Advertisement

ತಾರಾಪುರ ಜನರಿಗೆ ತೋರದ ಕಾಳಜಿ

03:11 PM Aug 27, 2018 | |

ಆಲಮೇಲ: ಭೀಮಾ ಏತ ನೀರಾವರಿ ಹಿನ್ನೀರಿನಲ್ಲಿ ಮುಳುಗಡೆಯಾದ ತಾರಾಪುರ ಗ್ರಾಮದ ಜನರ ಗೋಳು ಹೇಳತೀರದಂತಾಗಿದೆ. ನೆರೆ ಭೀತಿ ಎದುರಿಸುತ್ತಿದ್ದ ತಾರಾಪುರ ಗ್ರಾಮವನ್ನು 10 ವರ್ಷವಾದರೂ ಇನ್ನೂ ಸ್ಥಳಾಂತರಿಸಿಲ್ಲ. ಇಲ್ಲಿನ ಜನ ಪ್ರತಿ ವರ್ಷ ಪ್ರವಾಹದ ಭೀತಿಯಲ್ಲೇ ಜೀವನ ನಡೆಸುತ್ತಿದ್ದಾರೆ.

Advertisement

ವಿಜಯಪುರ ಜಿಲ್ಲೆಯಲ್ಲಿ ಈ ಬಾರಿ ಮಳೆ ಇಲ್ಲದೆ ರೈತರು ಕಂಗಾಲಾಗಿದ್ದು ಕಳೆದ ಒಂದು ತಿಂಗಳಿಂದ ಭೀಮಾ ನದಿ ಸಂಪೂರ್ಣ ಬತ್ತಿ ಹೋಗಿತ್ತು. ನದಿ ನೀರು ಅವಲಂಬಿತ ರೈತರು ಕಂಗಾಲಾಗಿದ್ದರು. ಸದ್ಯ ಮಹಾರಾಷ್ಟ್ರದಲ್ಲಿ ಅಪಾರ ಪ್ರಮಾಣದ ಮಳೆಯಾಗುತ್ತಿದ್ದು ಮಹಾರಾಷ್ಟ್ರದ ಉಜನಿ ಜಲಾಶಯದಿಂದ ಏಕಾ ಏಕಿ ನೀರು ಬಿಟ್ಟಿದ್ದರಿಂದ ಭೀಮಾ ನದಿ ಸಂಪೂರ್ಣ ತುಂಬಿ ಹರಿಯುತ್ತಿದೆ. ನದಿ ದಡದ ಗ್ರಾಮಗಳು, ಜಮಿನುಗಳು ನೀರಲ್ಲಿ ಮುಳಗಿವೆ.

ಕಲಬುರಗಿ ಜಿಲ್ಲೆಗೆ ನೀರಾವರಿ ಕಲ್ಪಿಸಲು ಭೀಮಾ ಏತ ನೀರಾವರಿ ಯೋಜನೆಗಾಗಿ ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ಹತ್ತಿರ ಬ್ಯಾರೇಜ್‌ ನಿರ್ಮಿಸಲಾಗಿದೆ. ಆ ಹಿನ್ನೀರಿನಲ್ಲಿ ಮುಳಗಡೆಗೊಂಡ ಗ್ರಾಮಗಳು ಹಾಗೂ ಜಮೀನುಗಳಿಗೆ ಸರ್ಕಾರ ಪರಿಹಾರ ನೀಡಿದೆ. ಮುಳುಗಡೆ ಗ್ರಾಮಗಳನ್ನು ಬೇರೆಡೆ ಸ್ಥಳಾಂತರಿಸಿ
ಜಾಗ ನೀಡಿ ಮನೆಗಳ ನಿರ್ಮಾಣಕ್ಕೆ ಪರಿಹಾರ ಸಹ ನೀಡಿದೆ.

ಅದೆ ರೀತಿ ಸಿಂದಗಿ ತಾಲೂಕಿನ ತಾರಾಪುರ ಗ್ರಾಮ ಸ್ಥಳಾಂತರಿಸಿ ಬೇರೆಡೆ ಜಾಗ ಖರೀದಿಸಿ ಮೂಲಭೂತ ವ್ಯವಸ್ಥೆ ಕಲ್ಪಿಸಲಾಗಿದೆ. ಆದರೆ ಅಧಿಕಾರಿಗಳು ಪ್ಲಾಟ್‌ ವಿತರಣೆಯಲ್ಲಿ ತಾರತಮ್ಯ ಮಾಡಿದ್ದರಿಂದ ಇನ್ನು ಸ್ಥಳಾಂತರಗೊಂಡಿಲ್ಲ. ಎಲ್ಲ ಕುಟುಂಬಗಳಿಗೆ ಸರಿಯಾಗಿ ಪ್ಲಾಟ್‌ ಹಂಚಿಕೆ ಮಾಡಿದರೆ ಮಾತ್ರ ಈ ಮುಳುಗಡೆ ಗ್ರಾಮ ಬಿಟ್ಟು ಹೊಸ ಗ್ರಾಮಕ್ಕೆ
ಹೋಗುತ್ತೇವೆ ಎನ್ನುತ್ತಾರೆ ಗ್ರಾಮಸ್ಥರು. 

10 ವರ್ಷ ಕಳೆದರೂ ಸಹ ಯಾವುದೇ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಸಮಸ್ಯೆ ಬಗೆಹರಿಸಿ ಗ್ರಾಮಸ್ಥರನ್ನು ಸ್ಥಳಾಂತರಿಸಲು ಪ್ರಯತ್ನಿಸಿಲ್ಲ. ಸದ್ಯ ಸಿಂದಗಿ ಕ್ಷೇತ್ರದ ಶಾಸಕರು ರಾಜ್ಯ ತೋಟಗಾರಿಗೆ ಸಚಿವರಾಗಿದ್ದು ಜಿತೆಗೆ
ಜಿಲ್ಲೆಯ ಉಸ್ತುವಾರಿ ಹೊಂದಿದ್ದಾರೆ. ಇವರಾದರು ಸಮಸ್ಯೆ ಬಗೆಹರಿಸುತ್ತಾರೆ ಎಂಬ ನಿರೀಕ್ಷೆಯಲ್ಲಿದ್ದಾರೆ ಗ್ರಾಮಸ್ಥರು.

Advertisement

10 ವರ್ಷವಾದರೂ ಗ್ರಾಮ ಇನ್ನೂ ಸ್ಥಳಾಂತರವಾಗಿಲ್ಲ. ಮುಳಗಡೆ ಪ್ರದೇಶದಲ್ಲೆ ವಾಸ ಮಾಡುತ್ತಿದ್ದು ಪ್ರತಿ ವರ್ಷ ನೆರೆ
ಸಂದರ್ಭದಲ್ಲಿ ಅಧಿಕಾರಿಗಳು, ಜನಪ್ರತಿನಿಧಿಗಳು ಭೇಟಿ ನೀಡಿ ಭರವಸೆ ನೀಡುತ್ತಾರೆ ವಿನಃ ಸಮಸ್ಯೆ ಬಗೆಹರಿಸಿ
ಗ್ರಾಮಸ್ಥರನ್ನು ಸ್ಥಳಾಂತರಿಸುತ್ತಿಲ್ಲ. 
ಖಾಜಪ್ಪ ವಡ್ಡರ, ಸಂತ್ರಸ್ತ

„ಅವಧೂತ ಬಂಡಗಾರ

Advertisement

Udayavani is now on Telegram. Click here to join our channel and stay updated with the latest news.

Next