Advertisement

ಮತದಾರರ ಸಂಖ್ಯೆಗೆ ಅನುಗುಣವಾಗಿ ಕ್ಷೇತ್ರ ವಿಂಗಡಿಸಿಲ್ಲ

02:38 PM Apr 11, 2021 | Team Udayavani |

ದೊಡ್ಡಬಳ್ಳಾಪುರ: ನಗರಸಭೆ ವ್ಯಾಪ್ತಿಯಲ್ಲಿನ ಮತದಾರರ ಅಂತಿಮ ಪಟ್ಟಿ ಪ್ರಕಟಣೆ ಕುರಿತಂತೆ ಚರ್ಚಿಸಲು ನಗರಸಭೆ ಕಚೇರಿಯಲ್ಲಿ ತಹಶೀಲ್ದಾರ್‌ಟಿ.ಎಸ್‌.ಶಿವರಾಜ್‌ ಅಧ್ಯಕ್ಷತೆಯಲ್ಲಿ ವಿವಿಧರಾಜಕೀಯ ಪಕ್ಷಗಳ ಮುಖಂಡರ ಸಭೆ ನಡೆಯಿತು.

Advertisement

ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ವಿವಿಧ ರಾಜಕೀಯ ಮುಖಂಡರು ಹಾಗೂ ಮತದಾರರು,ಮತದಾರರ ಸಂಖ್ಯೆಗೆ ಅನುಗುಣವಾಗಿ ಮತಕ್ಷೇತ್ರಗಳು ವಿಂಗಡನೆಯಾಗಿಲ್ಲ. ಕೆಲವು ವಾರ್ಡ್ಗಳಲ್ಲಿ 1200 ಮತದಾರರಿದ್ದರೆ, ಇನ್ನು ಕೆಲವು ವಾರ್ಡ್‌ಗಳಲ್ಲಿ 3000 ಮತದಾರರಿದ್ದಾರೆ. ವಾರ್ಡ್ ಗಳ ಗಡಿ ಸಹ ಸರಿಯಾಗಿ ಗುರುತಿಸಿಲ್ಲ. ಕೆಲವು ವಾರ್ಡ್‌ಗಳ ಮತದಾರರ ಹೆಸರು ತಮ್ಮ ವಾಸ ಸ್ಥಳದಲ್ಲಿರದೇ ಬೇರೆ ವಾರ್ಡ್‌ಗಳಲ್ಲಿ ಸೇರ್ಪಡೆಯಾಗಿವೆ ಎಂದು ಹೇಳಿದರು.

ತಪ್ಪು ಮಾಹಿತಿ ದಾಖಲು: ಮೃತಪಟ್ಟವರ ಹೆಸರು ಇನ್ನೂ ಮತದಾರರ ಪಟ್ಟಿಯಲ್ಲಿದ್ದು, ಅವುಗಳನ್ನುತೆಗೆಯಬೇಕು. ಚುನಾವಣೆ ಹೊತ್ತಿಗೆ 18 ವರ್ಷ ತುಂಬಿದ ಹೊಸ ಮತದಾರರನ್ನು ಸೇರ್ಪಡೆಮಾಡಬೇಕು. ಮತದಾರರ ಪಟ್ಟಿಯಲ್ಲಿನಮತದಾರರ ಭಾವಚಿತ್ರಗಳು ಸ್ಪಷ್ಟವಾಗಿಕಾಣುವಂತಿರಬೇಕು. ಗುಣಮಟ್ಟದ ಮುದ್ರಣದಿಂದ ಪಟ್ಟಿ ತಯಾರಿಸಬೇಕು. ಮತಗಟ್ಟೆಅಧಿಕಾರಿಗಳು ಮತದಾರರಿಗೆ ಸಂಬಂಧಪಟ್ಟಂತೆತಪ್ಪು ಮಾಹಿತಿ ದಾಖಲಿಸುತ್ತಿದ್ದಾರೆ. ಮತದಾರರ ಮಾಹಿತಿ ಕುರಿತಂತೆ ತಿಳಿಸಿದರೂ ಗಮನ ನೀಡುತ್ತಿಲ್ಲ ಎಂದು ದೂರಿದರು.

ನಗರಸಭೆಯಲ್ಲೇ ಉಳಿಸಿ: ನಗರಸಭೆ ವ್ಯಾಪ್ತಿಯ ಕರೇನಹಳ್ಳಿ ಭಾಗದ ಕೆಲ ಮತದಾರರು ನಮ್ಮನ್ನುಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿಸಿದೆ. ನಗರಸಭೆಯ ಮತದಾರರ ಪಟ್ಟಿಯÇÉೇ ಹೆಸರನ್ನುಉಳಿಸಬೇಕು ಎಂದು ಒತ್ತಾಯಿಸಿದರು. ಮತದಾ ರರ ಪಟ್ಟಿ ಸ್ಪಷ್ಟವಾಗದ ಹೊರತು ತರಾತುರಿಯಲ್ಲಿಚುನಾವಣೆ ನಡೆಸುವುದು ಬೇಡ ಎನ್ನುವ ಅಭಿಪ್ರಾಯಗಳು ಸಭೆಯಲ್ಲಿ ಕೇಳಿ ಬಂದವು.

ಗಡಿ ವಿಂಗಡಣೆ ಸಾಧ್ಯವಿಲ್ಲ: ಈ ಕುರಿತು ಪ್ರತಿಕ್ರಿಯಿಸಿದ ತಹಶೀಲ್ದಾರ್‌ ಟಿ.ಎಸ್‌.ಶಿವರಾಜ್‌,ಮತದಾರರ ಕರಡು ಪಟ್ಟಿ ಪರಿಷ್ಕರಣೆ ಕುರಿತಂತೆವಿವಿಧ ರಾಜಕೀಯ ಮುಖಂಡರಿಂದ ಸಭೆಕರೆಯಲಾಗಿದೆ. ಸಭೆಯಲ್ಲಿ ಮತದಾರರ ಪಟ್ಟಿಯಗೊಂದಲಗಳ ಕುರಿತು ಸರಿಪಡಿಸುವಂತೆ ಮನವಿಸಲ್ಲಿಸಲಾಗಿದೆ. ಈಗಾಗಲೇ ವಾರ್ಡ್‌ಗಳ ಗಡಿ ಹಾಗೂ ಮೀಸಲಾಗಿ ಕುರಿತಂತೆ ಆಕ್ಷೇಪಣೆ ಪುರಸ್ಕರಿಸಿ ಅಂತಿಮಗೊಳಿಸಿರುವುದರಿಂದ, ಗಡಿ ವಿಂಗಡನೆ ಸಾಧ್ಯವಿಲ್ಲ. ಕಳೆದ ವಿಧಾನಸಭಾ ಚುನಾವಣೆಯ ಮತದಾರರ ಪಟ್ಟಿ ಹಾಗೂ ಜ.18, 2021ರ ದಿನಾಂಕಕ್ಕೆ ಸೇರ್ಪಡೆಯಾದಮತದಾರರನ್ನು ಆಧರಿಸಿ ಅಂತಿಮ ಮತಪಟ್ಟಿ ತಯಾರಿಸಲಾಗಿದೆ ಎಂದು ವಿವರಿಸಿದರು.

Advertisement

ಮತದಾರರ ಪಟ್ಟಿಯ ಮುದ್ರಣ ಗುಣಮಟ್ಟದ ಕುರಿತು ಸಂಬಂಧಪಟ್ಟವರ ಗಮನಕ್ಕೆತರಲಾಗುವುದು. ಮತಗಟ್ಟೆಗಳ ಕುರಿತಂತೆ ಇರುವದೂರುಗಳು ಪರಿಗಣಿಸಲು ಅರ್ಹವಾಗಿದ್ದರೆ, ಕಾನೂನು ವ್ಯಾಪ್ತಿಯಲ್ಲಿ ಮತದಾರರ ಪಟ್ಟಿಯಲ್ಲಿನಬದಲಾವಣೆಗಳ ಕುರಿತು ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.

ನಗರಸಭೆ ರಮೇಶ್‌ ಎಸ್‌.ಸುಣಗಾರ್‌, ಅಧಿಕಾರಿಗಳು, ರಾಜಕೀಯ ಪಕ್ಷಗಳ ಮುಖಂಡರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next