Advertisement
ಸ್ವಾಮಿ ವಿವೇಕಾನಂದರು ಹೇಳಿದ್ದನ್ನು ಅಕ್ಷರಶಃ ಪಾಲಿಸಿದವರು ನಿವೇದಿತಾ. ವಿವೇಕಾನಂದರು ಗರ್ಭಗುಡಿಯ ಮೂರ್ತಿಯಾದರೆ, ನಿವೇದಿತಾ ಉತ್ಸವ ಮೂರ್ತಿ. ಗುರುವಿನ ಅಣತಿಯಂತೆ ತಮ್ಮ ದೇಶ ಬಿಟ್ಟು ಭಾರತಕ್ಕೆ ಸೇವೆ ಮಾಡಲು ಬಂದ ನಿವೇದಿತಾ ಕಾರ್ಯವನ್ನು ಸ್ಮರಿಸುವುದು ಭಾರತೀಯರೆಲ್ಲರ ಆದ್ಯ ಕರ್ತವ್ಯ ಎಂದರು.
Related Articles
Advertisement
ನಮ್ಮ ದೇಶದ ಹಿರಿಮೆ, ಸಂಸ್ಕೃತಿ ಸಂಪತ್ತನ್ನು ಅರಿತುಕೊಳ್ಳಲು ಸ್ವಾಮಿ ವಿವೇಕಾನಂದರ ಜೀವನ-ಸಾಧನೆ-ಚಿಂತನೆಗಳನ್ನು ಓದಬೇಕು ಎಂದು ಶ್ರೀ ಮಾತಾ ಆಶ್ರಮದ ಪೂಜ್ಯ ಮಾತಾಜಿ ತೇಜೋಮಯಿ ಹೇಳಿದರು. ವಿವೇಕಾನಂದರ ಸಾಹಿತ್ಯ ಓದಿದರೆ ಯಾವುದೇ ಕ್ಷೇತ್ರವಿರಲಿ ಅದ್ಭುತ ಆತ್ಮವಿಶ್ವಾಸದಿಂದ ಕೆಲಸ ಮಾಡಬಹುದು.
ಅವರ ಸಾಹಿತ್ಯ ಜೀವನಕ್ಕೆ ಪ್ರೇರಣೆ ನೀಡುತ್ತದೆ. ಯುವ ಜನತೆಯಲ್ಲಿ ಸಿಂಹಸದೃಶ ಶಕ್ತಿಯಿದೆ ಎಂದರು. ಸೋದರಿ ನಿವೇದಿತಾ ಪ್ರತಿಷ್ಠಾನದ ಪ್ರಿಯಾಶಿವಮೊಗ್ಗ ಮಾತನಾಡಿ, ಅಹಂಕಾರದ ನಾಶವಾದಾಗಲೇ ನಾವು ಜ್ಞಾನ ಪಡೆಯಲು ಸಾಧ್ಯ ಎಂಬುದನ್ನು ಅರಿಯಬೇಕು.
ಐರ್ಲೆಂಡ್‌ನ ಮಾರ್ಗರೇಟ್ ನೋಬೆಲ್ ಭಾರತಕ್ಕೆ ಬಂದು ನಿವೇದಿತಾ ಆಗಿ ಸಾಮಾಜಿಕ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆ ನೀಡಿದರು. ಭಾರತಕ್ಕೆ ಬಂದ ನಿವೇದಿತಾ ಭಗವದ್ಗೀತೆ, ವೇದ, ಪುರಾಣ ಬಗ್ಗೆ ತಿಳಿದು ಸರಳ ಜೀವನ ನಡೆಸಿ ಮಾದರಿಯಾದರು ಎಂದರು.
ಸೋದರಿ ನಿವೇದಿತಾ ಪ್ರತಿಷ್ಠಾನದ ರಾಜ್ಯ ಸಂಪರ್ಕ ಪ್ರಮುಖ ಸ್ವಾತಿ ಮಂಗಳೂರು ಮಾತನಾಡಿ, ಭಾರತೀಯ ಮಹಿಳೆಯರಿಗೆ ನಿರ್ಭಯತೆ ಹಾಗೂ ದೇಶಭಕ್ತಿ ಮೂಡಿಸುವಲ್ಲಿ ನಿವೇದಿತಾ ಪ್ರಮುಖ ಪಾತ್ರ ವಹಿಸಿದರು. ಅವರು ಮಾಡಿದ ಕಾರ್ಯ ಅಸಾಮಾನ್ಯವಾದುದು ಎಂದರು.
ನಂತರ ನಡೆದ ಸಂವಾದದಲ್ಲಿ ಚಕ್ರವರ್ತಿ ಸೂಲಿಬೆಲೆ ಉತ್ತರಿಸಿದರು. ಮಹಿಳಾ ಪದವಿ ವಿದ್ಯಾಲಯದ ಪ್ರಾಚಾರ್ಯ ಡಾ| ಅಕ್ಕಮಹಾದೇವಿ ನಾಡಗೌಡ ಅಧ್ಯಕ್ಷತೆ ವಹಿಸಿದ್ದರು. ಮಾತಾಜಿ ಅಮೂಲ್ಯಮಯಿ ಇದ್ದರು. ಡಾ| ಎಲ್.ಆರ್. ಅಂಗಡಿ ಸ್ವಾಗತಿಸಿದರು. ಸಾವಿತ್ರಿ ಚನ್ನೋಜಿ ನಿರೂಪಿಸಿದರು. ಪ್ರೊ| ಜಿ.ಎಸ್.ಗುಡಾರದ ವಂದಿಸಿದರು.