Advertisement

ಆ ಹತ್ತು ನಿಮಿಷವೇ ದೇವರು

11:21 PM Jan 19, 2020 | Sriram |

ಊರಿನಲ್ಲಿದ್ದ ಒಬ್ಬ ತನ್ನ ಬದುಕನ್ನು ಹೇಗೆ ಬೇಕೋ ಹಾಗೆ ಕಳೆಯುತ್ತಿದ್ದ. ಯಾವುದೂ ವ್ಯವಸ್ಥಿತವಾಗಿರಲಿಲ್ಲ. ಸಮಯವಂತೂ ಲೆಕ್ಕವೇ ಇರಲಿಲ್ಲ.

Advertisement

ಹೀಗೆ ಒಂದು ದಿನ ಬೆಟ್ಟದ ಬುಡದಲ್ಲಿ ತಿರುಗಾಡುತ್ತಿದ್ದಾಗ ಒಬ್ಬ ವೃದ್ಧ ಎದುರು ಸಿಕ್ಕ. ಆ ಅಜ್ಜನನ್ನು ಮಾತನಾಡಿಸುತ್ತಾ, “ಏನಜ್ಜ ಇಲ್ಲಿ ಎಲ್ಲಿಗೆ ಹೋಗಿದ್ದಿರಿ?’ ಎಂದು ಕೇಳಿದ. ಅದಕ್ಕೆ ಅಜ್ಜ, ದೇವರನ್ನು ಕಾಣಲು ಎಂದ. ಇದು ವಿಚಿತ್ರವೆನಿಸಿತು. ದೇವರು ಸಿಕ್ಕನೇ ಎಂದು ಚೇಷ್ಟೆ ಮಾಡಿದ ಆತ. ಅದಕ್ಕೆ ಅಜ್ಜ, ಇವತ್ತು ಸಿಕ್ಕಿದ್ದಾನೆ. ನಾಳೆಯೂ ಇದೇ ಹೊತ್ತಿಗೆ ನೀನು ಬಂದರೆ ತೋರಿಸುವೆ ಎಂದು ಹೊರಟ.

ಮಾರನೆಯ ದಿನ ಇವನು ಎದ್ದು ಎಲ್ಲ ಕೆಲಸ ಮುಗಿಸಿಕೊಂಡು ಬರುವಾಗ ಅಜ್ಜ ಹೇಳಿದ್ದ ಸಮಯ ಮೀರಿತ್ತು. ಅಜ್ಜ ವಾಪಸಾಗುತ್ತಿದ್ದನ್ನು ಕಂಡು, ಎಲ್ಲಿದ್ದಾನೆ ದೇವರು ಎಂದು ಕೇಳಿದ. ಅದಕ್ಕೆ ಅಜ್ಜ ನಾನು ಆಗಲೇ ಬರಲು ಹೇಳಿದ್ದೇನಲ್ಲವೇ? ಎಂದು ಕೇಳಿದ. “ನಾನು ಕೇವಲ ಹತ್ತು ನಿಮಿಷ ತಡವಾಯಿತಷ್ಟೇ’ ಎಂದು ಸಮಜಾಯಿಷಿ ನೀಡಲು ಪ್ರಯತ್ನಿಸಿದ. ಅದಕ್ಕೆ ಅಜ್ಜ ಹೇಳಿದ- “ಆ ಹತ್ತು ನಿಮಿಷವೆಂದರೆ ಆ ಕಾಲವೇ ದೇವರು’. ಇಂದಿಗೆ ಅವನ ದರ್ಶನ ಮುಗಿಯಿತು. ನಾಳೆ ನೋಡೋಣ ಎಂದು ಹೊರಟ.

- ಟೈಮ್‌ ಸ್ವಾಮಿ

Advertisement

Udayavani is now on Telegram. Click here to join our channel and stay updated with the latest news.

Next