Advertisement
ಜೀವನದಲ್ಲಿ ನಾವೆಲ್ಲರೂ ನಿತ್ಯ ಪಯಣಿಗರು. ಕೆಲಸಕ್ಕೆ, ಕಾಲೇಜಿಗೆ ಅಥವಾ ಇನ್ಯಾವುದೋ ತೀರಕ್ಕೆ ನಮ್ಮನ್ನು ಮುಟ್ಟಿಸುವುದೇ ಈ ಪಯಣ. ಸ್ವಂತ ವಾಹನವನ್ನೋ, ಸಾರ್ವಜನಿಕ ವಾಹನವನ್ನೋ ಏರಿ ನಾವು ಅಲ್ಲಿಗೆ ತಲುಪ ಬಹುದಷ್ಟೇ. ಆದರೆ, ಪ್ರಯಾಣವಂತೂ ನಿತ್ಯ ನೂತನ. ಅದು ಯಾವತ್ತೂ ತನ್ನ ಹೆಸರು ಬದಲಿಸಿಕೊಳ್ಳೋದಿಲ್ಲ. ಇದೇ ಪಯಣ ನಮಗೆ ಹಲವು ನಂಟು ಬೆಸೆಯುವುದೂ ಉಂಟು. ನಮ್ಮ ಈ ಹಾದಿಯಲ್ಲಿ ಅನೇಕರು ಸಿಗುತ್ತಾರೆ, ಹೋಗುತ್ತಾರೆ. ಎಷ್ಟೋ ಜನರನ್ನು ಆ ಕ್ಷಣವೇ ಮರೆತುಬಿಡುತ್ತೇವೆ. ಕಣ್ಣು ಮುಚ್ಚಿ ಬಿಡುವುದರೊಳಗೆ, ಅವರ ಮುಖ ನಮ್ಮ ಸ್ಮತಿಯಿಂದ ಅಳಿಸಿ ಹೋಗಿರುತ್ತೆ. ಆದರೆ, ಒಬ್ಬ ಮಾತ್ರ ಎಂದಿಗೂ ಅಳಿಸಲಾಗದ ಚಿತ್ರ. ಆತ ನಾನಾ ಕತೆಯಾಗಿ ನಮ್ಮನ್ನು ಕಾಡುತ್ತಲೇ ಇರುತ್ತಾನೆ.
ಸದಸ್ಯರಂತೆಯೇ ಕಾಣಿಸುತ್ತಾರೆ. ಡೋರ್‌ನಲ್ಲಿ ನಿಂತವನಿಗೆ, “ಮೇಲೆ ಬನ್ನಿ ಸರ್’ ಅಂತ ವಿನಂತಿಸಿದರೆ, ಕಿಟಕಿಯಾಚೆಗೆ ಇಣುಕಿದ ಪಾಪುವಿಗೆ, “ಹೊರಗೆ ತಲೆ ಹಾಕೆºಡ ಪುಟ್ಟಾ…’ ಅಂತ ಮುದ್ದು ದನಿಯಲ್ಲಿಯೇ ಮನವಿ ಮಾಡ್ತಾನೆ. ಮೊನ್ನೆ ಹೀಗೇ ವಾಟ್ಸಾಪ್ ನೋಡುತ್ತಿರುವಾಗ, ಒಂದು ಮೆಸೇಜು ಕಣ್ಣಿಗೆ ಬಿತ್ತು. “ಟೆಕ್ಕಿಗಳು ತಮ್ಮ ಹೆಂಡತಿಯ ಮುಖ ನೋಡೋದೇ ವೀಕೆಂಡ್‌ನಲ್ಲಂತೆ’ ಅಂತ. ಅದಕ್ಕೆ ಒಂದಿಷ್ಟು ಮಂದಿ, ವ್ಹಾವ್, ಸೂಪರ್ ಅಂತೆಲ್ಲ ಹೊಗಳಿದ್ದರು. ಆಗ ನನಗೆ ಕಾಡಿದ್ದು, ಈ ಡ್ರೈವರ್‌ಗಳು. ಪಾಪ ಅಲ್ವಾ? ಇವರಿಗೂ ಸಂಸಾರ ಅಂತ ಇರುತ್ತೆ ಅಲ್ವಾ? ಹೊತ್ತಲ್ಲದ ಹೊತ್ತಲ್ಲಿ ಡ್ನೂಟಿ ಮುಗಿಸಿ, ಇವರು ತಮ್ಮ ಮನೆ ಬಾಗಿಲು ತಟ್ಟುವಾಗ ಅವರೆಲ್ಲ ಮಲಗಿರುತ್ತಾರೆ. ಹಾಸಿಗೆಯ ದಿಂಬಿಗೊರಗಿ, ಕಣ್ಮುಚ್ಚಿ ಬಿಡುವಷ್ಟರಲ್ಲಿ ನಸುಕು ನಗುತ್ತಾ ಅವನನ್ನು ಎಬ್ಬಿಸುತ್ತೆ. ಬೆಳಗ್ಗೆ ತಿಂಡಿ ತಿನ್ನುವಾಗ ಈ ಡ್ರೈವರ್‌ನ ಪುಟ್ಟ ಮಗಳು ಕೇಳ್ತಾಳೆ, “ಅಮ್ಮಾ…. ಪಪ್ಪಾ ಬಂದು ಹೋದ್ರಾ?’ ಅಂತ. ಅದನ್ನು ಕೇಳಿದ ಪತ್ನಿಯ ಕಣ್ಣಂಚಿನಲ್ಲಿ ನೀರು ಜಿನುಗುತ್ತೆ. ಆದರೆ, ಇದ್ಯಾವುದೂ ಸೋಷಿಯಲ್ ಮೀಡಿಯಾಗಳಲ್ಲಿ ಕತೆ ಆಗುವುದೇ ಇಲ್ಲ. ಕುಟುಂಬ ದೊಂದಿಗೆ ಕಳೆಯಲು, ಇವರಿಗೆ ರಜೆ ಅಂತ ಸಿಗೋದೇ, ಬಸ್ಸಿನ ಓನರ್ “ತಗೋ’ ಅಂತೆಳಿ ಕೊಟ್ಟಾಗ. ಇಲ್ಲವೇ ಭಾರತ್ ಬಂದೋ, ಕರ್ನಾಟಕ ಬಂದೋ ಇದ್ದಾಗಲಷ್ಟೇ. ಈ ಡ್ರೈವರ್‌ಗಳ ಕಷ್ಟಕ್ಕೆ ನೀವು ಎಂದಾದರೂ ಕಿವಿಯಾಗಿದ್ದೀರಾ? ಅದೇನೋ ಅಪಾಯ ತಡೆಯಲು ಈತ ಗಕ್ಕನೆ ಬ್ರೇಕ್ ಒತ್ತುತ್ತಾನೆ. ಆದರೆ, ಅದಕ್ಕೆ ಬೀಳುವ ಶಾಪಗಳೆಷ್ಟು ಗೊತ್ತಾ? “ಯಾವನೋ ಅವನು ಡೈವರು..?’, “ಈ ಡ್ರೈವರ್‌ಗೆ ಗಾಡೀನೆ ಓಡೊಕೆ ಬರೋಲ್ಲ’ ಅನ್ನೋ ವ್ಯಂಗ್ಯದ ಬಾಣಗಳು ಬೆನ್ನ ಹಿಂದೆ ನಾಟುತ್ತಿರೋದು ಗೊತ್ತಿದ್ದರೂ, ನಗುನಗುತ್ತಲೇ ಆತ ಗಾಡಿ ಓಡಿಸುತ್ತಿರ್ತಾನೆ. ನಮಗ್ಯಾವತ್ತೂ ಅನ್ನಿಸೋದೇ ಇಲ್ಲ, ನಮ್ಮೆಲ್ಲರ ಜೀವ ಆತನ ಕೈಯಲ್ಲಿ ಇರುತ್ತೆ ಅಂತ.
Related Articles
ಇಲ್ಲ…
Advertisement
ಒಮ್ಮೆ ಹೀಗೆ ಮಾತನಾಡುತ್ತಾ, ಒಬ್ಬ ಡ್ರೈವರ್ ಹೇಳಿದ ನೆನಪು… “ನಾನು ಹತ್ತನೇ ಕ್ಲಾಸಲ್ಲಿ 2 ಸಬೆjಕ್ಟ್ಮಾ ತ್ರ ಪಾಸ್’ ಅಂದ ಆತ “ಹೌದಾ? ಯಾಕೆ ಹಾಗಾಯ್ತು?’ ಅಂದೆ. ಅವನು ತನ್ನ ಆ ದಿನಗಳ ಬಡತನದ ಕತೆಗಳನ್ನು ಹೇಳುತ್ತಾ ಹೋದ. “ನನ್ನ ಅಮ್ಮ ನನ್ನನ್ನು ಬಿಟ್ಟು ಹೋಗಿ 25 ವರುಷಗಳಾದವು. ಆಗ ನಾನು 10ನೇ ಕ್ಲಾಸಿನ ಪರೀಕ್ಷೆಗೆ ಹೊರಡಲು ಅಣಿಯಾಗಿದ್ದೆ’ ಅಂದಾಗ, ಯಾಕೋ ನಾನೇ ಫೇಲ್ ಆದಂತೆ ಅನ್ನಿಸಿಬಿಟ್ಟಿತು. ಅಮ್ಮನಿಲ್ಲದ ಆ ಸಮಯ ನಿಜಕ್ಕೂ ಅಯೋಮಯ. ಹೀಗಿದ್ದೂ ಎರಡು ಸಬೆjಕ್ಟ್‌ನಲ್ಲಿ ಪಾಸ್ ಆಗಿದ್ದಾನಂದ್ರೆ, ನಿಜಕ್ಕೂ ಗ್ರೇಟೇ ಅಲ್ವೇ?
ಒಬ್ಬ ಡ್ರೈವರೇ ಏಕೆ, ನಾವು ನಮ್ಮ ಜೀವನದಲ್ಲಿ ಅನೇಕರಿಗೆ ಥ್ಯಾಂಕ್ಸ್ ಹೇಳಿರುವುದಿಲ್ಲ. ಮೈ ಕೊರೆಯುವ ಚಳಿಯಲ್ಲಿ, ಜಡಿ ಮಳೆಯಲ್ಲಿ, ಅದನ್ನೆಲ್ಲ ಲೆಕ್ಕಿಸದೇ ಮನೆ ಬಾಗಿಲಿಗೆ ಪೇಪರ್ ಹಾಕುವ ಹುಡುಗನ ಮುಖವನ್ನು ನಾವುನೋಡಿಯೇ ಇಲ್ಲ. ಕಸ ವಿಲೇವಾರಿ ಮ ಡುವವನ, ಕೊರಿಯರ್ ತಂದು ಕೊಡುವ ಹುಡುಗನಿಗೆ ನಾವ್ಯಾವತ್ತೂ ಸೆ„ಲೇ ಕೊಟ್ಟಿಲ್ಲ. ಎಟಿಎಂನಿಂದ ಸಾವಿರಾರು ರೂ. ದುಡ್ಡು ಬಿಡಿಸಿಕೊಂಡು, ಹಮ್ಮಿನಲ್ಲಿ ಮರಳುವಾಗ ಅಲ್ಲೇ ಬಾಗಿಲಲ್ಲಿ ನಿಂತ ಸೆಕ್ಯೂರಿಟಿ ಅಜ್ಜನಿಗೂ ಒಂದು ಥ್ಯಾಂಕ್ಸ್ ಹೇಳಿದವರಲ್ಲ, ನಾವು. ನಮ್ಗೆ ಗೊತ್ತು… ಆ ಥ್ಯಾಂಕ್ಸ್‌ಗೆ ಯಾವುದೇ ಕರೆನ್ಸಿ ಖರ್ಚಾಗೋದಿಲ್ಲ; ನಮ್ಮ ಡೇಟಾವೂ ಕರಗುವುದಿಲ್ಲ; ಜೇಬಿನಿಂದ ಹಣವೂ ಪುಸಕ್ಕನೆ ಜಾರಿ ಹೋಗುವುದಿಲ್ಲ; ಮಿಗಿಲಾಗಿ, ಜಿಎಸ್‌ಟಿಯೇ ಬೀಳ್ಳೋದಿಲ್ಲ… ಆದರೂ, ನಾವು ಕಂಜೂಸ್‌ಗಳು! ಯಾಕೋ ಗೊತ್ತಿಲ್ಲ.. ರಕ್ಷಿತಾ ಪ್ರಭು, ಉಡುಪಿ