Advertisement
ಆಗಂತುಕರಲ್ಲಿ ಪರ್ಷಿಯಾದ ಬಡಗಿ, ಅರ್ಚಕ, ಅಕ್ಕಸಾಲಿಗರು ಹೀಗೆ 16 ವಿವಿಧ ಕುಟುಂಬಗಳಿಂದ ತಂದ ಅಗ್ನಿ ಇತ್ತು. ಅಗ್ನಿ ಅವರ ಆರಾಧ್ಯದೇವ. ತಂಡದ ನಾಯಕ ಪರ್ಷಿಯಾದಲ್ಲಿಯಾದ ತೊಂದರೆಗಳನ್ನು ವಿವರಿಸಿ ವಾಸಿಸಲು ಅವಕಾಶ ಕೋರಿದ. ಧಾರ್ಮಿಕ ಸ್ವಾತಂತ್ರ್ಯ, ಜೀವನ ನಿರ್ವಹಣೆಗೆ ಜಮೀನು ಕೇಳಿದ. ಪುರೋಹಿತ “ನಾವು ಯಾವುದೇ ಮತಧರ್ಮಗಳಿಗೆ ಮತಾಂತರ ವಾಗುವುದಿಲ್ಲ, ಇತರರನ್ನು ತಮ್ಮ ಮತಕ್ಕೆ ಸೆಳೆಯಲು ಯತ್ನಿಸುವುದಿಲ್ಲ’ ಎಂದು ಭರವಸೆ ನೀಡಿದ. ಮೊದಲ ತಂಡ ಬಂದ ತಾಣವೇ ಸಂಜಾನ್. ಈ ಹೆಸರಿನ ಊರು ಈಗಿನ ತುರ್ಕಮೆನಿಸ್ಥಾನದಲ್ಲಿ ಇರುವುದರಿಂದ ಅಲ್ಲಿಂದ ಆಗಂತುಕರು ವಲಸೆ ಬಂದಿರಬಹುದು ಎಂಬ ವಾದವಿದೆ.
Related Articles
Advertisement
ಲೆಕ್ಕಕ್ಕಿಲ್ಲದ-ಲೆಕ್ಕವಿಡಲಾಗದ ಸಂಖ್ಯೆ!1971ರಲ್ಲಿ 91,266 ಪಾರಸಿಗರು ಇದ್ದರೆ, 1981ರಲ್ಲಿ 71,630ಕ್ಕೆ ಇಳಿಯಿತು (- ಶೇ. 21.52), 2001ರಲ್ಲಿ 69,601ಕ್ಕೆ, 2011ರಲ್ಲಿ 57,264ಕ್ಕೆ ತಲುಪಿತು (- ಶೇ.17.73). ಈಗ ಭಾರತದಲ್ಲಿ 50,000 ಇರಬಹುದು. ಜಗತ್ತಿನಲ್ಲಿ ಅಬ್ಬಬ್ಬವೆಂದರೆ 1.5 ಲಕ್ಷ ದಾಟದು. ಈ ಜನಸಂಖ್ಯೆಯನ್ನು ನ. 15ರಂದು ವಿಶ್ವಸಂಸ್ಥೆಯಿಂದ ಪ್ರಕಟವಾದ ಜಾಗತಿಕ ಜನಸಂಖ್ಯೆ 800 ಕೋಟಿ (ಶೇ.001), ಭಾರತದ ಜನಸಂಖ್ಯೆ 141 ಕೋಟಿಯೊಂದಿಗೆ (ಶೇ.003) ಹೋಲಿಸಿದರೆ ದುರ್ಬೀನು ಹಾಕಿ ನೋಡಬೇಕಾಗ ಬಹುದು. ಈ ಸ್ಥಿತಿಯಲ್ಲಿಯೂ ಆಗ ಕೊಟ್ಟ ಮಾತನ್ನು ಸಮುದಾಯ ಉಳಿಸಿಕೊಂಡಿದೆ. ಸಂತೃಪ್ತಿ ಎನ್ನುವುದು ವ್ಯಕ್ತಿಗತ, ಇಲ್ಲಿ ಸಮುದಾಯಕ್ಕೇ ಸಂತೃಪ್ತಿ. ಒಂದೆಡೆ ನಾನಾ ಮಾರ್ಗಗಳಿಂದ ಜನ ಸಂಖ್ಯೆಗಳನ್ನು ಏರಿಸಿಕೊಳ್ಳುವವರು, ಜನಸಂಖ್ಯೆ ಕುಸಿತವಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸುವವರ ನಡುವೆ ಈ ಜನಾಂಗದ ಸಂಖ್ಯೆ ಯಾವ ಲೆಕ್ಕಕ್ಕೆ ಇಲ್ಲದಿದ್ದರೂ ಜನ-ಧನಸಂಖ್ಯಾಬಲ
ದವರೆಲ್ಲ ಒಂದಲ್ಲ ಒಂದು ರೀತಿಯಲ್ಲಿ ಇವರ ಕೊಡುಗೆಗಳ ಫಲಾನುಭವಿಗಳು ಎಂಬ ಅಹಮಿಕೆಯೂ ಅವರಿಗಿಲ್ಲ. ಎಂತೆಂಥ ಮಹಾನುಭಾವರು…!
ದಾದಾಬಾಯಿ ನವರೋಜಿ, ಮೇಡಮ್ ಕಾಮಾ (ಸ್ವಾತಂತ್ರ್ಯ ಹೋರಾಟಗಾರರು), ಸರ್ ದೊರಬ್‌ಜಿ ಟಾಟಾ (ಟಾಟಾ ಸಂಸ್ಥೆಯ ಸ್ಥಾಪಕ), ಜೆಮ್‌ಶೆಡ್‌ಜಿ ಟಾಟಾ (ಟಾಟಾ ಸಮೂಹದ ಸ್ಥಾಪಕ), ರತನ್ ಟಾಟಾ (ಟಾಟಾ ಸಮೂಹದ ಮಾಜಿ ಅಧ್ಯಕ್ಷ, ದತ್ತಿ ಸಂಸ್ಥೆಗಳ ಅಧ್ಯಕ್ಷ), ನುಸ್ಲಿ ವಾಡಿಯಾ (ವಾಡಿಯ ಸಮೂಹದ ಅಧ್ಯಕ್ಷರಾಗಿ ದ್ದರು), ಬಿ.ಪಿ.ವಾಡಿಯಾ (ಕಾರ್ಮಿಕ ಸಂಘಟನೆ ಗಳ ಪ್ರವರ್ತಕ), ಫಿರೋಜ್‌ಶಾ (ರಾಷ್ಟ್ರೀಯ ಕಾಂಗ್ರೆಸ್ ಮಾಜಿ ಅಧ್ಯಕ್ಷ, ಸಹ ಸಂಸ್ಥಾಪಕ), ಫಿರೋಜ್ ಗಾಂಧಿ (ಇಂದಿರಾ ಗಾಂಧಿಯವರ ಪತಿ), ಜೆಆರ್‌ಡಿ ಟಾಟಾ (ಏರ್ ಇಂಡಿಯಾ ಸ್ಥಾಪಕ), ಸೈರಸ್ ಪೂನಾವಾಲಾ (ಸೈರಸ್ ಪೂನಾವಾಲಾ ಸಮೂಹದ ಅಧ್ಯಕ್ಷ), ಹೋಮಿ ಜಹಾಂಗೀರ್ ಭಾಭಾ (ಅಣುಶಕ್ತಿ ಆಯೋಗದ ಪ್ರಥಮ ಅಧ್ಯಕ್ಷ), ಅರ್ಡೆಶಿರ್ ಗೋದ್ರೆಜ್ (ಗೋದ್ರೆಜ್ ಸಮೂಹದ ಸ್ಥಾಪಕ), ಅರುಣ ಇರಾನಿ (ನಟಿ, ನೃತ್ಯಪಟು), ದಿನ್ಶಾ ಪೆಟಿಟ್ (ಜವುಳಿ ಕಾರ್ಖಾನೆಗಳ ಸ್ಥಾಪಕ), ಡಯಾನ ಫ್ರಮ್ ಎದುಲ್ಜಿ (ಪ್ರಥಮ ಮಹಿಳಾ ಕ್ರಿಕೆಟ್ ತಂಡದ ನಾಯಕಿ), ಫಾಲಿ ಎಸ್. ನಾರಿಮನ್, ರೋಹಿಂಗ್ಟನ್ ನಾರಿಮನ್, ಎಸ್.ಎಚ್. ಕಪಾಡಿಯ, ನಾನೀ ಪಾಲ್ಕಿವಾಲಾ, ಸೋಲಿ ಸೊರಾಬ್ಜಿ (ನ್ಯಾಯವೇತ್ತರು), ಪಾಲಿ ಉಮ್ರಿಗಾರ್, ಫಾರೂಕ್ ಮಾಣಿಕ್‌ಶಾ, ನಾರಿಮನ್ ಕಂಟ್ರಾಕ್ಟರ್ (ಕ್ರಿಕೆಟಿಗರು), ಹೋಮಿ ವ್ಯಾರಾವಾಲಾ (ಭಾರತದ ಮೊದಲ ಮಹಿಳಾ ಛಾಯಾಚಿತ್ರ ಪತ್ರಕರ್ತೆ), ಸೊರಾಬ್ಜಿ ನುಸರ್‌ವಂಜಿ ಪೊಖನ್‌ವಾಲಾ (ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯ ಸ್ಥಾಪಕ), ಮಾಣಿಕ್ ಶಾ (ಸೇನಾಪಡೆ ಮಾಜಿ ಮುಖ್ಯಸ್ಥ), ಫಾಲಿ ಹೋಮಿ ಮೇಜರ್ (ವಾಯುಪಡೆ ಮಾಜಿ ಮುಖ್ಯಸ್ಥ), ಜುಬಿನ್ ಇರಾನಿ (ಕೇಂದ್ರ ಸಚಿವೆ ಸ್ಮತಿ ಇರಾನಿ ಪತಿ), ಫ್ರೆಡಿ ಮಕ್ಯುìರಿ (ಬ್ರಿಟಿಷ್ ಹಾಡುಗಾರ) ಮೊದಲಾದ ಪಾರಸಿ ಜನಾಂಗದವರು ಕೊಟ್ಟ ಕೊಡುಗೆಗಳನ್ನು ಲೆಕ್ಕ ಇಡುವುದು ಹೇಗೆ? ಮಟಪಾಡಿ ಕುಮಾರಸ್ವಾಮಿ