles
Advertisement
ದಿನವೂ ಸಣ್ಣ ಸಣ್ಣ ವಿಷಯಕ್ಕೇ ಬೇಜಾರು ಮಾಡಿಕೊಳ್ಳುವ ನಾನೆಲ್ಲಿ? ಬಂದದ್ದನ್ನು ಅದೇ ರೀತಿ ಸ್ವೀಕರಿಸುವ ಅವಳೆಲ್ಲಿ? ಬದುಕಿನಲ್ಲಿ ಅತಿ ಘೋರವಾದ್ದೆಂದರೆ ಇದೇ ಇರಬಹುದು. ಆಕೆಗೆ ನನ್ನವರು ಎನ್ನುವವರು ಯಾರೂ ಇಲ್ಲ. ಜೀವನ ಪೂರ್ತಿ ಜೊತೆಯಲ್ಲಿರುತ್ತೇನೆಂದು ಬಂದಾತನ ಪಯಣ ಅರ್ಧಕ್ಕೇ ಮುಗಿದಿತ್ತು. ಹೆಣ್ಣು ಮಗಳು ಆಸ್ತಿಗಾಗಿ ಪೀಡಿಸಿದಳು ಎಂದು ತವರು ದೂರಾಯ್ತು.
ಕುಡುಕ ಗಂಡನ ಬಗ್ಗೆ ಚಿಂತಿಸದಿದ್ದರೂ ಹೆತ್ತ ಮಗನ ಹೊಟ್ಟೆಗೆ ಹಿಟ್ಟು ಬೇಯಿಸಬೇಕಿತ್ತಲ್ಲವೆ? ಹೆಣ್ಣು ಮಗಳು ಆಸ್ತಿಯಲ್ಲಿ ಪಾಲು ಕೇಳಿದ್ದು ತಪ್ಪೇ? ತನ್ನ ಮಗನ ಹಸಿವೆ ನೀಗಿಸಲು ಹುಟ್ಟಿ ಬೆಳೆದ ತವರೂರಿನ ಸಂಬಂಧ ಕಡಿದುಕೊಳ್ಳಲು ಸಿದ್ಧಳಾಗಿದ್ದಳೇ? ಮಾತೃ ಹೃದಯವೆಂದರೆ ಇದೇ! ಅವಳಿಗೆ ಗಂಡನ ಮೇಲಿನ ಪ್ರೀತಿ ಮರೆಯಾದದ್ದೇಕೆ? ಅವನು ಕುಡುಕನೆಂದೇ? ಕೆಲಸ ಮಾಡದ ಬೇಜವಾಬ್ದಾರಿಯೆಂದೇ ಅಥವಾ ಪ್ರೀತಿ-ಪ್ರೇಮ ಭಾವಗಳ ಬಗ್ಗೆ ಅವಳು ಯೋಚಿಸಿದ್ದಳೇ? ಕೆಲವೊಮ್ಮೆ ಇದೆಲ್ಲ ಪ್ರಶ್ನೆಗಳನ್ನು ಕೇಳಬೇಕೆನಿಸುತ್ತದೆ.
ಹಳತಾದ ಗಾಯಗಳ ಹುಡುಕಿ ಹುಡುಕಿ ಕೆರೆಯಬಾರದೆಂದು ಸುಮ್ಮನಾಗುತ್ತೇನೆ. “ಥೂ, ಕಪ್ ಕಪ್ ಆಪ್ಪತಿಗೆ ಎಂತ ಹಾಂಗೆಲ್ಲ ಮಾತಾಡ್ತೆ. ಬಾಯಿ ಹುಣ್ಣು ಡಾಕ್ಟ್ರಿಗೆ ತೋರ್ಸಿದ್ಯ?’ ಎಂದೆ. “ಹೌದೇ. ಹಂಬ್ಲೇ ಇಲ್ಯೆ ಹೇಳುಕೆ. ಅದೆಂತದೋ ಕ್ಯಾನ್ಸರ್ ಅಂಬ್ರಪ. ಒಂದು ತಿಂಗ್ಳೂ ಮಂಗಳೂರಿಗೆ ಹೂಬೇಕಂಬ್ರು. ಮುಂದನ್ ತಿಂಗ್ಳೂ ಹುಂಡಿಮನೆಗೆ ಅಡ್ಕೆ ಸೊಲುಕ್ ಹೋಬೇಕಿತ್ತು. ಡಾಕ್ಟ್ರು ಅಷ್ಟ್ರಲ್ಲಿ ಬಿಟ್ರ ಸಾಕೇ ನನ್ನ. ನಾಳೆ ಸಂತಿಗ್ ಪಪ್ಪಳೆಕಾಯಿ ತಕಂಡು ಹೋಬೇಕು.
ಬತ್ತೆ ಅಕಾ’ ಎನ್ನುತ್ತಾ ಹೊರಟೇ ಬಿಟ್ಟಳು ನಸುಗಪ್ಪಿನಲ್ಲಿಯೇ, ಪಪ್ಪಾಯಿ ಹಣ್ಣುಗಳನ್ನು ಕೊಯ್ದು ಭಾನುವಾರದ ಸಂತೆಗೆ ತೆಗೆದುಕೊಂಡು ಹೋಗುವ ತರಾತುರಿಯಲ್ಲಿ. ಅಷ್ಟು ಸುಲಭವಾಗಿ ಕ್ಯಾನ್ಸರ್ ಎಂದಳಲ್ಲವೇ. ಕ್ಯಾನ್ಸರ್‌ನ ಭೀಕರತೆ ಅವಳಿಗೆ ಗೊತ್ತಿಲ್ಲವೇ? ಯಾರೂ ಇಲ್ಲದ ಅನಾಥೆ, ಅತ್ತರೆ ಕೇಳುವವರ್ಯಾರು ಎಂಬ ಕಠೊರ ದುಃಖವೇ? ಆಶಾಜೀವಿ ಅವಳು, ವಿಧಿಚಿತ್ತವ ಹಲುಬದೇ ಪಾಲಿಸುವವಳೆ?….
* ವಾರಿಜಾ ಹೆಬ್ಟಾರ