Advertisement

UV Fusion: ಮತ್ತೆ ಮತ್ತೆ ನೆನಪಾಗುವ ಆ ಒಂದು ಘಟನೆ

03:11 PM Jan 23, 2024 | Team Udayavani |

ಗೆಳತಿ ಎಂದರೆ ಅಮ್ಮನಂತೆ, ಎಲ್ಲ ಸಂದರ್ಭದಲ್ಲೂ ನಮ್ಮ ಜತೆಗಿರುವರು. ಹೌದು ನನಗೂ ಇಂತಹ ಒಬ್ಬಳು ಗೆಳತಿ ಇದ್ದಾಳೆ, ನಾನು ಅವಳಿಗಿಟ್ಟ ಹೆಸರು ಬುರ್ಲಿ. ಬುರ್ಲಿ ನನ್ನ ಮೆಚ್ಚಿನ ಹಾಗೂ ಪ್ರಾಣ ಸ್ನೇಹಿತೆ. ಯಾವತ್ತೂ, ಯಾವುದಕ್ಕೂ ಇಲ್ಲ ಎಂದು ಹೇಳಿದವಲಲ್ಲ ಅವಳು. ಎಲ್ಲದಕ್ಕೂ ಚೈತು ಓಕೆ. ಬಿದ್ದಾಗ ಎದ್ದಾಗ, ಕಷ್ಟ, ಸುಖ ಎಲ್ಲದರಲ್ಲೂ ನನ್ನ ಜತೆ ಇರುವವಳು.

Advertisement

ಕಾಲೇಜು ದಿನಗಳಲ್ಲಿ ನಾವು ಮಾಡಿದ ತರ್ಲೆ ಒಂದೆರಡಲ್ಲ. ಈ ಎಲ್ಲ ಸಿಹಿ ನೆನಪುಗಳಲ್ಲಿ ಆ ಒಂದು ದಿನ ನಡೆದ ಘಟನೆಯನ್ನು ಮಾತ್ರ ನಾನು ಯಾವತ್ತೂ ಮರೆಯಲು ಸಾಧ್ಯವಿಲ್ಲ. ಇದು ನಿಮಗೆ ಬಾಲಿಶ ಅನಿಸಿದರೂ ನನಗೆ ಇದು ಅದ್ಭುತವೆ.

ಒಂದು ದಿನ ಭಾರೀ ಮಳೆ ಬರುವ ಮುನ್ಸೂಚನೆ, ಕಾರ್ಮೋಡ, ಗಾಳಿ. ಎಂದಿನದಂತೆ ಆ ದಿನವೂ ಕಾಲೇಜಿಗೆ ಹೊರಟೆ. ಅಲ್ಲಿಂದ ಶುರುವಾಯಿತು ನೋಡಿ ಅಮ್ಮನ ಧ್ವನಿ, ಹೋಗುವಾಗ ಛತ್ರಿ ತೆಗೆದುಕೊಂಡು ಹೋಗು ಎಂದು. ಆದರೆ ಅವರು ಎಷ್ಟು ನೆನಪಿಸಿದರೂ ನಾನು  ಛತ್ರಿಯನ್ನು ಮರೆತೆ. ಬಸ್‌ ಹತ್ತಿದಾಗ ಬುರ್ಲಿಗೊಂದು ಕರೆ ಮಾಡಿದೆ. ನಾನು ಬಸ್‌ ಹತ್ತಿದೆ ಎಂದು ಹೇಳಿದೆ.

ಅದಕ್ಕೆ ಆಕೆ ಚೈತು ಛತ್ರಿ ಇದೆಯಲ್ಲ ಎಂದು ಪ್ರಶ್ನಿಸಿದಳು. ಅವಳಿಗೆ ಈ ವಿಚಾರದಲ್ಲಿ ನಾನು ತರ್ಲೆ ಎಂದು ಗೊತ್ತು. ಮಳೆಯಲ್ಲಿ ನೆನೆಯುವುದು ಎಂದರೆ ನನಗೆ ತುಂಬಾ ಇಷ್ಟ. ಅದು ಅವಳಿಗೂ ಗೊತ್ತು. ಇಲ್ಲ ಬುರ್ಲಿ ನಾನು ಮರೆತು ಬಂದೆ ಎಂದು ಹೇಳಿದೆ. ನಿಲ್ಲು ನಾನು ಕೊಡುವೆ ಎಂದು ಅವಳು ಬಸ್‌ ನಿಲ್ದಾಣಕ್ಕೆ ಬಂದು ಪ್ರೀತಿಯಿಂದ ಛತ್ರಿ ಕೊಟ್ಟು ಹೋದಳು. ಓಕೆ ಬುರ್ಲಿ ಬಾಯ್‌ ಎಂದು ಛತ್ರಿ ತೆಗೆದುಕೊಂಡು ಮಳೆಯ ವಾತಾವರಣಕ್ಕೆ ಬೆಚ್ಚಗೆ ಹಾಡು ಕೇಳುತ್ತ ಕಾಲೇಜಿನತ್ತ ಪ್ರಯಾಣ ಬೆಳೆಸಿದೆ.

ಇದರ ಮಧ್ಯೆ ನನ್ನ ಬುರ್ಲಿ ಕೊಟ್ಟ ಛತ್ರಿಯ ನೆನಪು, ಏಕೆಂದರೆ ಅದು ಅವಳು ಪ್ರೀತಿಯಿಂದ ನೀಡಿದ ವಸ್ತು, ಬುರ್ಲಿ ಏನೇ ನೀಡದರೂ ಅದು ನನಗೆ ಅತ್ಯಮೂಲ್ಯವೇ ಸರಿ. ಆ ಛತ್ರಿಯನ್ನು ನೋಡಿದಾಗಲೆಲ್ಲ ಬುರ್ಲಿ ಮತ್ತು ನಾನು ಮಾಡಿದ ತರ್ಲೆ, ಕಿತಾಪತಿ, ಲಾಂಗ್‌ ಡ್ರೈವ್‌ ಎಲ್ಲವೂ ನೆನಪಿಗೆ ಬಂತು.

Advertisement

ಆದರೆ ಅಂದು ಯಾಕೋ ಗೊತ್ತಿಲ್ಲ ಎಲ್ಲವನ್ನು ನೆನಪಿಡುವ ನಡುವೆ ಕಾಲೇಜಿಗೆ ತಡವಾಯಿತು ಎಂಬ ಗಡಿಬಿಡಿ. ಇನ್ನೇನು ಕಾಲೇಜು ಬಂತು ಎಂದು ಅತುರದಲ್ಲಿ ಇಳಿದು ಕ್ಲಾಸ್‌ ರೂಮ್‌ ನೊಳಗೆ ಬಂದೆ. ಒಮ್ಮೆ ಹಠತ್‌ ನನಗೆ ಬುರ್ಲಿ ಕೊಟ್ಟ ಛತ್ರಿಯ ನೆನಪಾಯಿತು. ಅಯ್ಯೋ ದೇವಾ ಬುರ್ಲಿ ಛತ್ರಿ ಬಸ್‌ನÇÉೇ ಬಾಕಿಯಾಗಿರುವುದು ಗೋಚರವಾಗಿ ಕ್ಲಾಸ್‌ ತಪ್ಪಿದರೂ ಪರವಾಗಿಲ್ಲ ಬುರ್ಲಿ ಛತ್ರಿ ಸಿಗಲೇಬೇಕು ಎಂದು ಬಸ್‌ ನಿಲ್ದಾಣಕ್ಕೆ ಓಡಿದೆ.

ಕೊನೆಗೂ ಬಸ್‌ ನಿಲ್ದಾಣಕ್ಕೆ ಬಂದರೆ ನಾನು ಬಂದ ಬಸ್‌ ಅಲ್ಲಿರಲಿಲ್ಲ. ತುಂಬಾ ಎಂದರೆ ತುಂಬಾ ದುಃಖ ಕಾಡಿತ್ತು. ಅಯ್ಯೋ ನನ್ನ ಬುರ್ಲಿ ಕೊಟ್ಟ ಛತ್ರಿ ಹೋಯಿತು ಎಂದು ಅಳುಮುಂಜಿ ಮುಖ ಮಾಡಿ ನಿಂತಿದ್ದೆ. ಇದನ್ನು ಗಮನಿಸಿದ ಬಸ್‌ ಏಜೆಂಟ್‌, ಯಾಕೆ ಏನಾಯಿತು ಎಂದು ಕೇಳಿದರು. ನಾನು ನಡೆದ ಘಟನೆಯನ್ನು ಅವರಿಗೆ ವಿವರಿಸಿದೆ. ಅದಕ್ಕೆ ಬಸ್‌ ಏಜೆಂಟ್‌ ಬಸ್‌ ನಂಬರ್‌ ಗೊತ್ತಾ? ಎಂದು ಕೇಳಿದರು. ನಾನು ಗೊತ್ತಿಲ್ಲ ಸರ್‌ ಎಂದೆ, ಅಯ್ಯೋ ಅಮ್ಮ ಇನ್ನು ನಿಮ್ಮ ಛತ್ರಿ ಸಿಗುವುದು ಕಷ್ಟ ಎಂದರು. ಮತ್ತದೇ ಸಂಕಟ, ಅದರೂ ನನಗೆ ಬುರ್ಲಿಯ ಛತ್ರಿ ಸಿಗಲೇಬೇಕು ಎಂಬ ಹಠ.

ಕೊನೆಗೆ ಪೊಲೀಸ್‌ ಕಂಪ್ಲೇಂಟ್‌ ನೀಡಿದೆ. ಅವರಿಗೂ ನನ್ನ ಮುಗªತೆ ಅರ್ಥವಾಯಿತೆನೋ, ಆಯಿತು ಹುಡುಕುವ ಎಂದು ಹೇಳಿ ಕಳುಹಿಸಿದರು. ಹಾಗೂ ಹೀಗೂ ಕೊನೆಯಲ್ಲಿ ಬಸ್‌ ಡಿಪೋದಲ್ಲಿ ನನ್ನ ಬುರ್ಲಿ ನೀಡಿದ ಕೊಡೆ ನನಿಗೆ ಸಿಕ್ಕಿತು. ಹೇಳಿಕೊಳ್ಳುಲು ಸಾಧ್ಯವಿಲ್ಲಷ್ಟು ಖುಷಿಯಾಗಿತ್ತು. ಈ ಘಟನೆ ನನಗೆ ಪದೇ ಪದೇ ಬುರ್ಲಿಯ ಸ್ನೇಹ ಹಾಗೂ ಸಹಾಯ ನೆನಪಿಸುತ್ತದೆ.

-ಚೈತನ್ಯಾ ಕೊಟ್ಟಾರಿ

ಎಸ್‌.ಡಿ.ಎಂ. ಕಾಲೇಜು ಉಜಿರೆ

Advertisement

Udayavani is now on Telegram. Click here to join our channel and stay updated with the latest news.

Next