Advertisement
ಪಟ್ಟಣದ ಅಕ್ಕ ನಾಗಲಾಂಬಿಕಾ ಗದ್ದುಗೆ ಆವರಣದಲ್ಲಿ ಸಹಮತ ವೇದಿಕೆ ಏರ್ಪಡಿಸಿದ್ದ ‘ಮತ್ತೆ ಕಲ್ಯಾಣ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದ ಅವರು, . ಅಂದಿನ ಕಲ್ಯಾಣ ಕ್ರಾಂತಿಗೆ ಕಾರಣವಾದದ್ದು ದೇವರು-ಧರ್ಮದ ಹೆಸರಿನಲ್ಲಿ ಪೂಜಾರಿಗಳು ನಡೆಸುತ್ತಿದ್ದ ಹುನ್ನಾರಗಳು ಮತ್ತು ಅಂದಿನ ಸಾಮಾಜಿಕ, ರಾಜಕೀಯ ಸ್ಥಿತಿಗತಿಗಳು ಕಾರಣವಾಗಿದ್ದವು ಎಂದರು. ಬಸವಣ್ಣನವರು ವಚನ ಸಾಹಿತ್ಯವನ್ನು ಉಳಿಸಲು ಮತ್ತು ಅವರ ಆಶಯಗಳಿಗೆ ಪಟ್ಟಭದ್ರ ಹಿತಾಸಕ್ತಿಗಳು ಹಿಂಸೆ ನೀಡಿದ ಕಾರಣ ಕಲ್ಯಾಣವನ್ನು ತೊರೆಯಬೇಕಾಗಿ ಬಂತು. ಜನರಲ್ಲಿ ಇರುವ ಮೌಡ್ಯ, ಕಂದಚಾರಗಳನ್ನು ದೂರ ಮಾಡಿ ಎಲ್ಲರೂ ಸಮಾನರು. ಮಾನವನ ಘನತೆ ಸಮಾನವಾದುದು ಎಂಬುದೇ ‘ಮತ್ತೆ ಕಲ್ಯಾಣ’ದ ಆಶಯವಾಗಿದೆ ಎಂದು ತಿಳಿಸಿದರು.
Related Articles
Advertisement
ಚಿಂತಕಿ ಗಂಗಾಂಬಿಕಾ ಬಸವರಾಜು ಮಾತನಾಡಿ, ಅಕ್ಕನಾಗಮ್ಮ ಅನುಭವ ಮಂಟಪದ ಆಧಾರ ಸ್ತಂಭವಾಗಿದ್ದವರು. ಕಲ್ಯಾಣದಲ್ಲಿ ಕ್ರಾಂತಿಯಾದ ಮೇಲೆ ಸಹೋದರ, ಮಗ ಮತ್ತು ಪತಿಯನ್ನು ಕಳೆದುಕೊಂಡರೂ ದೃತಿಗೆಡದೆ ವಚನ ಸಾಹಿತ್ಯವನ್ನು ರಕ್ಷಣೆ ಮಾಡುವುದಕ್ಕಾಗಿ ಕತ್ತಿ ಹಿಡಿದು ಹೋರಾಟ ಮಾಡಿದವರು. ಆಕೆ ಕಲ್ಯಾಣದ ಪ್ರೇರಕ, ಪೂರಕ ಶಕ್ತಿ. ಜೊತೆಗೆ ಅಕ್ಕನಾಗಮ್ಮ ವ್ಯಾಪಕವಾಗಿ ಧರ್ಮ ಪ್ರಚಾರ ಮಾಡಿ ಜ್ಞಾನ ರಕ್ಷಣೆ ಮಾಡಿದರು. ವಚನ ಸಾಹಿತ್ಯವಿಲ್ಲದಿದ್ದರೆ ಕನ್ನಡ ಸಾಹಿತ್ಯ ಬರಡಾಗುತ್ತಿತ್ತು. ಅಧ್ಯಾತ್ಮದಿಂದ ಮನಸ್ಸು ಪರಿವರ್ತನೆ ಸಾಧ್ಯ ಎಂದು ಭಾವಿಸಿದ್ದರು ಎಂದರು. ಚಿಂತಕ ಹಾಗೂ ಚಿತ್ರ ನಟ ಚೇತನ್ ಮಾತನಾಡಿ, ಒಳಗೊಳ್ಳುವಿಕೆ ಉದ್ದೇಶವೇ ‘ಮತ್ತೆ ಕಲ್ಯಾಣ’. ಶರಣರ ವಿಚಾರಧಾರೆಗಳು ಮತ್ತು ವಚನಗಳು ಇಂದಿಗೂ ಪ್ರಸ್ತುತವಾಗಿವೆ. 1400 ವರ್ಷಗಳ ಹಿಂದೆ ವೈದಿಕ ಶಾಹಿ ನಮ್ಮನ್ನು ಕತ್ತಲಲ್ಲಿ ಇಟ್ಟಿದ್ದರು. ಅಂದು ಮನುಸ್ಮೃತಿಗೆ ವಿರೋಧವಿರಲಿಲ್ಲ. 12ನೇ ಶತಮಾನದಲ್ಲಿ ಬಂದ ದಾರ್ಶನಿಕ ಬಸವಣ್ಣನವರು ಎಲ್ಲಾ ವರ್ಗದ ಜನರ ಮೇಲೆ ಬೆಳಕು ಚೆಲ್ಲಿದರು ಎಂದರು.
ದಿವ್ಯ ಸಾನ್ನಿಧ್ಯ ವಹಿಸಿದ್ದ ಸಾಣೇಹಳ್ಳಿ ಶ್ರೀ ಪಂಡಿತಾರಾಧ್ಯ ಸ್ವಾಮೀಜಿ ಮಾತನಾಡಿ, ಬಸವಾದಿ ಶರಣರು ತಳವರ್ಗದಲ್ಲಿ ಆತ್ಮ ವಿಶ್ವಾಸವನ್ನು ಮೂಡಿಸಿದವರು. ಅನುಭವ ಮಂಟಪದಲ್ಲಿ ಅವರ ವಿಚಾರಧಾರೆಗಳನ್ನು ಹೇಳುವ ಅವಕಾಶವನ್ನು ಕಲ್ಪಿಸಿದ್ದರು. ಅಂದು ಪಟ್ಟಭದ್ರ ಹಿತಾಸಕ್ತಿಗಳು ಶರಣ ಸಾಹಿತ್ಯವನ್ನು ಅಳಿಸಲು ಮುಂದಾಗಿದ್ದರು. ಅವುಗಳನ್ನು ನಶಿಸಿಹೋಗದಂತೆ ಜೀವಂತವಾಗಿಡುವ ಪ್ರಯತ್ನಗಳನ್ನು ಅನೇಕ ಮಹನೀಯರು ಮಾಡಿದ್ದಾರೆ. ಶರಣರ ವಿಚಾರಧಾರೆ, ವಚನ, ತತ್ವ-ಸಿದ್ಧಾಂತಗಳು, ಚಿಂತನೆಗಳನ್ನು ಒಳಗೊಳ್ಳಿಸಿಕೊಳ್ಳಬೇಕೆಂದು ಹೇಳಿದರು.
ಶಾಸಕ ಡಿ.ಎಸ್.ಸುರೇಶ್ ಸ್ವಾಗತಿಸಿದರು. ಶಾಸಕರಾದ ಸಿ.ಟಿ.ರವಿ, ಬೆಳ್ಳಿ ಪ್ರಕಾಶ್, ಮಾಜಿ ಶಾಸಕ ಎಸ್.ಎಂ.ನಾಗರಾಜ್, ಉದ್ಯಮಿ ಎಚ್.ಓಂಕಾರಪ್ಪ, ತಮ್ಮಯ್ಯ, ತಾಪಂ ಅಧ್ಯಕ್ಷೆ ಪದ್ಮಾವತಿ, ಉಪಾಧ್ಯಕ್ಷೆ ಮಂಜುಳಾ, ಕುರುಬ ಸಮಾಜದ ಮುಖಂಡ ಟಿ.ವಿ.ಶಿವಶಂಕರಪ್ಪ ಇನ್ನಿತರರು ಭಾಗವಹಿಸಿದ್ದರು.